ಶಾಶ್ವತ ಕುಡಿವ ನೀರು ಯೋಜನೆಗೆ ರು. 60 ಕೋಟಿ
ಕನ್ನಡಪ್ರಭ ವಾರ್ತೆ, ನರಗುಂದ, ಜ. 28
ಬಹು ಇತಿಹಾಸವನ್ನು ಹೊಂದಿರುವ ಪಟ್ಟಣಕ್ಕೆ ಪದೇ ಪದೇ ಬೇಸಿಗೆಯ ಸಮಯದಲ್ಲಿ ಕುಡಿಯುವ ನೀರಿನ ಸಮಸ್ಯೆಯಾಗುತ್ತಿದೆ. ಈ ಸಮಸ್ಯೆ ಶಾಶ್ವತವಾಗಿ ತಪ್ಪಿಸಲು ರು. 60 ಕೋಟಿ ಯೋಜನೆ ಹಮ್ಮಿಕೊಳ್ಳಲಾಗಿದೆ ಎಂದು ಶಾಸಕ ಬಿ.ಆರ್. ಯಾವಗಲ್ ಹೇಳಿದರು.
ಅವರು ಭಾನುವಾರ ಪಟ್ಟಣದ ಪುರಸಭೆ ಆವರಣದಲ್ಲಿ 22.75ರ ಯೋಜನೆ ಅಡಿಯಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಫಲಾನುಭವಿಗಳಿಗೆ ಅನಿಲ ಸಂಪರ್ಕ ಹಾಗೂ ವಾಜಪೇಯಿ ಮನೆಗಳ ಆಸರೆಯ ಮನೆಗಳ ಹಕ್ಕುಪತ್ರ ವಿತರಣಾ ಸಮಾರಂಭದಲ್ಲಿ ಮಾತನಾಡಿದರು. ರಾಜ್ಯ ಹಾಗೂ ಕೇಂದ್ರ ಸರ್ಕಾರ ಪ್ರತಿ ವರ್ಷ ಸಾವಿರ ಕೋಟಿ ರು. ಹಿಂದುಳಿದ ಪಂಗಡ ಅಭಿವೃದ್ಧಿಗೆ ಕೊಡುತ್ತದೆ. ಅದು ನಿಜವಾದ ಬಡವರಿಗೆ ಸಲ್ಲಬೇಕು. ಅಂದಾಗ ಮಾತ್ರ ಅವರ ಅಭಿವೃದ್ಧಿ ಸಾಧ್ಯವಾಗುತ್ತದೆ ಎಂದುಹೇಳಿದರು.
1989ರಲ್ಲಿ ಪಟ್ಟಣದ ಜನತೆಗೆ ಕುಡಿಯುವ ನೀರು ಪೂರೈಸುವ ಉದ್ದೇಶದಿಂದ ಕೆಂಪಕೆರೆ ನಿರ್ಮಿಸಲಾಗಿದೆ. ಆದರೆ ಈಗ ಪಟ್ಟಣದ ಜನತೆಗೆ ಆ ನೀರು ಸಾಕಾಗುತ್ತಿಲ್ಲ. ಹೀಗಾಗಿ ರು. 60 ಕೋಟಿ ವೆಚ್ಚದಲ್ಲಿ ಜಲಾಶಯದಿಂದ ನೀರಿನ ಪೈಪ್ಲೈನ್ ಅಳವಡಿಸಿ, ನೀರು ಪೂರೈಸಲು ಕ್ರಮ ಕೈಗೊಳ್ಳಲಾಗುವುದು. ಅಲ್ಲದೆ ನೀರಾವರಿ ಕಾಲುವೆಗಳ ರಿಪೇರಿ, ನೆನೆಗುದಿಗೆ ಬಿದ್ದಿರುವ ಏತ ನೀರಾವರಿ ಯೋಜನೆಗಳಿಗೆ ಒತ್ತು ನೀಡಿ, ರೈತರ ಜಮೀನುಗಳಿಗೆ ಕಾಲುವೆ ನೀರಿನ ಅನುಕೂಲ ಮಾಡಲಾಗುವುದು ಅವರು ಹೇಳಿದರು.
ಪುರಸಭೆ ಸದಸ್ಯ ಎಸ್.ಆರ್. ಪಾಟೀಲ, ವೆಂಕರಡ್ಡಿ ದೇವರಡ್ಡಿ, ಸಿ.ಬಿ. ಪಾಟೀಲ, ನಾಗಪ್ಪ ನವಲಗುಂದ, ಸವದತ್ತಿ, ಮಹೇಶ ಬಡಿಗೇರ, ರಫೀಕ್ ಧಾರವಾಡ, ವಿಠ್ಠಲ ಶಿಂದೆ, ರಾಜು ಕಲಾಲ, ಗುರುಪಾದಪ್ಪ ಕುರಹಟ್ಟಿ, ಮಾರುತಿ ಮೇಟಿ, ಎಂ.ಬಿ.ಅರಹುಣಸಿ, ಶಿವನಗೌಡ ಹೆಬ್ಬಳ್ಳಿ, ಪ್ರವೀಣ ಯಾವಗಲ್, ದ್ಯಾಮಣ್ಣ ಸವದತ್ತಿ, ಬಸಪ್ಪ ನರಗುಂದ, ಫಕೀರಪ್ಪ ಜೋಗಣ್ಣವರ, ಪುಂಡಲೀಕಪ್ಪ ಹುಲಜೋಗಿ, ದೀಪಕ ಗೊಡ್ಸ, ಪುರಸಭೆ ಅಧಿಕಾರಿ ಎಸ್. ರಾಜಶೇಖರ, ತಹಸೀಲ್ದಾರ್ ಎಂ. ಸಂತೋಷ, ಬಿ.ವಿ. ಹಡಗಲಿ, ಬಿ.ಎ. ನದಾಫ್, ಆರ್.ಎಸ್. ಪದಕಿ, ದೊಡಮನಿ ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

