ಗಣರಾಜ್ಯೋತ್ಸವ ಕ್ರಿಕೆಟ್ ಕಪ್: ಫಲಿತಾಂಶ
ಗದಗ: ಗದಗ ಜಿಲ್ಲಾ ಸರ್ಕಾರಿ ನೌಕರರು ಹಾಗೂ ವೃತ್ತಿಪರರ ಮನೋರಂಜನಾ ಸಂಘಟನೆ ಇವರ ವತಿಯಿಂದ ನಡೆಯುತ್ತಿರುವ ಗಣರಾಜ್ಯೋತ್ಸವ ಕ್ರಿಕೆಟ್ ಕಪ್-2014ರ ಬುಧವಾರದ ಫಲಿತಾಂಶ ಇಂತಿದೆ.
ಮೊದಲನೇ ಪಂದ್ಯ: ಕಂದಾಯ ಇಲಾಖೆ ಹಾಗೂ ಸಿವಿಲ್ ಎಂಜಿನಿಯರ್ಸ್ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಸಿವಿಲ್ ಎಂಜಿನಿಯರ್ಸ್ ತಂಡ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿ ನಿಗದಿತ 12 ಓವರ್ಗಳಲ್ಲಿ 7 ವಿಕೆಟ್ ಕಳೆದುಕೊಂಡು 82 ರನ್ ಗಳಿಸಿತು. ತಂಡದ ಪರವಾಗಿ ಜಾನ್-34 ರನ್, ಇಬ್ರಾಹಿಂ 28 ರನ್ ಗಳಿಸಿದರು. ಸಾಧಾರಣ ಗುರಿಯನ್ನು ಬೆನ್ನಟ್ಟಿದ ಕಂದಾಯ ಇಲಾಖೆ ತಂಡ ನಿಗದಿತ 12 ಓವರ್ಗಳಲ್ಲಿ 3 ವಿಕೆಟ್ ಕಳೆದುಕೊಂಡು 66 ರನ್ ಗಳಿಸಿ 16 ರನ್ಗಳಿಂದ ಪರಾಭವಗೊಂಡಿತು. ತಂಡದ ಪರವಾಗಿ ಜೋಶಿ 25 ರನ್, ಅರುಣ ಡಿ. 15 ರನ್ಗಳಿಸಿ ಸ್ವಲ್ಪ ಮಟ್ಟಿಗೆ ಪ್ರತಿರೋಧ ಒಡ್ಡಿದರೂ ಸೋಲನ್ನು ತಪ್ಪಿಸಲಾಗಲಿಲ್ಲ. ಪಂದ್ಯ ಪುರುಷ ಪ್ರಶಸ್ತಿಗೆ ಜಾನ್ ಭಾಜನರಾದರು.
ಎರಡನೇ ಪಂದ್ಯ: ಆರೋಗ್ಯ ಇಲಾಖೆ ಮತ್ತು ನಗರಸಭೆ ತಂಡದ ನಡುವೆ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಆರೋಗ್ಯ ಇಲಾಖೆ ತಂಡ ನಿಗದಿತ 12 ಓವರ್ಗಳಲ್ಲಿ 86 ರನ್ ಗಳಿಸಿತು. ತಂಡದಲ್ಲಿ ರವಿ 25 ರನ್, ಗಿರೀಶ 27 ರನ್ ಗಳಿಸಿದರು. ನಗರಸಭೆ ತಂಡದವರು ಗುರಿಯನ್ನು ಬೆನ್ನಟ್ಟಿ ಕೇವಲ 10 ಓವರ್ಗಳಲ್ಲಿ 88 ರನ್ ಗಳಿಸಿ 6 ವಿಕೇಟ್ನಿಂದ ಜಯ ಸಾಧಿಸಿದರು. ತಂಡದ ಪರವಾಗಿ ಬಸವರಾಜ 24, ಕೃಷ್ಣಾ 25 ರನ್ ಗಳಿಸಿ ಮಿಂಚಿದರು. ಪಂದ್ಯ ಪುರುಷ ಪ್ರಶಸ್ತಿಗೆ ಕೃಷ್ಣಾ ಭಾಜನರಾದರು.
