ಮೋದಿ ರಥಕ್ಕೆ ಭವ್ಯ ಸ್ವಾಗತ
ಲಕ್ಷ್ಮೇಶ್ವರ: ಕಾರವಾರದಿಂದ ಹೊರಟ ನರೇಂದ್ರ ಮೋದಿಯ ರಥವು ಪಟ್ಟಣದ ಶಿಗ್ಲಿ ಕ್ರಾಸ್ನಲ್ಲಿ ಆಗಮಿಸಿದಾಗ ಬಿಜೆಪಿ ಹಾಗೂ ನಮೋ ಬ್ರಿಗೇಡ್ನ ಸದಸ್ಯರು ಸೇರಿ ಬೃಹತ್ ಮೆರವಣಿಗೆಯ ಮೂಲಕ ಸ್ವಾಗತಿಸಿದರು.
ನಂತರ ಸೋಮೇಶ್ವರ ಪಾದಗಟ್ಟೆಯ ಹತ್ತಿರ ಸಭೆಯಾಗಿ ಮಾರ್ಪಟ್ಟಿತು. ಸಭೆಯಲ್ಲಿ ನರೇಂದ್ರ ಮೋದಿಯ ಬಗ್ಗೆ ನಿರ್ಮಿಸಲಾದ ಚಲನಚಿತ್ರವನ್ನು ಪ್ರದರ್ಶನ ಮಾಡಲಾಯಿತು. ನರೇಂದ್ರ ಮೋದಿಯವರನ್ನು ಪ್ರಧಾನಿಯಾಗಿ ಮಾಡಲು ಯುವಕರು ಸಜ್ಜಾಗಿರಬೇಕೆಂದು ನಮೋ ಬ್ರಿಗೇಡ್ನ ಸದಸ್ಯರು ಕರೆ ನೀಡಿದರು.
ಈ ಸಂದರ್ಭ ಚೆಂಬಣ್ಣ ಬಾಳಿಕಾಯಿ, ಸೋಮಣ್ಣ ಮುಳಗುಂದ, ಬಸವರಾಜ ಅರಳಿ, ಮಂಜುನಾಥ ಮಾಗಡಿ, ರಾಘವೇಂದ್ರ ಪೂಜಾರ, ನಾಗರಾಜ ಚಿಂಚಲಿ, ಬಸವರಾಜ ಮೆಣಸಿನಕಾಯಿ, ಶಕ್ತಿ ಕತ್ತಿ, ಜಗದೀಶ ಪುರಾಣಿಕಮಠ, ಉಮೇಶ ಬೆಳವಿಗಿ, ನಮೋ ಬ್ರಿಗೇಡ್ನ ಅಮರೇಶ ಗಾಂಜಿ, ಪ್ರವೀಣ ಬೋಮಲೆ, ಪ್ರೇಮಶೇಠ, ಪುರಸಭೆಯ ಸದಸ್ಯರಾದ ಗಣೇಶ ಬೇವಿನಮರದ, ರಾಮಣ್ಣ ರಿತ್ತಿ, ಸತೀಶ ಮೆಕ್ಕಿ, ಚೆಂದ್ರು ಹಂಪಣ್ಣವರ ನೀಲಪ್ಪ ಕರ್ಜಕಣ್ಣವರ, ನಿಂಗಪ್ಪ ಬನ್ನಿ ಮೊದಲಾದವರು ಹಾಜರಿದ್ದರು. ನಂತರ ಪಟ್ಟಣದ ಪ್ರಮುಖ ಬೀದಿಗಳಲ್ಲಿ ನರೇಂದ್ರ ಮೋದಿಯವರ ರಥವು ಸಂಚಾರ ಮಾಡಿ ರಾಜ್ಯದ ಎಲ್ಲ ಜಿಲ್ಲೆಗಳ ಪ್ರಮುಖ ಪಟ್ಟಣಗಳಲ್ಲಿ ಸಂಚಾರ ಮಾಡಲು ತೆರಳಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

