ಕಾಂಪ್ಲೆಕ್ಸ್ ನಿರ್ಮಾಣಕ್ಕೆ ಸಿದ್ಧತೆ
ಕನ್ನಡಪ್ರಭ ವಾರ್ತೆ, ರೋಣ, ಜ. 22
ಕೆರೆಗಳ ಅಭಿವೃದ್ಧಿ ಮತ್ತು ಕಾಂಪ್ಲೆಕ್ಸ್ ನಿರ್ಮಿಸುವುದಾಗಿ 2007ರಲ್ಲಿ ಪಟ್ಟಣದ ಮುಖ್ಯ ರಸ್ತೆಯಲ್ಲಿರುವ ಗೂಡಂಗಡಿಗಳನ್ನು ತೆರವು ಮಾಡಲಾಗಿತ್ತು. ಇಲ್ಲಿ ವರೆಗೂ ಆ ಜಾಗೆಯಲ್ಲಿ ಕಾಂಪ್ಲೆಕ್ಸ್ ನಿರ್ಮಿಸದಿರುವುದರಿಂದ ಅಲ್ಲಿ ಮತ್ತೆ ಗೂಡಂಗಡಿಗಳು ತಲೆ ಎತ್ತಿದ ಕುರಿತು ಕನ್ನಡಪ್ರಭ ಡಿಸೆಂಬರ್ 6ರಂದು 'ಕಾಂಪ್ಲೆಕ್ಸ್ಗೂ ಮುನ್ನ ಗೂಡಂಗಡಿಗಳು' ವಿಶೇಷ ವರದಿ ಪ್ರಕಟಿಸಿತ್ತು.
ವರದಿಗೆ ಸ್ಪಂದಿಸಿದ ಶಾಸಕ ಜಿ.ಎಸ್. ಪಾಟೀಲ ಹಾಗೂ ಪುರಸಭೆ ಅಧಿಕಾರಿ ಮತ್ತು ಆಡಳಿತ ವರ್ಗ ಬಸ್ ಸ್ಟ್ಯಾಂಡ್ ರಸ್ತೆಯಲ್ಲಿನ ಗೂಡಂಗಡಿ ಜಾಗೆಯಲ್ಲಿ 10್ಢ10 ಅಳತೆಯ 50ಕ್ಕೂ ಹೆಚ್ಚು ಮಳಿಗೆಯುಳ್ಳ ಕಾಂಪ್ಲೆಕ್ಸ್ ನಿರ್ಮಿಸಲು ಮುಂದಾಗಿದೆ. ಈ ಕುರಿತು ಮಂಗಳವಾರ ಸಂಜೆ ಪಟ್ಟಣದ ಪುರಸಭೆ ಕಾರ್ಯಾಲಯದಲ್ಲಿ ಶಾಸಕ ಜಿ.ಎಸ್. ಪಾಟೀಲ ನೇತೃತ್ವದಲ್ಲಿ ಜರುಗಿದ ಸರ್ವ ಸದಸ್ಯರ ಸಭೆಯಲ್ಲಿ ನಿರ್ಧರಿಸಲಾಯಿತು. ಸಭೆಯಲ್ಲಿ ಶಾಸಕ ಜಿ.ಎಸ್. ಪಾಟೀಲ ಮಾತನಾಡಿ, ಬಹುದಿನಗಳಿಂದ ಗೂಡಂಗಡಿಗಳಿರುವ ಜಾಗೆಯಲ್ಲಿ ಕಾಂಪ್ಲೆಕ್ಸ್ ನಿರ್ಮಿಸಲು ನಿರ್ಧರಿಸಲಾಗಿತ್ತು. ಅದು ತಾಂತ್ರಿಕ ತೊಂದರೆಯಿಂದ ನೆನಗುದಿಗೆ ಬಿದ್ದಿತ್ತು. ಬಸ್ ಸ್ಟ್ಯಾಂಡ್ ರಸ್ತೆಯಲ್ಲಿ ಈಗಿರುವ ದೊಡ್ಡ ಗಟಾರ್ ಮೇಲೆ ಸುಮಾರು 50ಕ್ಕೂ ಹೆಚ್ಚು 10್ಢ10 ಅಳತೆಯ ಸ್ಲ್ಯಾಬ್ಯುಳ್ಳ ಮಳಗೆಗಳನ್ನು ಪುರಸಭೆ ವತಿಯಿಂದ ನಿರ್ಮಿಸಲಾಗುವುದು. ಇದಕ್ಕಾಗಿ ಈಗಾಗಲೇ ಹಣವನ್ನು ಮಿಸಲಿರಿಸಲಾಗಿದೆ.
