ಗದಗ

ಪ್ರಸನ್ನ ಉಪವಾಸಕ್ಕೆ ಗಜೇಂದ್ರಗಡ ನೇಕಾರರ ಸಾಥ್

Published On :

ಕನ್ನಡಪ್ರಭ ವಾರ್ತೆ, ಗಜೇಂದ್ರಗಡ, ಜ. 30
ಕೈಮಗ್ಗ ನೇಕಾರಿಕೆಯ ಉದ್ಯಮ ಉಳಿವಿಗಾಗಿ ಅಖಿಲ ಭಾರತ ಕೈಮಗ್ಗ ಒಕ್ಕೂಟ ವತಿಯಿಂದ ಹಿರಿಯ ರಂಗಕರ್ಮಿ ಪ್ರಸನ್ನ ಅವರು ಹೆಗ್ಗೂಡಿನಲ್ಲಿ ಕೈಗೊಂಡಿರುವ ಉಪವಾಸ ಸತ್ಯಾಗ್ರಹಕ್ಕೆ ಬೆಂಬಲಿಸಿ ಸ್ಥಳೀಯ ಕೈಮಗ್ಗ ನೇಕಾರರು ಹಾಗೂ ವಿವಿಧ ಸಂಘಟನೆಯ ಮುಖಂಡರು ಗುರುವಾರ ವಿಶೇಷ ತಹಸೀಲ್ದಾರ್ ಕಚೇರಿ ಆವರಣದಲ್ಲಿ ಉಪವಾಸ ಸತ್ಯಾಗ್ರಹ       ನಡೆಸಿದರು.
ಉಪವಾಸ ಸತ್ಯಾಗ್ರಹದಲ್ಲಿ ಪಾಲ್ಗೊಂಡಿದ್ದ ಸ್ವಾತಂತ್ರ್ಯ ಯೋಧೆ ವೆಂಕೂಸಾ ಭಾಂಡಗೆ ಮಾತನಾಡಿ, ಅಧುನಿಕ ತಂತ್ರಜ್ಞಾನದ ಭರಾಟೆಗೆ ಸಿಲುಕಿದ ಕೈಮಗ್ಗ ನೇಕಾರಿಕೆ ಉದ್ಯಮ ನಸಿಸುತ್ತಿದೆ. ಜೊತೆಗೆ ಇದನ್ನೆ ನಂಬಿಕೊಂಡು ಜೀವನ ನಡೆಸುತ್ತಿರುವ ಕುಟುಂಬಗಳ ಬದುಕು ದುಸ್ತರವಾಗಿದೆ. ಈ ನಿಟ್ಟಿನಲ್ಲಿ ದೇಶೀಯ ಉದ್ಯಮ ಉಳಿವಿಗಾಗಿ ಚರಕ ಸಂಸ್ಥೆಯ ಸಂಸ್ಥಾಪಕ ಪ್ರಸನ್ನರವರು ಕೈಗೊಂಡ ಹೋರಾಟ ಸತ್ಯಾಗ್ರಹ ಶ್ಲಾಘನೀಯ. ಕೂಡಲೇ ಸರ್ಕಾರ ಕೈಮಗ್ಗ ನೇಕಾರ ಸಮಸ್ಯೆ ಜತೆ ಉದ್ಯಮದ ಉಳಿವಿಗೆ ಯೋಜನೆ ರೂಪಿಸಿ ಸ್ವದೇಶಿ ಕೈಗಾರಿಕೆ ಪ್ರೋತ್ಸಾಹಿಸುವತ್ತ ಸರ್ಕಾರ ಚಿಂತಿಸುವ ಅಗತ್ಯವಿದೆ ಎಂದರು.
ಗದಗ ಜಿಲ್ಲಾ ನೇಕಾರರ ಗೌರವಾಧ್ಯಕ್ಷ ವೀರಣ್ಣ ಸೊನ್ನದ ಮಾತನಾಡಿ, ಗಜೇಂದ್ರಗಡ ಕೈ ಮಗ್ಗದ ಉದ್ಯಮ ತಲೆ ತಲಾಂತರದಿಂದ ಉಳಿಸಿಕೊಂಡಿದೆ. ಇಲ್ಲಿ ಕೈಮಗ್ಗದಿಂದ ತಯಾರಾಗುವ ಸೀರೆ ಮತ್ತು ಖಣಗಳಿಗೆ ಮಹಾರಾಷ್ಟ್ರದ ಸತಾರಾ, ಕೋಲ್ಲಾಪುರ, ಕರಾಡ, ನಾಸಿಕ್ ಮೊದಲಾದ ಮಾರುಕಟ್ಟೆಗಳಲ್ಲಿ ಉತ್ತಮ ಬೇಡಿಕೆಯಿದೆ. ಜತೆಗೆ ಇಲ್ಲಿ ತಯಾರಾಗುವ ರೇಷ್ಮೆ ಕಣಗಳು ದೇಶದಲ್ಲಿಯೇ ಭಾರಿ ಪ್ರಸಿದ್ಧಿ ಪಡೆದಿವೆ ಎಂದರು.
ಪ್ರೊ. ಬಿ.ಎ. ಕೆಂಚರಡ್ಡಿ, ತಿಮ್ಮಣ್ಣ ವನ್ನಾಲ, ವಿಶ್ವನಾಥ ಕೆಂಚಿ, ಪಾಂಡುರಂಗ ಶಿಲವೇರಿ ಮಾತನಾಡಿದರು. ವಿವಿಧ ರಾಜಕೀಯ ಪಕ್ಷಗಳ ಹಾಗೂ ಸಂಘಟನೆಗಳ ಮುಖಂಡರು ಸತ್ಯಾಗ್ರಹಕ್ಕೆ ಬೆಂಬಲ ವ್ಯಕ್ತಪಡಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.