ಗದಗ

ಸುದ್ದಿ ಸಂಕ್ಷೇಪ

Published On :

ಬಿಳಿಮಗ್ಗದ ಆಯ್ಕೆ
ಮುಂಡರಗಿ:  ಮುಂಡರಗಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾಗಿ ಕಾಶೀನಾಥ ಬಿಳಿಮಗ್ಗದ, ಪ್ರಧಾನ ಕಾರ್ಯದರ್ಶಿಯಾಗಿ ಶಿವು ಹೊಂಬಳಗಟ್ಟಿ, ಖಜಾಂಚಿಯಾಗಿ ಸಂತೋಷ ಮುರಡಿ ಆಯ್ಕೆಯಾಗಿದ್ದಾರೆ. ಸದಸ್ಯರಾದ ಸಿ.ಕೆ. ಗಣಪ್ಪನವರ, ಶರಣು ಸೊಲಗಿ, ಕವಿ ಬಂಕಾಪುರ, ಸಿ.ಎಸ್. ಅರಸನಾಳ, ಆರ್.ಬಿ. ಹುಳಕಣ್ಣವರ, ಪ್ರಕಾಶ ಅತ್ತರವಾಲ ಮುಂತಾದವರು ಹಾಜರಿದ್ದರು. ಜನಪ್ರತಿನಿಧಿಗಳು, ಸಂಘ-ಸಂಸ್ಥೆಗಳು ಪತ್ರಿಕಾಗೋಷ್ಠಿಗಳಿಗಾಗಿ ಅಧ್ಯಕ್ಷ ಕಾಶೀನಾಥ ಬಿಳಿಮಗ್ಗದ (9845522507), ಪ್ರಧಾನ ಕಾರ್ಯದರ್ಶಿ ಶಿವು ಹೊಂಗಳಗಟ್ಟಿ (9591167678) ಸಂಪರ್ಕಿಸಲು ಸಂಘದ ಪ್ರಕಟಣೆ ತಿಳಿಸಿದೆ.
ಇಂದು ಸಂಗೀತ ಕಾರ್ಯಕ್ರಮ
ನರಗುಂದ: ತಾಲೂಕಿನ ಶಿರೋಳ ಗ್ರಾಮದ ತೋಂಟದಾರ್ಯ ಮಠದ ಜಾತ್ರೆ ಮಹೋತ್ಸವ ಅಂಗವಾಗಿ ಶಿರೋಳ ಔಷಧ ವರ್ತಕರ ಸಂಘ, ಗುರುಬಸವ ಜನಕಲ್ಯಾಣ ಸಂಸ್ಥೆ(ರಿ) ಹಾಗೂ ಕರ್ನಾಟಕ ವೈದ್ಯಕೀಯ ವಿಜ್ಞಾನ ಸಂಸೆ ್ಥ(ಕಿಮ್ಸ್ ಹುಬ್ಬಳ್ಳಿ) ಇವರ ಸಂಯುಕ್ತಾಶ್ರಯದಲ್ಲಿ ಸಂಗೀತ, ಲಘ ರಥೋತ್ಸವ, ಕಲ್ಲು ಸಿಡಿಹೊಡೆಯವ ಕಾರ್ಯಕ್ರಮವು ಜ. 23ರಂದು ಜರುಗಲಿದೆ. ಈ ಕಾರ್ಯಕ್ರಮಕ್ಕೆ ಬದಾಮಿ ಶಿವಪೂಜಾ ಶಿವಾಚಾರ್ಯ ಶ್ರೀಗಳು, ತಹಸೀಲ್ದಾರ್ ಸಂತೋಷ ಎಂ. ಜಿಪಂ ಅಧಿಕಾರಿ ಎಫ್.ಎಸ್. ಅಣ್ಣಿಗೇರಿ, ಬಿ.ಎಸ್. ಪೊಲೀಸ್‌ಪಾಟೀಲ, ತಾಪಂ ಅಧಿಕಾರಿ ನಂದಕುಮಾರ ಗುಂಡಾ, ಸಿಪಿಐ ಸಿದ್ದಲಿಂಗಪ್ಪಗೌಡ ಪಾಟೀಲ, ಶಿಕ್ಷಣಾಧಿಕಾರಿ ಎಸ್.ಎನ್. ಹುಗ್ಗಿ, ರಾಜಶೇಖರ ಸುಳ್ಳದ, ಮುಂತಾದ ಸಂಗೀತ ಕಲಾವಿದರು ಭಾಗವಹಿಸುವರೆಂದು ಪ್ರಕಟಣೆ ತಿಳಿಸಿದೆ.