ಪಟ್ಟಣದ ಸೌಂದರ್ಯಕ್ಕೆ ಆದ್ಯತೆ: ಪುರಸಭೆ ಅಧ್ಯಕ್ಷ ಮುತ್ತಣ್ಣ ಸಂಗಳದ ಮಾತನಾಡಿ, ಪಟ್ಟಣದ ಸೌಂದರ್ಯ, ಅಭಿವೃದ್ಧಿ ಮತ್ತು ಸುಗಮ ಸಂಚಾರ ವ್ಯವಸ್ಥೆ ಕಲ್ಪಿಸುವ ದಿಶೆಯಲ್ಲಿ ಸಂಕೀರ್ಣ ನಿರ್ಮಿಸುವ ಕಾರ್ಯಕ್ಕೆ ಮುಂದಾಗಿದೆ. ಈಗಾಗಲೇ ಪಟ್ಟಣದ ಬಸ್ ಸ್ಟ್ಯಾಂಡ್ ರಸ್ತೆಯಲ್ಲಿನ ಡಬ್ಬಾ ಅಂಗಡಿಗಳ ಸಮೀಕ್ಷೆ (ಲಿಸ್ಟ್) ಮಾಡಲಾಗಿದೆ. ವ್ಯಾಪಾರಸ್ಥರಿಗೆ ಅಭಿವೃದ್ಧಿಗೆ ಸಹಕರಿಸಬೇಕು ಎಂದು ಮೌಖಿಕವಾಗಿ ಸೂಚನೆ ನೀಡಲಾಗಿದೆ. ಅಲ್ಲದೆ ಪಟ್ಟಣದಲ್ಲಿನ ರಸ್ತೆ ಅಗಲೀಕರಣ ಅಭಿವೃದ್ಧಿ ಕಾಮಗಾರಿ ಲೋಕೋಪಯೋಗಿ ಇಲಾಖೆಯಿಂದ ಸದ್ಯದಲ್ಲಿಯೇ ನಡೆಯಲಿದೆ. ಯಾವುದೇ ಅಭಿವೃದ್ಧಿ ಕಾರ್ಯವಾಗಲು ಸಾರ್ವಜನಿಕರ ಸಹಕಾರ ಅತ್ಯಗತ್ಯವಾಗಿದೆ ಎಂದರು.
ಸಭೆಯಲ್ಲಿ ಮುಖ್ಯಾಧಿಕಾರಿ ಬಾಬುರಾವ್ ಕಮತಗಿ, ಅಭಿಯಂತರ ಬಿ.ಎ.ನದಾಫ್, ಉಪಾಧ್ಯಕ್ಷೆ ಲಕ್ಷ್ಮೀ ಗಡಗಿ, ವಿರೋಧ ಪಕ್ಷದ ನಾಯಕ ಬಸನಗೌಡ ಪಾಟೀಲ, ಸದಸ್ಯರಾದ ತೋಟಪ್ಪ ನವಲಗುಂದ, ಗದಿಗೆಪ್ಪ ಕಿರೇಸೂರ, ಮಂಜುನಾಥ ಹಾಳಕೇರಿ, ಖಾದರಸಾಬ ಸಂಕನೂರ, ನಾಗರಾಜ ಪಲ್ಲೇದ, ಬಾಬುಸಾಬ ಚಿನ್ನೂರ, ಗೀತಾ ಕೊಪ್ಪದ, ನಾಜಬೇಗಂ ಯಲಿಗಾರ, ಶರಣವ್ವ ಜಿಡ್ಡಿಬಾಗೀಲ, ರತ್ನಾ ಕೊಳ್ಳಿಯವರ, ಜಯಶ್ರೀ ನವಲಗುಂದ, ಯಮನವ್ವ ಜಮ್ಮನಕಟ್ಟಿ, ವಿದ್ಯಾ ಬಡಿಗೇರ, ಶಿವಪ್ಪ ಕರಿಲಿಂಗಣ್ಣವರ, ಅಜ್ಜಪ್ಪ ರಡ್ಡೇರ, ಶಫೀಕ ಮೂಗನೂರ, ವಿಜಯ ಗಡಗಿ, ಬಸನಗೌಡ ಬಸನಗೌಡ್ರ ಹಾಗೂ ಪುರಸಭೆ ಸಿಬ್ಬಂದಿ ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

