ಗದಗ

ಸುದ್ದಿಸಂಕ್ಷೇಪ

Published On :

ಕೋಡಿಕೊಪ್ಪದಲ್ಲಿ ಎನ್ನೆಸ್ಸೆಸ್ ವಿಶೇಷ ಶಿಬಿರ
ನರೇಗಲ್ಲ: ವಿದ್ಯಾರ್ಥಿಗಳು ಗ್ರಾಮೀಣ ಸಂಪ್ರದಾಯಗಳನ್ನು ಅರಿತುಕೊಳ್ಳಲು, ಪರೋಪಕಾರ ಗುಣ, ಸೇವಾ ಮನೋಭಾವನೆ, ಗುರುಹಿರಿಯರಿಗೆ ಗೌರವ, ಪರಿಸರ ಕಾಳಜಿ ಮುಂತಾದವುಗಳ ಬಗ್ಗೆ ಅರಿತುಕೊಳ್ಳಲು ರಾಷ್ಟ್ರೀಯ ಸೇವಾ ಯೋಜನೆ ಸಹಾಯಕಾರಿಯಾಗಲಿದೆ ಎಂದು ಕರವೇ ತಾಲೂಕು ಅಧ್ಯಕ್ಷ ನಿಂಗಪ್ಪ ಹೊನ್ನಾಪುರ ಆಶಿಸಿದರು.
ಅವರು ಈಚೆಗೆ ಸಮೀಪದ ಕೋಡಿಕೊಪ್ಪ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಎಸ್‌ಎಂಬಿಕೆ ಸರ್ಕಾರಿ ಪ್ರಥಮದರ್ಜೆ ಕಾಲೇಜು ವತಿಯಿಂದ ಆಯೋಜಿಸಿದ್ದ ರಾಷ್ಟ್ರೀಯ ಸೇವಾ ಯೋಜನೆಯ 7 ದಿನಗಳ ವಿಶೇಷ ಶಿಬಿರದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು. ಶಾಲಾ ಕಟ್ಟಡದ ಭೂದಾನಿ ಹನುಮಂತಪ್ಪ ಕಳಕೊಣ್ಣವರ ಪುತ್ರ ಅಶೋಕ ಕಳಕೊಣ್ಣವರ ಕಾರ್ಯಕ್ರಮ ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ಪಪಂ ಅಧ್ಯಕ್ಷೆ ಬಸಮ್ಮ ಲಕ್ಕನಗೌಡ್ರ ವಹಿಸಿದ್ದರು. ಬಿ.ಡಿ. ನಾಶಿಪುಡಿ, ಶಿವಬಸಯ್ಯ ಕೊರಧಾನ್ಯಮಠ, ಎನ್‌ಎಸ್‌ಎಸ್ ಕಾರ್ಯಕ್ರಮಾಧಿಕಾರಿ ಅಂಜನಮೂರ್ತಿ ಕೆ.ಎಚ್., ಈ.ಆರ್. ಲಗಳೂರ, ದೈಹಿಕ ನಿರ್ದೇಶಕಿ ಕೆ.ಆರ್. ಪಾಟೀಲ, ಬಸವರಾಜ ಬಿ., ಶಶಿಧರ, ಬಾಲಕೃಷ್ಣ ಉಪಾಧ್ಯ, ಲಕ್ಷ್ಮೀ ನಾಗರಾಳ ಮುಂತಾದವರು ಉಪಸ್ಥಿತರಿದ್ದರು. ಡಾ. ಹನುಮಗೌಡ ಸಿ. ಸ್ವಾಗತಿಸಿದರು. ವಿದ್ಯಾ ಮಾವಿನಕಾಯಿ ಕಾರ್ಯಕ್ರಮ ನಿರೂಪಿಸಿದರು. ವೆಂಕಟೇಶ ಕಟ್ಟಿಮನಿ ವಂದಿಸಿದರು.

