ಇಮ್ರಾಪುರ ಅಪರೂಪದ ಕವಿ: ಶಾಸಕ ಪಾಟೀಲ್
ಗದಗ: ರೋಣದಲ್ಲಿ ನಡೆಯಲಿರುವ ಗದಗ ಜಿಲ್ಲಾ 6ನೇ ಕನ್ನಡ ಸಾಹಿತ್ಯ ಸಮೇಳನದ ಸರ್ವಾಧ್ಯಕ್ಷರಾದ ಡಾ. ಸೋಮಶೇಖರ ಇಮ್ರಾಪುರ ಅವರು ಕರ್ನಾಟಕ ಕಂಡಂತಹ ಅಪರೂಪದ ಕವಿ, ಖ್ಯಾತ ಜಾನಪದ ವಿದ್ವಾಂಸರಾಗಿದ್ದು ಈ ಭಾಗದ ಹಲವಾರು ವಿದ್ಯಾರ್ಥಿಗಳ ಬಾಳಿಗೆ ಬೆಳಕಾಗಿದ್ದಾರೆ ಎಂದು ಸ್ವಾಗತ ಸಮಿತಿಯ ಅಧ್ಯಕ್ಷ ಹಾಗೂ ರೋಣ ಶಾಸಕ ಜಿ.ಎಸ್. ಪಾಟೀಲ ಹೇಳಿದರು.
ಅವರು ಸಾಹಿತ್ಯ ಸಂಸ್ಕೃತಿಗೆ ಹೆಸರುವಾಸಿಯಾದ ರೋಣ ತಾಲೂಕಿನಲ್ಲಿ ಫೆಬ್ರವರಿ 2ನೇ ವಾರದಲ್ಲಿ ನಡೆಯಲಿರುವ ಗದಗ ಜಿಲ್ಲಾ 6ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾದ ಡಾ. ಸೋಮಶೇಖರ ಇಮ್ರಾಪುರರನ್ನು ಧಾರವಾಡದ ಕಲ್ಯಾಣ ನಗರದ ಅವರ ನಿವಾಸದಲ್ಲಿ ಗದಗ ಜಿಲ್ಲಾ ಸಮ್ಮೇಳನದ ಪದಾಧಿಕಾರಿಗಳೊಂದಿಗೆ ಅಧಿಕೃತವಾಗಿ ಆಹ್ವಾನ ನೀಡಿ ಮಾತನಾಡಿದರು. ಡಾ. ಸೋಮಶೇಖರ ಇಮ್ರಾಪುರರವರು ಮಾತನಾಡಿ, ಗದಗ ಜಿಲ್ಲೆ ಸಾಹಿತ್ಯ, ಸಂಗೀತ, ಸಂಸ್ಕೃತಿಗೆ ಹೆಸರುವಾಸಿಯಾದ ಜಿಲ್ಲೆಯಾಗಿದೆ. ರೋಣ ತಾಲೂಕಿನಲ್ಲಿ ಫೆಬ್ರವರಿಯಲ್ಲಿ ನಡೆಯಲಿರುವ ಗದಗ ಜಿಲ್ಲಾ 6ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರನ್ನಾಗಿ ಆಯ್ಕೆಗೊಳಿಸಿದ್ದಕ್ಕೆ ಸಂತೋಷದಿಂದ ಒಪ್ಪಿಕೊಂಡಿರುತ್ತೇನೆಂದು ಹೇಳಿದರು. ಜಿಲ್ಲಾ ಕಸಾಪ ಜಿಲ್ಲಾಧ್ಯಕ್ಷ ಡಾ. ಶಿವಪ್ಪ ಕುರಿ ಮುಂತಾದವರು ಮಾತನಾಡಿದರು. ರೋಣ ತಾಲೂಕು ಅಧ್ಯಕ್ಷ ಡಾ. ಶಿವರಾಜ ಗುರಿಕಾರ, ವಿ.ಆರ್. ಗುಡಿಸಾಗರ, ಡಾ. ಶಾಂತಾ ಇಮ್ರಾಪುರ, ಧಾರವಾಡ ಜಿಲ್ಲಾ ಕಸಾಪ ನಿಕಟ ಪೂರ್ವ ಜಿಲ್ಲಾಧ್ಯಕ್ಷ ಡಿ.ಎಂ. ಹಿರೇಮಠ, ಶರಣು ಗೋಗೇರಿ, ಮಲ್ಲೇಶ ಡಿ.ಎಚ್, ಪಿ.ಸಿ. ಕಲಹಾಳ, ಕೆ.ಎ. ಬಳಿಗಾರ, ಎಸ್.ಬಿ. ಹಿರೇಮಠ, ಡಿ.ಎಸ್. ತಳವಾರ, ವಿ.ಬಿ. ಸೋಮನಕಟ್ಟಿಮಠ, ಕೆ.ಎಸ್. ಕಳಕಣ್ಣವರ, ಕಿಶೋರಬಾಬು ನಾಗರಕಟ್ಟಿ, ಬಿ.ಜಿ. ಹಿರೇಮಠ, ಎಸ್.ಎಸ್. ತಳ್ಳಿಹಾಳ ಮೊದಲಾದವರು ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

