ಆರೋಗ್ಯ ಸಂಪತ್ತು ಗಳಿಸಿ: ದಿಂಗಾಲೇಶ್ವರ ಶ್ರೀ
ಶಿರಹಟ್ಟಿ: ಸಮಾಜದಲ್ಲಿ ಎಲ್ಲರೂ ಹಣ, ಬೆಳ್ಳಿ, ಬಂಗಾರ ಸಂಪತ್ತನ್ನು ಗಳಿಸುತ್ತಾರೆ. ಆದರೆ, ಅದೆಲ್ಲಕ್ಕಿಂತ ಮುಖ್ಯವಾದದ್ದು ಆರೋಗ್ಯ ಸಂಪತ್ತು. ಅದನ್ನು ಗಳಿಸಿಕೊಳ್ಳುವ ನಿಟ್ಟಿನಲ್ಲಿ ಎಲ್ಲರೂ ಚಿಂತಿಸಬೇಕು ಎಂದು ಬಾಲೇಹೊಸೂರ ದಿಂಗಾಲೇಶ್ವರ ಮಠದ ಕುಮಾರ ದಿಂಗಾಲೇಶ್ವರ ಸ್ವಾಮೀಜಿ ಹೇಳಿದರು.
ಬಸವ ಯೋಗ ಮತ್ತು ನಿಸರ್ಗ ಚಿಕಿತ್ಸಾ ಕೇಂದ್ರ ಮುಳಗುಂದ, ಅರವಿಂದ ಆಶ್ರಮ ಯಳವತ್ತಿ ಇವರ ಆಶ್ರಯದಲ್ಲಿ ನಡೆದ ಉಚಿತ ಯೋಗ, ಪ್ರಾಣಾಯಾಮ ಮತ್ತು ನಿಸರ್ಗ ಚಿಕಿತ್ಸಾ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಅಸ್ತಮಾ, ಬಿಪಿ, ಮಧುಮೇಹ, ಮಾನಸಿಕ ಅಸ್ವಾಸ್ಥ್ಯ, ಸೊಂಟನೋವು, ಬೊಜ್ಜು, ಗ್ಯಾಸ್ಟಿಕ್, ಸಂಧಿವಾತ, ವಿಪರೀತ ಕೋಪ ಮುಂತಾದ ಕಾಯಿಲೆಗಳನ್ನು ಯೋಗ ಮತ್ತು ನಿಸರ್ಗ ಚಿಕಿತ್ಸೆಯಿಂದ ಗುಣಪಡಿಸಬಹುದು ಎಂದರು.
ಪ್ರತಿ ನಿತ್ಯ ಶಾಲಾ ಮಕ್ಕಳಿಗೆ ಯೋಗ ಶಿಕ್ಷಣ ನೀಡುವುದರಿಂದ ಮಕ್ಕಳ ಬೌದ್ದಿಕ ಮತ್ತು ಮಾನಸಿಕ ಬೆಳವಣಿಗೆ ಸಾಧ್ಯ. ಏಕಾಗ್ರತೆ, ಜ್ಞಾಪಕ ಶಕ್ತಿ ಹೆಚ್ಚಳ, ಮನೋಸ್ಥೈರ್ಯ ಹಾಗೂ ಗ್ರಹಣ ಶಕ್ತಿ ವೃದ್ದಿಯಾಗುವುದು. ಆ ನಿಟ್ಟಿನಲ್ಲಿ ಮಕ್ಕಳಿಗೆ ಪರಿಣಾಮಕಾರಿಯಾದ ಶಿಕ್ಷಣ ನೀಡಬೇಕು. ಯೋಗಕ್ಕೆ ಪ್ರಾಚೀನ ಕಾಲದಿಂದಲೂ ತನ್ನದೇ ಆದ ಇತಿಹಾಸವಿದೆ. ಯೋಗ ದೇಶದ ಸಂಸ್ಕೃತಿಯ ಪ್ರತೀಕ ಎಂದರು.
ಯೋಗಗುರು ವೀರೇಶಜೀ, ಆಶ್ರಮದ ಸಂಚಾಲಕ ಜೋಶಿ, ವಿಶ್ವ ಬಸವ ಧರ್ಮ ಪೀಠದ ಕಾರ್ಯಾಧ್ಯಕ್ಷ ಬಸವರಾಜ ಸಂಗಪ್ಪಶೆಟ್ಟರ, ಯೋಗ ಶಿಕ್ಷಕ ಪ್ರಕಾಶ ಮದ್ದಿನ, ಈರಣ್ಣ ತಡಸದ, ಪ್ರಭು ಬಳಿಗೇರ, ಗ್ರಾಪಂ ಅಧ್ಯಕ್ಷ ಬಸವರಾಜ ನೀಲಗುಂದ, ಮಾಜಿ ಅಧ್ಯಕ್ಷ ಎಫ್.ಎ. ಪಾಟೀಲ, ಡಿ.ವೈ. ಮಲಕಡ್ಡಿ, ಫಕ್ಕಣ್ಣ ಕುರಿ, ಆಶ್ರಮದ ಅಧ್ಯಕ್ಷ ಎಚ್.ಆರ್. ದೊಡಗೌಡ್ರ, ಸುರೇಶ ಬೀರಣ್ಣವರ, ಎಸ್.ಎಸ್. ಮಠಪತಿ, ಬಿ.ಸಿ. ಪಿಡ್ಡನಗೌಡ್ರ, ಎಂ.ಎಸ್. ಗೋದಿ, ಪರ್ವತಗೌಡ್ರ ಪಾಟೀಲ, ಯಲ್ಲಪ್ಪ ದೇವರಗೂಳಿ, ವಿದ್ಯಾ ಪಾಟೀಲ, ಚನ್ನಮ್ಮ ಮಠಪತಿ ಮತ್ತಿತರರು ಇದ್ದರು.
--
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