ನಾಳೆ ಚೌಡಯ್ಯ ಭಾವಚಿತ್ರ ಮೆರವಣಿಗೆ
ಗದಗ: ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ನಿಜಶರಣ ಅಂಬಿಗರ ಚೌಡಯ್ಯನವರ ಸೇವಾಸಂಸ್ಥೆ ಗದಗ ಇವುಗಳ ಆಶ್ರಯದಲ್ಲಿ ಜ. 21ರ ಬೆಳಗ್ಗೆ 9ಕ್ಕೆ ಅಂಬಿಗರ ಚೌಡಯ್ಯನವರ ಜಯಂತಿ ಅಂಗವಾಗಿ ನಗರದ ಉಡಚಮ್ಮದೇವಿ ದೇವಸ್ಥಾನದಿಂದ ಜ. ತೋಂಟದಾರ್ಯ ಮಠದವರೆಗೆ 201 ಕಂಭಮೇಳ ಹಾಗೂ ಅಂಬಿಗರ ಚೌಡಯ್ಯ ಭಾವಚಿತ್ರ ಮೆರವಣಿಗೆ ನೆರವೇರಲಿದೆ ಎಂದು ಗದಗ ಜಿಲ್ಲಾ ನಿಜಶರಣ ಅಂಬಿಗರ ಚೌಡಯ್ಯನವರ ವಿವಿಧೋದ್ದೇಶಗಳ ಸೇವಾ ಸಂಸ್ಥೆಯ ಅಧ್ಯಕ್ಷ ಬಿ.ಎನ್. ಯರನಾಳ ಹೇಳಿದರು. ಅವರು ಭಾನುವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಸಮಾಜ ಬಾಂಧವರು ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಕೋರಿದರು.  ಲಕ್ಷ್ಮಣ ಬಾರ್ಕಿ, ಎ.ಸಿ. ಬೆಳ್ಳಿಕಟ್ಟಿ, ನಿಂಗಪ್ಪ ಜಾಲಗಾರ, ಈಶಪ್ಪ ಮಸನದ, ಯಲ್ಲಪ್ಪ ಸಂಗಟಿ, ಬಿ.ವೈ. ಬಾರಕೇರ, ವಾಸು ಲಕ್ಷ್ಮೇಶ್ವರ, ಹುಲ್ಲಪ್ಪ ಬಾರಕೇರ, ಚಂದ್ರಶೇಖರ ಪೂಜಾರ, ವಾಸು ಬಾರಕೇರ, ದಿಲೀಪ ಮುಂಡರಗಿ, ಎಚ್.ಜಿ. ಆದಪ್ಪನವರ, ಬಸವರಾಜ ಗುಡಿಸಾಗರ, ಸೋಮಶೇಖರ ಪೂಜಾರ, ಸಿದ್ರಾಮ ಬಾರಕೇರ, ಪರಶುರಾಮ ಜೋಗಿನ, ಎಚ್.ವೈ. ಜೀವರ್ಗಿ ಮುಂತಾದವರು ಉಪಸ್ಥಿತರಿದ್ದರು.

ಇಂದು ಸಮ್ಮೇಳನ ಮುಕ್ತಾಯ
ಲಕ್ಷ್ಮೇಶ್ವರ:  ಪಟ್ಟಣದ ಬಿಸಿಎನ್ ವಿದ್ಯಾ ಸಂಸ್ಥೆಗಳ ಮಹಾ ಸಮ್ಮೇಳನದ ಮುಕ್ತಾಯ ಸಮಾರಂಭವು ಜ. 20ರ ಸಂಜೆ 3.30ಕ್ಕೆ ಜರುಗಲಿದೆ. ಸಾನ್ನಿಧ್ಯವನ್ನು ಸವಣೂರಿನ ದೊಡ್ಡಹುಣಸೆ ಕಲ್ಮಠದ ಚೆನ್ನಬಸವ ಸ್ವಾಮಿಗಳು ವಹಿಸುವರು.  ನವಲಗುಂದದ ಶಾಸಕ ಎನ್.ಎಚ್. ಕೋನರೆಡ್ಡಿ, ವಿಪ ಸದಸ್ಯ ಸೋಮಣ್ಣ ಬೇವಿನಮರದ, ಮಾಜಿ ಶಾಸಕ ಜಿ.ಎಂ. ಮಹಾಂತಶೆಟ್ಟರ, ಜಿ.ಎಸ್. ಗಡ್ಡದೇವರಮಠ, ಎಸ್.ಎನ್. ಪಾಟೀಲ, ರಾಮಣ್ಣ ಲಮಾಣಿ, ಜಿಪಂ ಸದಸ್ಯ ಹೇಮಗಿರೀಶ ಹಾವಿನಾಳ, ಅಶೋಕ ಹಳ್ಳೆಪ್ಪನವರ, ಉಪನಿರ್ದೇಶಕರು ಪ.ಪೂ. ಇಲಾಖೆಯ ಬಿ.ಎಸ್. ಗೌಡರ, ಸಂಸ್ಥೆಯ ಆಡಳಿತಾಧಿಕಾರಿ ಜಿ.ಎಸ್. ಮಹಾಜನಶೆಟ್ಟರ ಆಗಮಿಸುವರು  

