ಸಚಿವ ತರೂರ ಭಾವಚಿತ್ರ ದಹಿಸಿ ಆಕ್ರೋಶ
ಕನ್ನಡಪ್ರಭ ವಾರ್ತೆ, ಗದಗ, ಜ. 19
ಕೇಂದ್ರ ಮಾನವ ಸಂಪನ್ಮೂಲ ಸಚಿವ ಶಶಿ ತರೂರ ಪತ್ನಿ ಸುನಂದಾ ಪುಷ್ಕರ ಸಾವಿನ ಪ್ರಕರಣವನ್ನು ಕೇಂದ್ರ ಸರ್ಕಾರ ಸಿಬಿಐ ತನಿಖೆಗೆ ಒಳಪಡಿಸಬೇಕೆಂದು ಆಗ್ರಹಿಸಿ ಶ್ರೀರಾಮ ಸೇನೆಯ ನೂರಾರು ಕಾರ್ಯಕರ್ತರು ಭಾನುವಾರ ಹುಯಿಲಗೋಳ ನಾರಾಯಣರಾವ್ ವೃತ್ತದಲ್ಲಿ ಶಶಿ ತರೂರ ಭಾವಚಿತ್ರ ದಹಿಸಿ ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಶ್ರೀರಾಮ ಸೇನೆಯ ಸಂಚಾಲಕ ರಾಜೂ ಖಾನಪ್ಪನವರ, ಸುನಂದಾ ಪುಷ್ಕರ ಸಾವು ಅಸಹಜ. ಸುನಂದಾ ಅವರ ದೇಹದ ವಿವಿಧ ಭಾಗಗಳಲ್ಲಿ ಗಾಯಗಳಾಗಿವೆ ಎಂದು ವೈದ್ಯಕೀಯ ಮೂಲಗಳು ತಿಳಿಸಿವೆ. ಈ ಪ್ರಕರಣವನ್ನು ಸಿಬಿಐ ತನಿಖೆಗೆ ಒಳಪಡಿಸಬೇಕು. ಸಚಿವ ತರೂರ ಸದಾ ಒಂದಿಲ್ಲೊಂದು ವಿವಾದದಲ್ಲಿ ಸಿಲುಕುವ ಮೂಲಕ ಸುದ್ದಿ ಮಾಧ್ಯಮದಲ್ಲಿ ಪ್ರಚಾರ ಗಿಟ್ಟಿಸುವ ವ್ಯಕ್ತಿಯಾಗಿದ್ದಾರೆ.
ಅವರನ್ನು ಕೂಡಲೇ ಸಚಿವ ಸಂಪುಟದಿಂದ ಕೈಬಿಡಬೇಕು. ಕೇಂದ್ರ ಸರ್ಕಾರದ ವಿವಿಧ ಸಚಿವರಿಂದ ಅನಾಚಾರ, ಅನ್ಯಾಯಗಳು ನಡೆಯುತ್ತಲೇ ಇವೆ ಎಂದು ಕಿಡಿಕಾರಿದರು.
ಪ್ರತಿಭಟನೆಯಲ್ಲಿ ಶಿವಕುಮಾರ ಮಿಟ್ಟಿಮಠ, ರಮೇಶ ಹೊಸಳ್ಳಿ, ಸಂಜೀವ ಸೂರ್ಯವಂಶಿ, ಸುರೇಶ ಹಾದಿಮನಿ, ಮುತ್ತಣ್ಣ ಭರಡಿ, ಈರಣ್ಣ ಬಳ್ಳಾರಿ, ನಾಗರಾಜ ಗದಗ, ಅನೀಲ ನಾಕೋಡ, ಬಾಬಾಸಾ ಬಾಕಳೆ, ಮಾಧವಸಾ ಕಲಬುರ್ಗಿ, ಕೀಶೋರಸಾ ಪವಾರ, ಈರಣ್ಣ ಕುರುಬನಾಳ, ಪ್ರವೀಣ ಅಪ್ಪೂಜಿ, ಆನಂದ ಹೊನ್ನಗುಡಿ, ಈರಣ್ಣ ಗಾಣಿಗೇರ, ವಿನೋದ ಹುಯೀಲಗೋಳ, ಹರೀಶ ಕಮ್ಮಾರ, ಸಚ್ಚಿನಸಾ ಖೋಡೆ, ರಾಜಣಸಾ ಶಿದ್ಲಿಂಗ, ಪವನಸಾ ಬಾಕಳೆ, ವಿಶ್ವನಾಥ ಅಂಗಡಿ, ರಾಜೀವ ಗದ್ದಿ ಮುಂತಾದವರು ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

