ದೇವರಲ್ಲಿ ನಂಬಿಕೆ ಇರಲಿ: ಹೊಸಮನಿ
ನರೇಗಲ್ಲ: ದೇವರಲ್ಲಿ ನಂಬಿಕೆ ಇಡಬೇಕು. ಏನಾದರೂ ಸಾಧಿಸಲು ಧೈರ್ಯ, ಎದೆಗಾರಿಕೆ ಇರಬೇಕು ಎಂದು ನಿವೃತ್ತ ಶಿಕ್ಷಕ ಹೊಸಮನಿ ಹೇಳಿದರು.
ಅವರು ಈಚೆಗೆ ಸಮೀಪದ ಜಕ್ಕಲಿ ಗ್ರಾಮದ ಸರ್ಕಾರಿ ಶಾಲೆಗಳ ಸಂಯುಕ್ತ ಆಶ್ರಯದಲ್ಲಿ ಗಾಂಧಿ ಭವನದಲ್ಲಿ ಆಯೋಜಿಸಿದ್ದ ಸ್ವಾಮಿ ವಿವೇಕಾನಂದರ 151ನೇ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. ಮಕ್ಕಳಲ್ಲಿ ಮಾತನಾಡುವ ಚಾತುರ್ಯ ಬೆಳೆಸಲು ಹಾಗೂ ಮಕ್ಕಳಲ್ಲಿ ಬೌದ್ಧಿಕತೆಯನ್ನು ಬಲವರ್ಧಿಸಲು ವಿವೇಕಾನಂದರ ಪುಸ್ತಕಗಳನ್ನು ಓದಲು ಶಿಕ್ಷಕ-ಶಿಕ್ಷಕಿಯರು ಪ್ರೇರೇಪಿಸಬೇಕು. ಅಂತಹ ಮಹಾನ್ ವ್ಯಕ್ತಿಯ ವ್ಯಕ್ತಿತ್ವ ಕುರಿತು ಪ್ರಬಂಧ ಸ್ಪರ್ಧೆ, ಆಶುಭಾಷಣ, ಚರ್ಚಾ ಸ್ಪರ್ಧೆಗಳನ್ನು ಏರ್ಪಡಿಸುವ ಮೂಲಕ ಮಕ್ಕಳಲ್ಲಿ ಅವರ ಆದರ್ಶ ವ್ಯಕ್ತಿತ್ವವನ್ನು ತುಂಬಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಕೆ.ಜಿ.ಎಸ್. ಶಾಲಾ ಮುಖ್ಯೋಪಾಧ್ಯಾಯಿನಿ ಡಿ.ಪಿ. ಹಿರೇಮಠ ಮಾತನಾಡಿ, ವಿವೇಕಾನಂದರು ತತ್ವ ಆದರ್ಶದ ವ್ಯಕ್ತಿಗಳು ಹಾಗೂ ಆಧ್ಯಾತ್ಮಿಕ ಚಿಂತಕರು. ಇವರ ತತ್ವದ ಮಾತುಗಳನ್ನು ಅನುಸರಿಸಿ ನಾವೆಲ್ಲ ಸತ್ಯ, ಧರ್ಮದಂತೆ ನಡೆದರೆ ಜಗತ್ತಿನಲ್ಲಿ ಅಧರ್ಮ ನಶಿಸಬಹುದು ಎಂದರು. ಎಂ.ಸಿ.ಎಸ್. ಶಾಲಾ ಮುಖ್ಯೋಪಾಧ್ಯಾಯ ಎಸ್.ಎಫ್. ಜಂಗಣ್ಣವರ ಮಾತನಾಡಿ, ಬಾಲಕ ನರೇಂದ್ರ ಸ್ವಾಮಿ ವಿವೇಕಾನಂದರಾದ ಪರಿಯನ್ನು ಹೇಳಿ ಅವರಲ್ಲಿದ್ದಂತಹ ಏಕಾಗ್ರತೆ, ಚಿಂತನಾಶಕ್ತಿ ಎಲ್ಲ ಮಕ್ಕಳಲ್ಲಿ ಬೆಳೆಯಬೇಕೆಂದು ಅಭಿಪ್ರಾಯಪಟ್ಟರು.
ಶಿಕ್ಷಕಿ ಎಫ್.ಎಂ. ದಾಸನಕೊಪ್ಪ, ವಿ.ಎ. ಕುಂಬಾರ, ಬಿ.ಎಫ್. ಜಂಗಣ್ಣವರ, ಎಸ್.ಎ. ಪಲ್ಲೇದ, ಆರ್.ಬಿ. ರಂಗಣ್ಣವರ ಮುಂತಾದವರು ಉಪಸ್ಥಿತರಿದ್ದರು. ಎಸ್.ಎಫ್. ಜಂಗಣ್ಣವರ ಸ್ವಾಗತಿಸಿದರು. ಎಸ್.ಎ. ಪಲ್ಲೇದ ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

