ಎಂಜಿನಿಯರ್ಸ್-ಪೊಲೀಸ್ ತಂಡ ಫೈನಲ್ಗೆ
ಕನ್ನಡಪ್ರಭ ವಾರ್ತೆ, ಗದಗ, ಜ. 20
ಗದಗ ಜಿಲ್ಲಾ ಸರ್ಕಾರಿ ನೌಕರರು ಹಾಗೂ ವೃತ್ತಿಪರರ ಮನೋರಂಜನಾ ಸಂಘ ಇವರ ಆಶ್ರಯದಲ್ಲಿ ನಡೆಯುತ್ತಿರುವ ಗಣರಾಜ್ಯೋತ್ಸವ ಕಪ್-2014 ಕ್ರಿಕೆಟ್ ಪಂದ್ಯಾವಳಿಯ ಭಾನುವಾರದ ಫಲಿತಾಂಶ.
ಮೊದಲನೇಯ ಉಪಾಂತ್ಯ: ಸಿವಿಲ್ ಎಂಜಿನಿಯರ್ಸ್ ಹಾಗೂ ಹೆಸ್ಕಾಂ ನಡುವೆ ನಡೆದ ಮೊದಲ ಉಪಾಂತ್ಯ ಪಂದ್ಯದಲ್ಲಿ ಟಾಸ್ ಗೆದ್ದು ಸಿವಿಲ್ ಎಂಜಿನಿಯರ್ಸ್ ತಂಡ ಬೌಲಿಂಗ್ ಆಯ್ಕೆ ಮಾಡಿಕೊಂಡು ಹೆಸ್ಕಾಂ ತಂಡವನ್ನು ನಿಗದಿತ 12 ಓವರ್ಗಳಲ್ಲಿ 76 ರನ್ಗಳಿಗೆ ಕಟ್ಟಿ ಹಾಕಲು ಯಶಸ್ವಿಯಾಯಿತು. ಹೆಸ್ಕಾಂ ತಂಡದ ಪರವಾಗಿ ರಾಜು ಬಣಕಾರ 35 ರನ್, ಉದಯ ವಾಲ್ಮೀಕಿ 17 ರನ್ ಗಳಿಸಲು ಸಫಲರಾದರು. ಎಂಜಿನಿಯರ್ಸ್ ಪರವಾಗಿ ಉತ್ತಮ ಬೌಲಿಂಗ್ ಮಾಡಿದ ಶೋಯೆಬ್ 3 ಓವರ್ನಲ್ಲಿ 6 ರನ್ ನೀಡಿ 1 ವಿಕೆಟ್ ಪಡೆದು ಗಮನ ಸೆಳೆದರು. ನಂತರ ಸಾಧಾರಣ ಮೊತ್ತ ಬೆನ್ನತ್ತಿದ ಎಂಜಿನಿಯರ್ಸ್ ತಂಡ 10.4 ಓವರ್ಗಳಲ್ಲಿ 3 ವಿಕೆಟ್ ಕಳೆದುಕೊಂಡು 80 ಗಳಿಸಿ 7 ವಿಕೆಟ್ನಿಂದ ಜಯಗಳಿಸಿ ಫೈನಲ್ಗೆ ಪ್ರವೇಶ ಪಡೆಯಿತು. ತಂಡದ ಪರವಾಗಿ ಜಾನ್ 44 ರನ್ ಗಳಿಸಿ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.
2ನೇ ಉಪಾಂತ್ಯ: ಪೊಲೀಸ್ ಹಾಗೂ ನಗರಸಭೆ ನಡುವೆ ನಡೆದ 2ನೇ ಉಪಾಂತ್ಯ ಪಂದ್ಯದಲ್ಲಿ ಪೊಲೀಸ್ ತಂಡ ಮೊದಲು ಬ್ಯಾಟಿಂಗ್ ಮಾಡಿ ನಿಗದಿತ 12 ಓವರ್ಗಳಲ್ಲಿ 128 ರನ್ ಗಳಿಸಿ ಬೃಹತ್ ಮೊತ್ತ ಕಲೆಹಾಕಿತು. ತಂಡದ ಪರವಾಗಿ ನವೀನ ದೇವಪುರ 37, ಮಹೇಶ ಡಂಬಳ 35 ಹಾಗೂ ಪಿಎಸ್ಐ ವಿಕಾಶ ಲಮಾಣಿ 20 ರನ್ ಗಳಿಸಿ ಬಿರುಸಿನ ಆಟ ಆಡಿ ತಂಡಕ್ಕೆ ನೆರವಾದರು. ಬೃಹತ್ ಮೊತ್ತವನ್ನು ಬೆನ್ನಟ್ಟಿದ ನಗರಸಭೆ ತಂಡ ನಿಗದಿತ 12 ಓವರ್ಗಳಲ್ಲಿ 7 ವಿಕೆಟ್ ಕಳೆದುಕೊಂಡು 79 ರನ್ ಗಳಿಸಿ 49 ರನ್ಗಳಿಂದ ಸೋಲನುಭವಿಸಿತು. ಪೊಲೀಸ್ ತಂಡದ ಪರವಾಗಿ ಸಂತೋಷ ನಾಯಕ 26 ರನ್ ನೀಡಿ 3 ವಿಕೆಟ್ ಪಡೆದು ಯಶಸ್ವಿ ಬಾಲರ್ ಆಗಿ ಹೊರಹೊಮ್ಮಿದರು. ನವೀನ್ ದೇವಪುರ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಜ. 26ರಂದು ಮಧ್ಯಾಹ್ನ 1 ಗಂಟೆಗೆ ಸಿವಿಲ್ ಎಂಜಿನಿಯರ್ಸ್ ಮತ್ತು ಪೊಲೀಸ್ ತಂಡಗಳ ನಡುವೆ ಫೈನಲ್ ಪಂದ್ಯ ನಡೆಯಲಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