ಪಾಟೀಲ ಆಯ್ಕೆ
ನರಗುಂದ:  ತಾಲೂಕಿನ ಭೈರನಹಟ್ಟಿ ಗ್ರಾಮದ ಯುವ ಮುಖಂಡ ಎಲ್.ಎಂ. ಪಾಟೀಲರವರ ವಿವಿಧ ಕ್ಷೇತ್ರದ ಸಮಾಜ ಸೇವೆಯನ್ನು ಗುರ್ತಿಸಿ ಅವರನ್ನು ಪಂಚಮಸಾಲಿ ಸಮಾಜದ ತಾಲೂಕು ಯುವ ಘಟಕದ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.
ಬಸ್ ಹರಿದು ಸೈಕಲ್ ಸವಾರ ಸಾವು
ನರಗುಂದ:  ನರಗುಂದದಿಂದ ರೋಣ ರಸ್ತೆಯಲ್ಲಿ ಹೊಲದಿಂದ ಸೈಕಲ್ ಮೇಲೆ ಮನೆಗೆ ಬರುತ್ತಿದ್ದ ವ್ಯಕ್ತಿಯೋರ್ವನ ಮೇಲೆ ಬಸ್ ಹರಿದ ಪರಿಣಾಮ ವ್ಯಕ್ತಿ ಸ್ಥಳದಲ್ಲಿಯೇ ಸಾವನ್ನಪ್ಪಿದ ಘಟನೆ ಬುಧವಾರ ಬೆಳಗ್ಗೆ ಸಂಭವಿಸಿದೆ. ಮೃತ ವ್ಯಕ್ತಿಯನ್ನು ಪಟ್ಟಣದ ಸೋಮಪುರ ಬಡಾವಣೆ ನಿವಾಸಿ ಮೈಲಾರಗೌಡ ಪಾಟೀಲ (60) ಎಂದು ಗುರುತಿಸಲಾಗಿದೆ. ಈ ಕುರಿತು ನರಗುಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
 ಎನ್.ಎಸ್.ಎಸ್. ವಿಶೇಷ ಶಿಬಿರ ಆರಂಭ
ಹೊಳೆಆಲೂರ: ಇಲ್ಲಿನ ಶ್ರೀ ಕಲ್ಮೇಶ್ವರ ವಿದ್ಯಾಪ್ರಸಾರಕ ಸಮಿತಿಯ ಕಲಾ, ವಿಜ್ಞಾನ ಹಾಗೂ ವಾಣಿಜ್ಯ ಮಹಾವಿದ್ಯಾಲಯದ 2013-14ನೇ ಸಾಲಿನ ರಾಷ್ಟ್ರೀಯ ಸೇವಾ ಯೋಜನೆಯ 1 ಮತ್ತು 2ನೇ ಘಟಕಗಳ ವಿಶೇಷ ವಾರ್ಷಿಕ ಶಿಬಿರ ದತ್ತು ಗ್ರಾಮ ತಮಿನಾಳದಲ್ಲಿ ಶನಿವಾರದಿಂದ ಆರಂಭಗೊಂಡಿತು.
