ಗದಗ

ಸುದ್ದಿ ಸಂಕ್ಷೇಪ

Published On :

ಇಂದು ಪುಣ್ಯಾರಾಧನೆ
ಮುಂಡರಗಿ:  ಧಾರ್ಮಿಕ ಹಾಗೂ ಆಧ್ಯಾತ್ಮಿಕ ಲೋಕಕ್ಕೆ ಅಪಾರ ಕೊಡುಗೆ ನೀಡಿ ಪವಾಡ ಪುರುಷರಾಗಿದ್ದ ತಾಲೂಕಿನ ಡಂಬಳ ಗ್ರಾಮದ ಹಾಲೇಶ್ವರ ಮಠದ ಲಿಂ. ಶಿವಯ್ಯಜ್ಜನವರ ಹಾಗೂ ಲಿಂ. ಶಂಕ್ರಯ್ಯಜ್ಜ ಶ್ರೀಗಳ ಪುಣ್ಯಾರಾಧನೆಯು ಜ. 15ರಂದು ಜರುಗಲಿದೆ. ಅಂದು ಬೆಳಗ್ಗೆ 7.30 ರಿಂದ 9.30ರ ವರೆಗೆ ರಾಜಶೇಖರಯ್ಯ ಹಿರೇಮಠ ನೇತೃತ್ವದಲ್ಲಿ ಶಿವಯ್ಯಜ್ಜ ಹಾಗೂ ಶಂಕ್ರಯಜ್ಜನವರ ಗದ್ದುಗೆಗೆ ರುದ್ರಾಭಿಷೇಕ ಹಾಗೂ ವಿವಿಧ ಪೂಜಾ ಕಾರ್ಯಕ್ರಮ ಜರುಗಲಿವೆ. ಮಧ್ಯಾಹ್ನ 1.30 ಕ್ಕೆ ಮಹಾಪ್ರಸಾದ  ಜರುಗುವುದು. ಸಂಜೆ 5ಕ್ಕೆ ಶಿವಯ್ಯಜ್ಜ ಹಾಗೂ ಶಂಕ್ರಯ್ಯಜ್ಜನವರ ಭಾವಚಿತ್ರ ಹಾಗೂ ಪಲ್ಲಕ್ಕಿ ಮೆರವಣಿಗೆ ಹಾಲೇಶ್ವರ ಮಠದಿಂದ ನಡೆಯಲಿದ್ದು, ಪ್ರಮುಖ ಬೀದಿಗಳಲ್ಲಿ ಸಂಚರಿಸಲಿದೆ. ವಿವಿಧ ಡೊಳ್ಳಿನಮೇಳ, ಭಜನಾಮೇಳ ಸೇರಿದಂತೆ ಸಕಲ ವಾದ್ಯಗಳ ಮೆರವಣಿಗೆ ನಡೆಯಲಿದ್ದು, ಭಕ್ತಾದಿಗಳು ಪಾಲ್ಗೊಳ್ಳಲು ಪ್ರಕಟಣೆಯಲ್ಲಿ ತಿಳಿಸಿದೆ.
ಇಂದು ಕವಿಗೋಷ್ಠಿ
ನರಗುಂದ: ತಾಲೂಕಿನ ಭೈರನಹಟ್ಟಿ ಗ್ರಾಮದ ಗುರು ಬ್ರಹ್ಮಾನಂದ ಶಿವಾನುಭವ ಧರ್ಮ ಸಂಸ್ಥೆ ಹಾಗೂ ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ ಇವುಗಳ ಸಂಯುಕ್ತ ಆಶ್ರಯದಲ್ಲಿ ಜ. 15ರಂದು ಸಂಜೆ 7 ಗಂಟೆಗೆ 222 ನೇ ಮಾಸಿಕ ಶಿವಾನುಭವ, ರಾಷ್ಟ್ರಕವಿ ಜಿ.ಎಸ್. ಶಿವರುದ್ರಪ್ಪನವರಿಗೆ ನುಡಿನಮನ ಹಾಗೂ ಸಂಕ್ರಾಂತಿ ಕವಿಗೋಷ್ಠಿಯನ್ನು ಪಟ್ಟಣದ ದೊರೆಸ್ವಾಮಿ ವಿರಕ್ತಮಠದಲ್ಲಿ ಹಮ್ಮಿಕೊಳ್ಳಲಾಗಿದ್ದು, ಶಾಂತಲಿಂಗ ಶ್ರೀಗಳು ಸಾನ್ನಿಧ್ಯ ವಹಿಸುವರು. ಅತಿಥಿಗಳಾಗಿ ನಿವೃತ್ತ ಪ್ರಾಚಾರ್ಯ ಸಿ.ಎಸ್. ಸಾಲೂಟಗಿಮಠ, ಪ್ರಾ. ಆರ್.ಎಸ್.ಪವಾರ, ಎಸ್.ಎನ್. ಪೂಜಾರ, ಎಸ್.ಐ. ಜಕ್ಕಲಿ, ಉಪನ್ಯಾಸಕ ಎಂ.ಎಸ್. ಯಾವಗಲ್, ಹೆಬ್ಬಾಳ ವೀರೇಶ್ವರ ದೇವರು, ಕಸಾಪ ಅಧ್ಯಕ್ಷ ಪಿ.ಸಿ. ಕಲಹಾಳ, ಬೆಳವಲನಾಡು ಸಾಹಿತ್ಯ ಮತ್ತು ಸಾಂಸ್ಕೃತಿಕ ಸಂಘದ ಅಧ್ಯಕ್ಷ ಶಾಂತಕುಮಾರ ಭಜಂತ್ರಿ, ಆರ್.ಬಿ. ಚಿನಿವಾಲರ, ಎಂ.ಎಸ್. ಆರೆಬೆಂಚಿ, ವಿಜಯಲಕ್ಷ್ಮೀ ಕೆಂಚನಗೌಡ್ರ, ಬಸಮ್ಮ ಪಾಟೀಲ, ಕುಮಾರ ಹುಲಗೂರ ಉಪಸ್ಥಿತರಿರುವರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.