ಶೌಚಗೃಹ ನಿರ್ಮಾಣ: ಬೀದಿನಾಟಕ ಉದ್ಘಾಟನೆ
ಗದಗ: ಗ್ರಾಮೀಣ ಪ್ರದೇಶದಲ್ಲಿರುವ ಎಲ್ಲರೂ ಶೌಚಖಾನೆಗಳನ್ನು ನಿರ್ಮಿಸಿಕೊಳ್ಳುವ ಮೂಲಕ ಸ್ವಚ್ಛತೆಗೆ ಒತ್ತು ನೀಡಬೇಕು ಎಂದು ಜಯ ಕರ್ನಾಟಕ ಸಂಘಟನೆಯ ರಾಜ್ಯ ಗೌರವಾಧ್ಯಕ್ಷ ಈಶಪ್ಪ ನಾಯ್ಕರ ಹೇಳಿದರು. ಅವರು ಈಚೆಗೆ ತಾಲೂಕಿನ ಅಡವಿಸೋಮಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪಾಪನಾಶಿ ಗ್ರಾಮದ ಮಾರುತಿ ದೇವಸ್ಥಾನದಲ್ಲಿ ಗ್ರಾಪಂ, ತಾಪಂ, ಜಿಪಂ ವತಿಯಿಂದ ನಿರ್ಮಲ ಭಾರತ ಅಭಿಯಾನ ಯೋಜನೆಯಡಿ ಶೌಚಾಲಯ ನಿರ್ಮಾಣ ಕುರಿತು ಬೀದಿ ನಾಟಕದ ಮೂಲಕ ಜಾಗೃತಿ ಮೂಡಿಸುವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಜಿಪಂನಿಂದ ಆಗಮಿಸಿದ ಕಲಾ ತಂಡದವರು ನಾಟಕ ಹಾಗೂ ಜಾನಪದ ಹಾಡುಗಳ ಮುಖಾಂತರ ಗ್ರಾಮಸ್ಥರಿಗೆ ಶೌಚಾಲಯಗಳ ನಿರ್ಮಾಣದ ಕುರಿತು ತಿಳಿವಳಿಕೆ ನೀಡಿದರು. ಗ್ರಾಪಂ ಸದಸ್ಯರಾದ ರಾಮಪ್ಪ ವರವಿ, ಪ್ರಶಾಂತಗೌಡ ಪಾಟೀಲ, ನೀಲವ್ವ ಚಿಲವಾಡಗಿ, ರಾಮಣ್ಣ ಜೋಗಿನ, ತುಕಾರಾಮ ಹುಲಗಣ್ಣವರ, ಮಹಾಂತೇಶ ದೊಡವಾಡ, ಹನಮಂತ ಹೊಂಬಳ ಸೇರಿದಂತೆ ಗ್ರಾಪಂ ಸಿಬ್ಬಂದಿ, ಗ್ರಾಮಸ್ಥರು ಪಾಲ್ಗೊಂಡಿದ್ದರು.
20ರಿಂದ ಪರೀಕ್ಷೆ
ಗದಗ: ಜನವರಿ-2014ರ ವಾಣಿಜ್ಯ ಪರೀಕ್ಷೆಗಳು ಜ. 20ರಿಂದ 22 ರವರೆಗೆ ಸರ್ಕಾರಿ ಪ್ರೌಢಶಾಲೆ ಸೆಟ್ಲಮೆಂಟ್ ಬೆಟಗೇರಿಯಲ್ಲಿ ನಡೆಯುಲಿವೆ. ಪರೀಕ್ಷಾರ್ಥಿಗಳು ಈ ವಿಷಯ ಗಮನಿಸಲು ಗದಗ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯ ಪ್ರಾಚಾರ್ಯರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಗದಗ: ಯುವತಿ ಮಂಡಳ ಉದ್ಘಾಟನೆ
ಗದಗ: ಸ್ಥಳೀಯ 21ನೇ ವಾರ್ಡ್‌ನ ರಾಷ್ಟ್ರೀಯ ಯುವ ದಿನಾಚರಣೆ ಅಂಗವಾಗಿ ನೆಹರು ಯುವ ಕೇಂದ್ರ ಜನಸೇವಾ ವಿವಿಧೋದ್ದೇಶಗಳ ಸಂಸ್ಥೆ, ದುರ್ಗಾ ಶಕ್ತಿ ಮಹಿಳಾ ಮಂಡಳ, ಕಲ್ಪನಾ ಚಾವ್ಲಾ ಯುವತಿ ಮಂಡಳದ ಉದ್ಘಾಟನಾ ಸಮಾರಂಭ ನಡೆಯಿತು.