ಮೂರನೇ ಪಂದ್ಯ: ಹೆಸ್ಕಾಂ ಮತ್ತು ನ್ಯಾಯಾಂಗ ಇಲಾಖೆ ನಡುವೆ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಹೆಸ್ಕಾಂ ತಂಡವು ನಿಗದಿತ 12 ಓವರ್ಗಳಲ್ಲಿ 3 ವಿಕೆಟ್ ಕಳೆದುಕೊಂಡು 105 ರನ್ ಕಲೆ ಹಾಕಿತು. ತಂಡದ ಪರವಾಗಿ ಅಲಿ 45 ರನ್, ವೆಂಕಟೇಶ 37 ರನ್ ಗಳಿಸಿದರು. ನ್ಯಾಯಾಂಗ ಇಲಾಖೆ ತಂಡ ನಿಗದಿತ 12 ಓವರ್ಗಳಲ್ಲಿ ತನ್ನ 9 ವಿಕೆಟ್ ಕಳೆದುಕೊಂಡು ಕೇವಲ 60 ರನ್ ಗಳಿಸಲು ಸಾಧ್ಯವಾಯಿತು. ಹೆಸ್ಕಾಂ ತಂಡದ ಪರವಾಗಿ ಇಕ್ಬಾಲ್ ಮುಲ್ಲಾ 2 ಓವರ್ಗಳಲ್ಲಿ ಕೇವಲ 3 ರನ್ ನೀಡಿ 2 ವಿಕೆಟ್ ಪಡೆದು ಮಿಂಚಿದರು. ಇದರಿಂದ ಹೆಸ್ಕಾಂ ತಂಡ 55ರನ್ಗಳಿಂದ ಪಂದ್ಯವನ್ನು ತನ್ನದಾಗಿಸಿಕೊಂಡಿತು. ಪಂದ್ಯ ಪುರುಷ ಪ್ರಶಸ್ತಿಗೆ ಅಲಿ ಮಕಾನದಾರ ಭಾಜನರಾದರು.
ನಾಲ್ಕನೇ ಪಂದ್ಯ: ಪೊಲೀಸ್ ಇಲಾಖೆ ಮತ್ತು ಬಿ.ಎಸ್.ಎನ್.ಎಲ್. ತಂಡದ ನಡುವೆ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಬಿ.ಎಸ್.ಎನ್.ಎಲ್. ತಂಡ ನಿಗದಿತ 12 ಓವರ್ಗಳಲ್ಲಿ 7 ವಿಕೆಟ್ ಕಳೆದುಕೊಂಡು ಕೇವಲ 54 ರನ್ ಗಳಿಸಿತು. ತಂಡದ ಪರವಾಗಿ ಆಸಂಗಿ 22, ಇಕ್ಬಾಲ್ 16 ರನ್ ಗಳಿಸಿದರು. ಪೊಲೀಸ್ ತಂಡದ ಪರವಾಗಿ ಮಾರಕ ದಾಳಿ ನಡೆಸಿದ ಗಣೇಶ ಗ್ರಾಮಪುರೋಹಿತ ಕೇವಲ 5 ರನ್ ನೀಡಿ 2 ವಿಕೆಟ್ ಪಡೆದರು. ಸಣ್ಣ ಮೊತ್ತವನ್ನು ಬೆನ್ನತ್ತಿದ ಪೋಲಿಸ್ ತಂಡ ಕೇವಲ 7 ಓವರ್ಗಳಲ್ಲಿ 2 ವಿಕೆಟ್ ಕಳೆದುಕೊಂಡು ಗುರಿ ಮುಟ್ಟಿ ಉಪಾಂತ್ಯಕ್ಕೆ ಅರ್ಹತೆ ಪಡೆಯಿತು. ಪಂದ್ಯ ಪುರುಷ ಪ್ರಶಸ್ತಿಗೆ ಗಣೇಶ ಗ್ರಾಮಪುರೋಹಿತ ಭಾಜನರಾದರು. ಜ. 19 ರಂದು ಹೆಸ್ಕಾಂ ವಿರುದ್ಧ ಸಿವಿಲ್ ಎಂಜಿನಿಯರ್ಸ್ ಹಾಗೂ ಪೊಲೀಸ್ ವಿರುದ್ಧ ನಗರಸಭೆ ತಂಡಗಳ ನಡುವೆ ಸೆಮಿಫೈನಲ್ ಪಂದ್ಯಗಳು ಜರುಗಲಿವೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

