ಗದಗ

ರಸ್ತೆ ಸಂಚಾರಿ ನಿಯಮ ಪಾಲಿಸಿ

Published On :

ಗದಗ: ರಸ್ತೆ ಸಂಚಾರಿ ನಿಯಮಗಳನ್ನು ಪ್ರತಿಯೊಬ್ಬರೂ ಪಾಲಿಸುವುದರಿಂದ ರಸ್ತೆ ಅಪಘಾತಗಳನ್ನು ತಡೆಯಬಹುದು. ವಾಹನ ಸವಾರರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕು ಎಂದು ಗದಗ ಜಿಲ್ಲಾ ಪ್ರಾದೇಶಿಕ ಸಾರಿಗೆ ಅಧಿಕಾರಿ ಪುರುಷೋತ್ತಮ ಹೇಳಿದರು.
ಗದಗ ಸಂಚಾರಿ ಪೊಲೀಸ್ ಠಾಣೆ ಹಾಗೂ ಗದಗ ಪ್ರಾದೇಶಿಕ ಸಾರಿಗೆ ಇಲಾಖೆ ಆಶ್ರಯದಲ್ಲಿ ಕೆ.ಎಲ್.ಇ. ಸಂಸ್ಥೆಯ ಜೆ.ಟಿ. ಮಹಾವಿದ್ಯಾಲಯದಲ್ಲಿ ಏರ್ಪಡಿಸಿದ್ದ 25ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹದ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಗದಗ ಶಹರ ವೃತ್ತದ ಸಿ.ಪಿ.ಐ. ವಿ.ಎನ್. ಪಾಟೀಲ ಮಾತನಾಡಿ, ಅಪಘಾತಗಳು ಮಿತಿಮೀರಿದ ವೇಗದಿಂದ ಸಂಭವಿಸುತ್ತವೆ. ಆದುದರಿಂದ ಅಪಘಾತಗಳಿಂದ ಸಂಭವಿಸುವ ಜೀವ ಹಾನಿಯನ್ನು ತಡೆದು ಅಮೂಲ್ಯವಾದ ಜೀವ ಕಾಪಾಡುವುದರತ್ತ ಸವಾರರ ಚಿತ್ತಯಿರಲಿ ಎಂದು ಕಿವಿಮಾತು ಹೇಳಿದರು.  ಶಹರ ಪೊಲೀಸ್ ಠಾಣೆಯ ಕೃಷ್ಣವೇಣಿ ಮಾತನಾಡಿ, ಸವಾರರು ವಾಹನಗಳ ಚಾಲನೆಯಲ್ಲಿರುವಾಗ ನಿರ್ಲಕ್ಷ್ಯ ಮನೋಭಾವ, ಏಕಾಗ್ರತೆ ಇಲ್ಲದಿರುವುದು, ಮೊಬೈಲ್ನಲ್ಲಿ ಮಾತನಾಡುವುದು ಹಾಗೂ ರಸ್ತೆ ನಿಯಮಗಳನ್ನು ಉಲ್ಲಂಘಿಸುವುದರಿಂದ ಅಪಘಾತಗಳಾಗುತ್ತವೆ ಹಾಗಾಗಿ ರಸ್ತೆ ನಿಯಮಗಳನ್ನು ಪಾಲಿಸಿ ಅಪಘಾತಗಳನ್ನು ತಡೆಯಿರಿ ಎಂದರು. ಮಹಾವಿದ್ಯಾಲಯದ ಪ್ರಾಚಾರ್ಯ ಎಸ್.ಎಸ್. ಯಂಕಂಚಿಯವರು ಮಾತನಾಡಿದರು. ಜಿ.ಕೆ. ನಾಗರಳ್ಳಿ, ಎಸ್.ಜೆ. ಹಿರೇಮಠ ಸ್ವಾಗತಿಸಿದರು. ಪಿಎಸ್ಐ ಪ್ರಸಾದ ಕವರಿ ಹಾಗೂ  ಚಾಮುಂಡೇಶ್ವರಿ ಮುಂತಾದವರು ಹಾಜರಿದ್ದರು. ಪಲ್ಲವಿ ಹಳ್ಳಿಯವರ ಪ್ರಾರ್ಥಿಸಿದರು. ಸ್ವಪ್ನಾ ರೇವಡಿ ವಂದಿಸಿದರು. ವೀಣಾ ಅಂಕಲಗಿ, ಸೌಮ್ಯ ಚನ್ನಿ ನಿರೂಪಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.