ಪೈಗಂಬರ್ ತತ್ವಾದರ್ಶ ದಾರಿದೀಪ
ಗಜೇಂದ್ರಗಡ: ಮಾನವೀಯ ಮೌಲ್ಯಗಳ ಅನುಕರಣೆ ಜತೆ ತನು, ಮನ ಅರ್ಪಿಸುವುದೇ ಪವಿತ್ರ ಇಸ್ಲಾಂ ಧರ್ಮದ ಮುಖ್ಯ ಧ್ಯೇಯ. ಕುರಾನಿನ ಆಶಯದಿಂದ ಉತ್ತಮ ಸಮಾಜ ನಿರ್ಮಾಣ ಸಾಧ್ಯ ಎಂದು ಮಾಜಿ ಸಂಸದ ಐ.ಜಿ. ಸನದಿ ಹೇಳಿದರು.
ಅವರು ಭಾನುವಾರ ಸಂಜೆ ಸ್ಥಳೀಯ ಕುಷ್ಟಗಿ ರಸ್ತೆ ಈದ್ಗಾ ಮೈದಾನದಲ್ಲಿ ಅಂಜುಮನ್ ಏ ಇಸ್ಲಾಂ ಕಮಿಟಿ ವತಿಯಿಂದ ಜರುಗಿದ ಪ್ರವಾದಿ ಹಜರತ್ ಮಹಮ್ಮದ ಪೈಗಂಬರ್ ಜಯಂತ್ಯುತ್ಸವ ಪ್ರಯುಕ್ತ ನಡೆದ ಸನ್ಮಾನ ಸಮಾರಂಭದಲ್ಲಿ ಮಾತನಾಡಿದರು.
ಮತ್ತೊಬ್ಬರಲ್ಲಿ ಕೈ ಒಡ್ಡಲು ಹೋಗಬೇಡಿ. ಮತ್ತೊಬ್ಬರಿಗೆ ದಾನ ಮಾಡುವ ಸಾಮರ್ಥ್ಯ ಮುಸ್ಲಿಂರು ಬೆಳೆಸಿಕೊಳ್ಳಿರಿ. ಇದು ಇಸ್ಲಾಂ ಧರ್ಮ ಆದರ್ಶ ನೀತಿಯಾಗಿದೆ. ಸ್ತ್ರೀಯರನ್ನು ಅಪಾರವಾಗಿ ಗೌರವಿಸುವ ಜತೆಗೆ ಮಹಿಳೆಗೆ ಪೂಜ್ಯನೀಯ ಸ್ಥಾನ ಮಾನ ಕಲ್ಪಿಸಲು ಕುರಾನಿನಲ್ಲಿ ಉಲ್ಲೇಖಿಸಲಾಗಿದೆ. ಪರಸ್ಪರ ಗೌರವಾದರದಿಂದ ಬದಕಲು ಸಂದೇಶ ನೀಡಿದೆ. ಪ್ರವಾದಿ ಮಹ್ಮದ ಪೈಗಂಬರ್ ತತ್ವಾದರ್ಶ, ನೀತಿ, ಸಿದ್ಧಾಂತಗಳು ಸಮಾಜಕ್ಕೆ ದಾರಿದೀಪವಾಗಿವೆ ಎಂದರು.
ಡಿ. ವಿ. ವಣಗೇರಿ ಮಾತನಾಡಿದರು. ಶಾಸಕ ಜಿ.ಎಸ್. ಪಾಟೀಲ ಮಾತನಾಡಿ, ವಿವಿಧತೆಯಲ್ಲಿ ಏಕತೆ ಹೊಂದಿರುವ ಭಾರತದಲ್ಲಿ ಎಲ್ಲ ಧರ್ಮಗಳ ಆಚರಣೆಗಳು ಬೇರೆಯಾಗಿದ್ದರೂ ಅವುಗಳ ಸಂದೇಶ ಒಂದೇ ಎಂದರು. ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಅಶೋಕಕುಮಾರ ಬಾಗಮಾರ, ಬ್ಲಾಕ್ ಕಾಂಗ್ರೆಸ್ ಕಮಿಟಿ ಅಧ್ಯಕ್ಷ ವೀರಣ್ಣ ಸೊನ್ನದ ಮಾತನಾಡಿದರು. ಹಜರತ್ ಅಲ್ಲಮಾ ಮೌಲಾನಾ ಮಹಮ್ಮದ ಝಮಾ, ಮೈಸೂರ ಸಂಸ್ಥಾನ ಮಠದ ವಿಜಯಮಹಾಂತ ಶ್ರೀಗಳು ಸಾನ್ನಿಧ್ಯವಹಿಸಿ ಆಶೀರ್ವಚನ ನೀಡಿದರು. ಮಾಜಿ ಸಂಸದ ಐ.ಜಿ. ಸನದಿ, ಶಾಸಕ ಜಿ.ಎಸ್. ಪಾಟೀಲ, ಹಾಗೂ ರಂಗಭೂಮಿ ಕಲಾವಿದ ದಸ್ತಗೀರಸಾಬ್ ಗೊಡೇಕಾರ ಅವರನ್ನು ಸಂಸ್ಥೆಯ ವತಿಯಿಂದ ಸನ್ಮಾನಿಸಲಾಯಿತು.
ಮೌಲಾನಾ ಖಲೀಲ ಖಾಜಿ, ಮೌಲಾನಾ ತಲಹಾ ನೂರಿ, ರಫೀಕ ಮೌಲಾನಾ, ನ್ಯಾಯವಾದಿ ವಿ.ಆರ್. ಗುಡಿಸಾಗರ, ಪುರಸಭೆ ವಿಪಕ್ಷ ನಾಯಕ ಶಿವರಾಜ ಘೋರ್ಪಡೆ, ಪುರಸಭೆ ಸದಸ್ಯೆ ಮಕ್ತುಂಭಿ ಹಣಗಿ, ಎಸ್.ಎಂ. ಆರಗಿದ್ದಿ, ಚಂಬಣ್ಣ ಚವಡಿ, ಮೋಹನಸಾ ರಾಯಬಾಗಿ, ಹಾಜಿ ಎ.ಆರ್. ಗೊಡೇಕಾರ, ಎ.ಜಿ. ತಾಳಿಕೋಟಿ, ಎಂ.ಕೆ. ಹಿರೇಹಾಳ, ಮಹಮ್ಮದಲಿ ಬುಕ್ಕಿಟಗಾರ, ಇಸ್ಮಾಯಿಲಸಾಬ್ ನಾಲಬಂದ, ಕೆ.ಡಿ. ಕಟ್ಟಿಮನಿ, ಪಿ.ಕೆ. ಬಾಗವಾನ ಮುಂತಾದವರು ಉಪಸ್ಥಿತರಿದ್ದರು. ದಾವಲಸಾಬ ತಾಳಿಕೋಟಿ ಸ್ವಾಗತಿಸಿದರು. ಫಯಾಜ ತೋಟದ ನಿರೂಪಿಸಿದರು. ಮುರ್ತುಜಾ ಡಾಲಾಯತ್ ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