ವಿಶೇಷ ಶಿಬಿರದ ಸಾನ್ನಿಧ್ಯವನ್ನು ಯಚ್ಚರಸ್ವಾಮಿಗಳು ವಹಿಸಿ ಕಾರ್ಯಕ್ರಮ ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷ ಸಿ.ಜಿ. ಬೀರನೂರ ವಹಿಸಿದ್ದರು. ಅತಿಥಿಗಳಾಗಿ ಪ್ರಾ.ಎಸ್.ಎಸ್. ಪಟ್ಟಣಶೆಟ್ಟಿ, ಗ್ರಾಪಂ ಕಾತರಕಿ ಅಧ್ಯಕ್ಷೆ ಶೈಲಾ ಮಲ್ಲಿಕಾರ್ಜುನ ತಳವಾರ, ಬಸವರಾಜ ಬಾರಕೇರ, ಸುರೇಶ ಬಸರಿ, ಮಮತಾಜ ನದಾಫ, ವೀರಯ್ಯ ಬೆಳವಟಗಿಮಠ, ಎಸ್.ಜಿ. ಮೂಲಿಮನಿ ಆಗಮಿಸಿದ್ದರು. ಪ್ರೊ.ಹುಣಸೀಕಟ್ಟಿ ಶಿಬಿರದ ಕುರಿತು ಪ್ರಾಸ್ತಾವಿಕ ಮಾತನಾಡಿ, ಶಿಬಿರದಲ್ಲಿ ರಸ್ತೆ ನಿರ್ಮಾಣ, ಗ್ರಾಮ ನೈರ್ಮಲ್ಯ, ಪರಿಸರ ಅಭಿವೃದ್ಧಿ ಕಾರ್ಯಕ್ರಮ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ಏಡ್ಸ್ ಬಗ್ಗೆ ತಿಳಿವಳಿಕೆ, ನಾಯಕತ್ವದ ಗುಣ ಬೆಳೆಸುವ ಕುರಿತು ಮಾಹಿತಿ ನೀಡಿದರು.
ಪ್ರೊ.ಬಿ.ಎ.ಬೆಳವಟಗಿ ವಂದಿಸಿದರು. ಕುಮಾರ ಡೊಳ್ಳಿನ ನಿರೂಪಿಸಿದರು. ಸಹಾಯಕ ಅಧಿಕಾರಿ ಪ್ರೊ.ಎಸ್.ಎಸ್. ಹುರಕಡ್ಲಿ ಉಪಸ್ಥಿತರಿದ್ದರು.
ಸಂಸ್ಥಾಪನಾ ದಿನಾಚರಣೆ
ಗದಗ:  ಇನ್ನರ್‌ವೀಲ್ ಸಂಸ್ಥೆಯು ಜನ ಉಪಯೋಗಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತ ಸದಾ ಸೇವಾ ನಿರತವಾಗಿರುವುದಲ್ಲದೆ ಹತ್ತಾರು ಸಾಮಾಜಿಕ ಅಭಿವೃದ್ಧಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ ಎಂದು ಗದಗ ಬೆಟಗೇರಿ ಇನ್ನರ್‌ವೀಲ್ ಕ್ಲಬ್ ಅಧ್ಯಕ್ಷೆ ಅನ್ನಪೂರ್ಣಾ ವರವಿ ಹೇಳಿದರು. ಅವರು ಬುಧವಾರ ಇನ್ನರ್‌ವೀಲ್ ಕ್ಲಬ್‌ನ 40ನೇ ವರ್ಷದ ಸಂಸ್ಥಾಪನಾ ದಿನಾಚರಣೆಯ ಅಧ್ಯಕ್ಷತೆವಹಿಸಿ ಮಾತನಾಡಿದರು.  ವೈಸ್ ಚೇರ್‌ಮನ್ ಪ್ರೇಮಾ ಗುಳಗೌಡ್ರ, ಕ್ಲಬ್‌ನ ಸಂಸ್ಥಾಪಕ ಅಧ್ಯಕ್ಷೆ ಪದ್ಮಲತಾ ಮಾನ್ವಿ ಮಾತನಾಡಿದರು.
