ಮಾತಿಗೆ ಮಹತ್ವದ ಸ್ಥಾನ: ಅನ್ನದಾನೀಶ್ವರ ಶ್ರೀ
ಲಕ್ಷ್ಮೇಶ್ವರ: ಸಮಾಜದಲ್ಲಿರುವ ಪ್ರತಿಯೊಬ್ಬ ವ್ಯಕ್ತಿಯ ವ್ಯಕ್ತಿತ್ವ ಆತನು ಆಡುವ ವಿನಯಯುತ ಮಾತಿನಿಂದ ರೂಪಗೊಳ್ಳುತ್ತದೆ. ಮಾತಿಗೆ ಅತ್ಯಂತ ಮಹತ್ವದ ಸ್ಥಾನವಿದೆ ಎಂದು ನಾಡೋಜ ಜ. ಅನ್ನದಾನೀಶ್ವರ ಶ್ರೀಗಳು ಹೇಳಿದರು. ಅವರು ಈಚೆಗೆ ಸಂಕ್ರಾಂತಿ ನಿಮಿತ್ತ ಸೋಮವಾರ ಶಿಗ್ಲಿ ಗ್ರಾಮದ ಪವಾಡದವರ ಮನೆಯಲ್ಲಿ ನಡೆದ ಧರ್ಮಸಭೆಯಲ್ಲಿ ಮಾತನಾಡಿದರು. ಅಕ್ಷತಾ ಪ್ರಾರ್ಥಿಸಿದರು. ಸೋಮೇಶ ನಿರೂಪಿಸಿದರು. ಅನ್ನದಾನೀಶ ವಂದಿಸಿದರು.
ಕುಮಾರವ್ಯಾಸ ಕನ್ನಡದ ಅಗ್ರಗಣ್ಯ ಕವಿ: ಪ್ರಸನ್ನ
ಗದಗ: ಸಂಸ್ಕೃತ ಮಹಾಭಾರತದ ಕಥೆಯನ್ನು ಆಧರಿಸಿ ಕರ್ನಾಟಕ ಭಾರತ ಕಥಾ ಮಂಜರಿ ಎಂಬ ಬೃಹತ್ ಕಾವ್ಯವನ್ನು ಕನ್ನಡ ಸಾರಸ್ವಥ ಲೋಕಕ್ಕೆ ನೀಡಿದ ಖ್ಯಾತಿ ನಮ್ಮದು ಎಂದು ಬೆಂಗಳೂರಿನ ಡಾ. ಎ.ವಿ. ಪ್ರಸನ್ನ ಹೇಳಿದರು. ಈಚೆಗೆ ಅವರು ನಗರದ ವೀರನಾರಾಯಣ ದೇವಸ್ಥಾನದಲ್ಲಿ ಕುಮಾರವ್ಯಾಸ ಸಂಘದ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಗಿದ್ದ ವಿಶೇಷ ಸಂಗೀತ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಆಗಮಿಸಿ ಮಾತನಾಡಿದರು. ಮಹಾಭಾರತವನ್ನು ಶ್ರೀಸಾಮಾನ್ಯರಿಗೂ ಅರ್ಥವಾಗುವಂತೆ ರಚಿಸಿ ಕನ್ನಡ ಸಾಹಿತ್ಯ ಲೋಕವನ್ನು ಶ್ರೀಮಂತಗೊಳಿಸಿದ ಕುಮಾರವ್ಯಾಸನು ಜಗತ್ತಿನ ಶ್ರೇಷ್ಟ ಕವಿಗಳ ಸಾಲಿನಲ್ಲಿ ಅಗ್ರಗಣ್ಯನಾಗಿದ್ದಾನೆ ಎಂದರು. ನಿರ್ಮಲಾ ಪ್ರಸನ್ನ ಅವರಿಂದ ಗಮಕವಾಚನ ಜರುಗಿತು. ಅಶೋಕ ಪಾಟೀಲ ಪ್ರಾರ್ಥಿಸಿದರು. ಸಂಘದ ಅಧ್ಯಕ್ಷ ಎಂ.ಎಚ್. ಹರಿದಾಸ ಸ್ವಾಗತಿಸಿದರು. ಅ.ದ. ಕಟ್ಟಿಮನಿ ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