ಇಂದು ವೇಮನರ ಜಯಂತಿ
ನರಗುಂದ:  ತಾಲೂಕು ರಡ್ಡಿ ಕ್ಷೇಮಾಭಿವೃದ್ಧಿ ಸಂಘ ಹಾಗೂ ಹೇಮವೇಮನ ಸೇವಾ ಪ್ರತಿಷ್ಠಾನ ಕುರುಗೋವಿನಕೊಪ್ಪ ಇವರ ಸಂಯುಕ್ತ ಆಶ್ರಯದಲ್ಲಿ ಮಹಾಯೋಗಿ ವೇಮನರ 602ನೇ ಜಯಂತ್ಯುತ್ಸವವನ್ನು ಜ. 20 ಮಧ್ಯಾಹ್ನ 2ಕ್ಕೆ ಏರ್ಪಡಿಸಲಾಗಿದೆ. ಈ ಕಾರ್ಯಕ್ರಮಕ್ಕೆ ಯರೇಹೊಸಳ್ಳಿ ಮಹಾಯೋಗಿ ವೇಮನ ಸಂಸ್ಥಾನಮಠ ಹೇಮರಡ್ಡಿ ಮಲ್ಲಮ್ಮರಡ್ಡಿ ಗುರು ಪೀಠದ ವೇಮಾನಾನಂದ ಶ್ರೀಗಳು, ಪತ್ರೀವನ ಮಠದ ಸಿದ್ದವೀರ ಶ್ರೀಗಳು, ಖಜ್ಜಡೋಣೆ ಅವಧೂತ ಆಶ್ರಮ ಕೃಷ್ಣ ಶಾಸ್ತ್ರಿಗಳು, ಕುರುವಿನಕೊಪ್ಪದ ಚಂದ್ರಶೇಖರಯ್ಯ ಹಿರೇಮಠ, ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ ರಾಜ್ಯ ಸಚಿವ ಎಚ್.ಕೆ. ಪಾಟೀಲ, ಐಟಿಬಿಟಿ ಹಾಗೂ ಯೋಜನೆ ಸಚಿವ ಎಸ್.ಆರ್. ಪಾಟೀಲ, ಶಾಸಕ ಬಿ.ಆರ್. ಯಾವಗಲ್, ರೋಣ ಶಾಸಕ ಜಿ.ಎಸ್. ಪಾಟೀಲ, ಬೀಳಗಿ ಶಾಸಕ ಜಿ.ಟಿ. ಪಾಟೀಲ, ನವಲಗುಂದ ಶಾಸಕ ಎನ್.ಎಚ್. ಕೋನರಡ್ಡಿ, ಸಂಸದ ಪಿ.ಸಿ. ಗದ್ದಿಗೌಡ್ರ, ರಾಮದುರ್ಗ ಶಾಸಕ ಎ.ಎಂ. ಪಟ್ಟಣ, ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ, ಶ್ರೀನಿವಾಸ ಮಾನೆ, ನಾಗರಾಜ ಛಬ್ಬಿ, ಮಾಜಿ ಸಚಿವ ಅಜಯಕುಮಾರ ಸರನಾಯ್ಕ, ಮಾಜಿ ಸಚಿವ ಸಿ.ಸಿ. ಪಾಟೀಲ, ಸವದತ್ತಿ ಮಾಜಿ ಶಾಸಕ ಆರ್.ವಿ. ಪಾಟೀಲ, ರಾಮದುರ್ಗ ಮಾಜಿ ಶಾಸಕ ಆರ್.ಎಸ್. ಪಾಟೀಲ, ಹುನಗುಂದ ಮಾಜಿ ಶಾಸಕ ದೊಡ್ಡನಗೌಡ ಪಾಟೀಲ, ವೈ.ಬಿ. ಆಲೂರ, ರಮೇಶಗೌಡ ಕರಕನಗೌಡ್ರ, ಮತ್ತಿತರ ಗಣ್ಯರು ಹಾಗೂ ಹೇಮ ವೇಮ ಸೇವಾ ಪ್ರತಿಷ್ಠಾನ ಸಮಿತಿ ಪದಾಧಿಕಾರಿಗಳು ಭಾಗವಹಿಸುವರು ಎಂದು ಪ್ರಕಟಣೆ ತಿಳಿಸಿದೆ.   

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.