ಗದಗ

ಸ್ವಾಮಿ ವಿವೇಕಾನಂದರು ವ್ಯಕ್ತಿಯಾಗದೇ ಶಕ್ತಿಯಾಗಿದ್ದರು

Published On :

ನರೇಗಲ್ಲ: ಸ್ವಾಮಿ ವಿವೇಕಾನಂದರು ಒಬ್ಬ ವ್ಯಕ್ತಿಯಾಗದೇ ಒಂದು ಶಕ್ತಿಯಾಗಿದ್ದರು ಎಂದು ಜ. ಪಂಚಾಚಾರ್ಯ ಶಿಕ್ಷಣ ಸಂಸ್ಥೆ ಅಧ್ಯಕ್ಷ ಹಾಗೂ ನರೇಗಲ್ಲ ಹಿರೇಮಠದ ಮಲ್ಲಿಕಾರ್ಜುನ ಶ್ರೀಗಳು ಹೇಳಿದರು. ಅವರು ಈಚೆಗೆ ಸ್ಥಳೀಯ ರೇಣುಕಾಚಾರ್ಯ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಿದ್ದ ಸ್ವಾಮಿ ವಿವೇಕಾನಂದರ 151ನೇ ಜಯಂತಿ ಹಾಗೂ ಸೊಲಗಿಯ ಸಿದ್ದರಾಮೇಶ್ವರರ 841ನೇ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.  ರೇಣುಕಾಚಾರ್ಯ ಪ್ರಾಥಮಿಕ ಶಾಲೆ ಅಡಳಿತ ಮಂಡಳಿ ಸದಸ್ಯ ಈಶ್ವರ ಬೆಟಗೇರಿ ಮಾತನಾಡಿದರು. ಶಾಲೆಯ ಸಹ ಶಿಕ್ಷಕ ವಿ.ಎಸ್. ನಾಗಟಾನ ಪ್ರಾಸ್ತಾವಿಕ ಮಾತನಾಡಿದರು. ಶರಣಪ್ಪ ಜುಟ್ಲದ, ಪ್ರದಾನ ಗುರುಮಾತೆ ನಿರ್ಮಲಾ ಹಿರೇಮಠ ಹಾಗೂ ಎಲ್ಲ ಸಹ ಶಿಕ್ಷಕಿಯರು ಪಾಲ್ಗೊಂಡಿದ್ದರು. ಶಿಕ್ಷಕಿ ರತ್ನಾ ಕುರ್ತಕೊಟಿ ಸ್ವಾಗತಿಸಿದರು. ಜಯಾ ಗಂಗರಗೊಂಡ ನಿರೂಪಿಸಿ, ವಂದಿಸಿದರು.



ಮುಗಿಲು ಮುಟ್ಟಿದ ಆಕ್ರಂದನ


ನರಗುಂದ:  ತಾಲೂಕಿನ ಮದ್ಗುಣಕಿ ಗ್ರಾಮದ ಪಕ್ಕದಲ್ಲಿ ವರ್ಷದ ಆರಂಭದಲ್ಲಿ ದೊಡ್ಡ ಅಪಘಾತ ಸಂಭವಿಸಿದೆ. ಗೋಕಾಕ ತಾಲೂಕಿನ ಉಗರಹಟ್ಟಿ ಗ್ರಾಮದವರು ಸಿಂಧನೂರು ತಾಲೂಕಿನ ಸಿದ್ಧ ಪರ್ವತದ ಅಂಭಾಭವಾನಿ ದರ್ಶನ ಮಾಡಿಕೊಂಡು ಬರುತ್ತಿದ್ದರು. ಇನ್ನು ರೋಣ ಪಟ್ಟಣದವರೂ ಕೂಡ ಸುಕ್ಷೇತ್ರ ಯಲ್ಲಮ್ಮದೇವಿ ಜಾತ್ರೆ ಮುಗಿಸಿಕೊಂಡು ತಮ್ಮ ತಮ್ಮ ಊರುಗಳಿಗೆ ಮರಳುವ ಸಮಯದಲ್ಲಿ ಶುಕ್ರವಾರ ಸಂಜೆ 2 ಕ್ರೂಸರ್ ಮಧ್ಯೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಸ್ಥಳದಲ್ಲಿಯೇ ಗೋಕಾಕ ತಾಲೂಕಿನ ಉಗರಹಟ್ಟಿ ಗ್ರಾಮದ ರಾಘು ಪಾಟೀಲ (32), ದಿನೇಶ ಬಂಡಿ (50), ಸಿದ್ಧಪ್ಪ ಕೊಳವಿ (50), ಸಿದ್ಧಪ್ಪ ಮೊದಲಭಾವಿ (22), ಚಾಲಕ ಸಂಜು ಗೋರನ್ನವರ (24) ಮೃತಪಟ್ಟಿದ್ದಾರೆ. ಅಪಘಾತದಲ್ಲಿ ಮೃತಪಟ್ಟ ಸುದ್ದಿ ತಿಳಿಯುತ್ತಿದ್ದಂತೆ ಕುಟುಂಬ ಸದಸ್ಯರ ಆಕ್ರಂದನ ಮುಗಿಲು ಮುಟ್ಟಿದೆ. ರಮೇಶ ತಿಗಡಿ, ಮಾಯಪ್ಪ ಜಕಬಾಳ, ಮಂಜು ಆಡಿನ, ಮಹಾದೇವಿ ಶಿರಸಂಗಿ, ರಂಗನಾಥ ಕೊಳವಿ, ಲಕ್ಷ್ಮಣ ಬಣ್ಣದ, ಶಿವಾನಂದ ಮಟ್ಟನ್ನವರ, ಹನುಮಂತ ಗೌಡರ, ಮಹಾದೇವ ಕಿಚ್ಚಡಿ, ಹನುಮಂತ ಕಿಚ್ಚಡಿ, ಮುತ್ತಪ್ಪ ಕಡ್ಡರೊಟಿ, ಭೀಮೇಶ ಹುಲಕೇರಿ, ಸಿದ್ದಪ್ಪ ಶಿರಸಂಗಿ, ಸದಾಶಿವ ಮುರ್ಕ್ಕಿಭಾವಿ, ರೋಣದ ಸುರೇಶ ಗಾಣಿಗೇರ, ಮಂಜುಳಾ ನಡೆಗರ, ಅಕ್ಕಮ್ಮ ಸಂಗಳ, ಮುತ್ತಪ್ಪ ಗಾಣಿಗೇರ, ಜಗದೀಶ ಗಾಣಿಗೇರ, ಐಶ್ಚರ್ಯ ಸಂಗಳ, ಮಹಾದೇವಿ ಗಾಣಿಗೇರ, ಕವಿತಾ ಹರನಹೊಳಿ (ಹಳ್ಳನ), ಕಿರಣ ಕೋಟಿ, ಬಸಮ್ಮ ಸಂಗಳ, ಸಂಗಮ್ಮ ಗಾಣಿಗೇರ, ಫಕೀರೇಶ ಸಂಗಳ, ರೇಣುಕಾ ಗಾಣಿಗೇರ ಇವರಿಗೆ ತೀವ್ರ ಸ್ವರೂಪದ ಗಾಯಗಳಾಗಿದ್ದು, ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕಿಮ್ಸ್ಗೆ ದಾಖಲಿಸಲಾಗಿದ್ದು, ಇವರಲ್ಲಿ ಕೆಲವರು ಜೀವನ್ಮರಣದ ಮಧ್ಯೆ ಹೋರಾಟ ನೆಡಸುತ್ತಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.