ಕಸಾಪ ಅಧ್ಯಕ್ಷ ಹಾಗೂ ನೆಹರು ಯುವ ಕೇಂದ್ರದ ಸದಸ್ಯ ಕಿಶೋರಬಾಬು ನಾಗರಕಟ್ಟಿ ಮಾತನಾಡಿ, ಸ್ವಾಮಿ ವಿವೇಕಾನಂದರು ಜಗತ್ತು ಕಂಡ ಶ್ರೇಷ್ಠ ವೀರ ಸನ್ಯಾಸಿ ಎಂದರು. ರೆಡ್‌ಕ್ರಾಸ್ ಸಂಸ್ಥೆಯ ಗೌರವ ಕಾರ್ಯದರ್ಶಿ ಡಾ. ಆರ್.ಎನ್. ಗೋಡೆಬೋಲೆ ಮಾತನಾಡಿ, ಈ ಭಾಗದ ಯುವಕ, ಯುವತಿಯರು ಸಮಾಜದ ಮುಖ್ಯವಾಹಿನಿಗೆ ಬರಬೇಕು. ಆರೋಗ್ಯವಂತ ಯುವಕ, ಯುವತಿಯರು ರಕ್ತದಾನ ಮಾಡಿ ಹಲವಾರು ಜೀವಿಗಳಿಗೆ ದಾರಿದೀಪವಾಗಬೇಕು. ತಾಯಿಯ ಮಾರ್ಗದರ್ಶನ ಮಕ್ಕಳಿಗೆ ಅತ್ಯಂತ ಅವಶ್ಯ ಎಂದರು. ನಗರಸಭೆ ಸದಸ್ಯೆ ಕಮಲಾ ಹಾದಿಮನಿ ಅಧ್ಯಕ್ಷತೆ ವಹಿಸಿದ್ದರು. ಪಾರ್ವತಿ ಪತ್ತಾರ ಮತ್ತು ನೆಹರು ಯುವ ಕೇಂದ್ರದ ಜಿಲ್ಲಾ ಯುವ ಸಮನ್ವಯ ಅಧಿಕಾರಿ ಬಿ. ಗೋವಿಂದಭಟ್ ಪ್ರಾಸ್ತಾವಿಕವಾಗಿ ಮಾತನಾಡಿದರು.
ರಾಷ್ಟ್ರ ಯುವ ಪ್ರಶಸ್ತಿ ಪುರಸ್ಕೃತ ಡಾ. ಅಂದಾನಯ್ಯ ಹಿರೇಮಠ, ಸರೋಜಾ ಟಿಕಾನದಾರ, ರೇಖಾ ಹಬೀಬ, ಶ್ರುತಿ ಹಬೀಬ, ವೀಣಾ ಬದಿ, ಜಯಲಕ್ಷ್ಮಿ ಹೊಸಮನಿ, ಕರುಣಾ ಸೋಮರಡ್ಡಿ ಮುಂತಾದವರು ಉಪಸ್ಥಿತರಿದ್ದರು. ಲಕ್ಷ್ಮೀ ಹಬೀಬ ಸ್ವಾಗತಿಸಿ, ನಿರೂಪಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