ಮಾಜಿ ಅಧ್ಯಕ್ಷೆ ರಜನಿ ಪಾಟೀಲ ಕ್ಲಬ್ ನಡೆದು ಬಂದ ದಾರಿ, ಸಾಧನೆ ಹಾಗೂ ಮುಂದಿನ ಗುರಿಗಳನ್ನು ತಿಳಿಸಿದರು. ನಾಗರತ್ನ ಪಾಟೀಲ, ಮೀನಾಕ್ಷಿ ಸಜ್ಜನರ, ಯಶೋದರಾ ಪಾಟೀಲ, ಆಶಾ ಪಟ್ಟಣಶೆಟ್ಟಿ, ಆಶಾ ಹುಕ್ಕೇರಿ, ಮಂಗಲಾ ಅಬ್ಬಿಗೇರಿ, ಪ್ರೇಮಾ ಹಂದಿಗೋಳ, ಪ್ರೇಮಾ ಮೇಟಿ, ಶಾಂತಾ ನಿಂಬಣ್ಣವರ, ಶ್ರೇಯಾ ಪವಾಡಶೆಟ್ಟರ ತಮ್ಮ ಕಾಲಾವಧಿಯಲ್ಲಿನ ಸಂಸ್ಥೆಯ ಕಾರ್ಯ ವೈಖರಿಗಳನ್ನು ವಿವರಿಸಿದರು. ಸುಲೋಚನಾ ಐಹೊಳೆ ನಿರೂಪಿಸಿ ವಂದಿಸಿದರು. ನಾಗರತ್ನ ಮೂಶಣ್ಣವರ, ವಿದ್ಯಾ ಶಿವನಗುತ್ತಿ, ಸುಶೀಲಾ ಕೋಟಿ, ಕವಿತಾ ದಂಡಿನ, ಸುನಂದಾ ಮಾಳೆಕೊಪ್ಪಮಠ, ಸುವರ್ಣಾ ವಸ್ತ್ರದ, ಉಮಾ ಕವಳಿಕಾಯಿ, ಶೈಲಾ ದೇಸಾಯಿ, ಸುಮಾ ಪಾಟೀಲ, ಸರೋಜಿನಿ ಹಕ್ಕಾಪಕ್ಕಿ, ಸಂಧ್ಯಾ ಕೋಟಿ, ಶಿವಲೀಲಾ ಅಕ್ಕಿ, ಪಾರ್ವತಿ ಮಾಳೆಕೊಪ್ಪಮಠ, ಸಂಧ್ಯಾ ಕೋಟಿ ಮುಂತಾದವರಿದ್ದರು.
ನಾಳೆ ರಸ್ತೆ ಸುರಕ್ಷತಾ ಸಪ್ತಾಹ
ನರಗುಂದ: ಜಿಲ್ಲಾ ಪೊಲೀಸ್ ಇಲಾಖೆ, ನರಗುಂದ ಪೊಲೀಸ್ ಠಾಣೆ, ಲಯನ್ಸ್ ಕ್ಲಬ್ ನರಗುಂದ ಹಾಗೂ ಲಿಯೊಕ್ಲಬ್ ಇವರ ಆಶ್ರಯದಲ್ಲಿ ಜ. 24ರಂದು ಬೆಳಗ್ಗೆ 11ಕ್ಕೆ ಲಯನ್ಸ್ ಶಾಲೆಯ ವಿದ್ಯಾರ್ಥಿಗಳೊಂದಿಗೆ ಸುಗಮ ಸಂಚಾರ ಮತ್ತು ಸುರಕ್ಷತೆ ಕುರಿತು ರ್ಯಾಲಿ ನಡೆಯಲಿದ್ದು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಪ್ರಕಟಣೆ ತಿಳಿಸಿದೆ.
ಇಂದು ವಾರ್ಷಿಕ ದಿನಾಚರಣೆ
ಹೊಳೆಆಲೂರ:  ಇಲ್ಲಿನ ಕಲ್ಮೇಶ್ವರ ಕಲಾ, ವಿಜ್ಞಾನ ಹಾಗೂ ವಾಣಿಜ್ಯ ಪದವಿಪೂರ್ವ ಮಹಾವಿದ್ಯಾಲಯದ ವಾರ್ಷಿಕ ದಿನಾಚರಣೆ ಜ. 23ರಂದು 11-30ಕ್ಕೆ ಕಾಲೇಜಿನ ರಜತ ಮಹೋತ್ಸವ ಭವನದಲ್ಲಿ ನಡೆಯಲಿದೆ. ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷ ಸಿ.ಜಿ. ಬೀರನೂರ ವಹಿಸುವರು. ಚಿಲಕವಾಡದ ಜಾನಪದ ಕಲಾವಿದ ಬಿ.ಎಚ್. ಹೂಗಾರ, ಪ್ರಾ. ಬಿ.ಬಿ. ಬಿಜ್ಜರಗಿ ಆಗಮಿಸಲಿದ್ದಾರೆ. ಈ ಸಂದರ್ಭದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮತ್ತು ವಿವಿಧ ವಿಭಾಗಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನಗಳ ವಿತರಣೆ ನಡೆಯಲಿದೆ ಎಂದು ಸಂಸತ್ ಸಲಹೆಗಾರ ಪ್ರೊ. ಎಂ.ಆರ್. ಉಂಡಿ ಮತ್ತು ವಿದ್ಯಾರ್ಥಿ ಪ್ರತಿನಿಧಿ ಕೆ.ಎಚ್. ತಳವಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.