ತೆಲುಗು ಚಲನಚಿತ್ರದ ಚಿತ್ರೀಕರಣ
ಗಜೇಂದ್ರಗಡ: ಸಮೀಪದ ದಕ್ಷಿಣ ಕಾಶೀ ಪ್ರಸಿದ್ದಿಯ ಕಾಲಕಾಲೇಶ್ವರ ಸನ್ನಿಧಿಯ ತೇರು ಎಳೆಯುವ ಬೀದಿಯಲ್ಲಿ ಕಳೆದ 2 ದಿನದಿಂದ ತೆಲುಗು ಚಲನಚಿತ್ರದ ಚಿತ್ರೀಕರಣ ಭರದಿಂದ ಸಾಗಿದೆ.
ಈಗಾಗಲೇ ಕನ್ನಡದ ಕಿಚ್ಚ ಸುದೀಪ ಅಭಿನಯದ ವೀರಮದಕರಿ, ತೆಲುಗಿನ ಸೂಪರ್ ಸ್ಟಾರ್ ಜ್ಯೂನಿಯರ್ ಎನ್.ಟಿ.ಆರ್ ನಟಿಸಿದ ಬೃಂದಾವನಂ, ಯಶ್ ಅಭಿನಯದ ಜಾನು, ದುನಿಯಾ ವಿಜಿ ಅಭಿನಯಿಸಿದ ಭೀಮಾ ತೀರದಲ್ಲಿ, ಬಂಗಾಲಿ ಚಲನಚಿತ್ರ ಕೋಕಾ 420, ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಬೃಂದಾವನ, ಖ್ಯಾತ ಸಂಗೀತ ನಿರ್ದೇಶಕ ವಿ ಹರಿಕೃಷ್ಣ ನಿರ್ಮಾಣದ ರಾಠಿ ಚಿತ್ರದ ಚಿತ್ರೀಕರಣ ನಡೆದು ಚಿತ್ರ ಯಶಸ್ಸು ಕಂಡ ಬೆನ್ನಲ್ಲೇ ಇದೀಗ ತೆಲುಗಿನ ಬೆಲಂಕೊಂಡಾ ನಿರ್ಮಿಸುತ್ತಿರುವ ಅದ್ಧೂರಿ ವೆಚ್ಚದ ಹೆಸರಾಂತ ನಿರ್ದೇಶಕ ವಿ. ವಿನಾಯಕ ನಿರ್ದೇಶನದಲ್ಲಿ ತಯಾರಾಗುತ್ತಿರುವ ಇನ್ನೂ ಹೆಸರಿಡದ ತೆಲುಗು ಚಿತ್ರದ ಶೂಟಿಂಗ್ ಭರ್ಜರಿಯಾಗಿ ನಡೆದಿದೆ.
ಚಿತ್ರೀಕರಣ ನೋಡಲು ಪಟ್ಟಣ ಸೇರಿದಂತೆ ಸುತ್ತಲಿನ ಗ್ರಾಮಗಳಿಂದ ಅಭಿಮಾನಿಗಳು ತಂಡೋಪ ತಂಡವಾಗಿ ಕಾಲಕಾಲೇಶ್ವರದತ್ತ ಧಾವಿಸುತ್ತಿರುವ ದೃಶ್ಯ ಸಾಮಾನ್ಯವಾಗಿದೆ. ತೇರು ಬೀದಿ ಆವರಣದಲ್ಲಿ ಅಪಾರ ವೆಚ್ಚದಲ್ಲಿ ನಿರ್ಮಿಸಿರುವ ಈಜು ಕೊಳದ ಸೆಟ್ನಲ್ಲಿ ಚಿತ್ರದ ನಾಯಕ ಸಾಯಿ ಶ್ರೀನಿವಾಸ, ಸ್ನೇಹಿತರೊಂದಿಗೆ ಜಲ ಕಬಡ್ಡಿ ಆಡುವ ಹಲವಾರು ಸನ್ನಿವೇಶ ಚಿತ್ರೀಕರಿಸಲಾಯಿತು. ಬಳಿಕ ಪ್ರೊಡಕ್ಷನ್ ಮ್ಯಾನೇಜರ್ ಬಿ. ಬಾಬು ಸುದ್ದಿಗಾರರೊಂದಿಗೆ ಮಾತನಾಡಿ, ಇದೊಂದು ಪ್ರೇಮ ಕಥಾ ಹಂದರವುಳ್ಳ ಸಾಹಸಮಯ ಚಿತ್ರವಾಗಿದ್ದು ಈಗಾಗಲೇ ಆಂಧ್ರ, ಕರ್ನಾಟಕದ ಬಾದಾಮಿ, ಐಹೊಳೆ, ಪಟ್ಟದಕಲ್ಲನಲ್ಲಿ ಚಿತ್ರೀಕರಣಗೊಂಡಿದೆ. ಚಿತ್ರಕ್ಕೆ ದೇವಿಶ್ರೀ ಪ್ರಸಾದ ಸಂಗೀತ ನೀಡಿದ್ದು, ಚಿತ್ರದ ತಾರಾಗಣದಲ್ಲಿ ಮೋಹಕ ತಾರೆ ಸಮಂತಾ ನಾಯಕಿಯಾಗಿ ಅಭಿನಯಿಸಲಿದ್ದು, ಉಳಿದಂತೆ ಕನ್ನಡದ ಹೆಸರಾಂತ ಪಂಚಭಾಷಾ ನಟ ಪ್ರಕಾಶ ರೈ ಸೇರಿದಂತೆ ಹಲವಾರು ಕಲಾವಿದರು ಅಭಿನಯಿಸಲಿದ್ದಾರೆ. ಜ. 26 ರವರೆಗೆ ಶ್ರೀ ಕಾಲಕಾಲೇಶ್ವರ ಸೇರಿದಂತೆ ಸುತ್ತಲಿನ ರಮಣೀಯ ತಾಣಗಳಲ್ಲಿ ಚಿತ್ರೀಕರಣ ನಡೆಯಲಿದೆ ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

