ಭಾವನೆಗಳ ಅಭಿವ್ಯಕ್ತಿಗೆ ಮಾತೃಭಾಷೆ ಶ್ರೇಷ್ಠ ಮಾರ್ಗ: ದೊಡ್ಡಗೌಡರ
ಕನ್ನಡಪ್ರಭ ವಾರ್ತೆ, ಲಕ್ಷ್ಮೇಶ್ವರ, ಜ. 30
ಕನ್ನಡ ಭಾಷೆಯ ಮೇಲೆ ಬೇರೆ ಭಾಷೆಗಳು ನಿರಂತರವಾಗಿ ದಾಳಿ ಮಾಡುತ್ತಿವೆ. ಈ ಪರಭಾಷಾ ದಾಳಿಯನ್ನು ನಮ್ಮ ಮನೆ, ಮನದಲ್ಲಿ ಕನ್ನಡವನ್ನು ಜಾಗ್ರತಗೊಳಿಸುವ ಮೂಲಕ ಉಳಿಸಬೇಕಾಗಿದೆ ಎಂದು ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿಯ ಅಧ್ಯಕ್ಷ ಎಂ.ಎಸ್. ದೊಡ್ಡಗೌಡರ ಹೇಳಿದರು.
ಅವರು ಸಮೀಪದ ಗೊಜನೂರಿನ ಪ್ರೌಢಶಾಲೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಶಿರಹಟ್ಟಿ ತಾಲೂಕು ಘಟಕದ ಆಶ್ರಯದಲ್ಲಿ ಬುಧವಾರ ಏರ್ಪಡಿಸಿದ್ದ ದತ್ತಿ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ನಾಟಕ ಸಾಹಿತ್ಯ ಕುರಿತು ಸಿ.ಜೆ. ಹಿರೇಮಠ ಉಪನ್ಯಾಸ ನೀಡಿ, ನಾಟಕಗಳು ಕೇವಲ ಮನರಂಜನೆ ನೀಡುವ ಜತೆಗೆ ಸಮಾಜ ಸುಧಾರಣೆ ಕಾರ್ಯ ಮಾಡುತ್ತಿದೆ. ನಾಟಕಗಳು ಜನರಿಗೆ ಸುಲಭವಾಗಿ ತಲುಪುತ್ತವೆ ಎಂದರು. ಉಪನ್ಯಾಸಕ ನಾಗರಾಜ ಹಣಗಿ ಜಾನಪದ ಸಾಹಿತ್ಯ ಕುರಿತು ಉಪನ್ಯಾಸ ನೀಡಿದರು. ಅಧ್ಯಕ್ಷತೆ ವಹಿಸಿದ್ದ ಶಿರಹಟ್ಟಿ ತಾಲೂಕು ಕಸಾಪ ಅಧ್ಯಕ್ಷ ಕೆ.ಎ. ಬಳಿಗೇರ, ಗೌರವ ಕಾರ್ಯದರ್ಶಿ ಅಶೋಕ ಸೊರಟೂರ, ಮುಖ್ಯೋಪಾಧ್ಯಾಯ ರವಿ ಬೆಂಚಳ್ಳಿ ಮಾತನಾಡಿದರು.
ರುದ್ರಯ್ಯ ಪುರಾಣಿಕಮಠ, ಸೋಮಣ್ಣ ವಡಕಣ್ಣವರ, ಬಸವರಾಜ ಸಾವುಕಾರ, ಕಸಾಪ ಸದಸ್ಯ ಪ್ರಮೀಳಾ ಸಾಂಗ್ಲೀಕರ ಹಾಗೂ ಶಾಲಾ ಸಿಬ್ಬಂದಿ ವರ್ಗ ಹಾಜರಿದ್ದರು. ಕಸಾಪ ಖಜಾಂಚಿ ಎನ್.ವೈ. ಕುರಿ ಸ್ವಾಗತಿಸಿದರು. ಎನ್.ಎಂ. ಜನಿವಾರದ ನಿರೂಪಿಸಿದರು. ಸದಸ್ಯ ಎಂ.ಡಿ. ತಳ್ಳಳ್ಳಿ ವಂದಿಸಿದರು.
--
ಸಂಸ್ಕೃತ ಭಾಷೆ ಅಧ್ಯಯನ ನಡೆಯಲಿ
ಕನ್ನಡಪ್ರಭ ವಾರ್ತೆ, ಗಜೇಂದ್ರಗಡ, ಜ. 30
ಜಾತಿ, ಮತ, ಪಂಥ, ಭೇದ ಇಲ್ಲದೇ ಸಂಸ್ಕೃತ ಭಾಷೆ ಅಧ್ಯಯನ ನಡೆಯಬೇಕು. ಸಂಸ್ಕೃತ ಭಾಷೆ ಆಡುಭಾಷೆಯನ್ನಾಗಿ ಮಾಡಬೇಕು. ಈ ನಿಟ್ಟಿನಲ್ಲಿ ಸರ್ಕಾರ ಮುಂದಾಗಬೇಕು ಎಂದು ರೋಣದ ಗುಲಗಂಜಿಮಠ ಗುರುಪಾದ ಶ್ರೀಗಳು ಹೇಳಿದರು.
ಅವರು ಸಮೀಪದ ಸೂಡಿ ಗ್ರಾಮದಲ್ಲಿ ಈಚೆಗೆ ಗಜಾನನ ಸಂಸ್ಕೃತ ಪಾಠ ಶಾಲೆಯ ವಾರ್ಷಿಕೋತ್ಸವ ಹಾಗೂ ಪಾಣಿನಿ ಮಂಟಪ ಉದ್ಘಾಟಿಸಿ ಮಾತನಾಡಿದರು.
ಅಧ್ಯಕ್ಷತೆ ವಹಿಸಿ ಜಿ.ಆರ್. ಜೋಶಿ ಮಾತನಾಡಿ, ಈ ಸಂಸ್ಕೃತ ಪಾಠ ಶಾಲೆ ತಮ್ಮ ತಂದೆ ರಾಮಶಾಸ್ತ್ರಿಗಳು 50 ವರ್ಷಗಳ ಹಿಂದೆ ಪರಿಶ್ರಮದಿಂದ ಸ್ಥಾಪಿಸಿ ಬೆಳೆಸಿದ್ದಾರೆ. ಬಳಿಕ ಸರ್ಕಾರದ ಅನುದಾನದಿಂದ ಹಂತ ಹಂತವಾಗಿ ಬೆಳೆದು ಮತ್ತು ಅನೇಕರ ಸಹಾಯದಿಂದ 31 ಅಡಿ ಉದ್ದ 25 ಅಡಿ ಅಗಲದ ವಿಸ್ತೀರ್ಣದಲ್ಲಿ ಪಾಣಿನಿ ಮಂಟಪ ಲೋಕಾರ್ಪಣೆಗೊಳ್ಳಲು ಸಾಧ್ಯವಾಯಿತು ಎಂದರು. ರವೀಂದ್ರ ಕೊಪ್ಪರ ಮತನಾಡಿ, ಸಂಸ್ಕೃತ ಭಾಷೆಯ ಪ್ರಚಾರ ಮಾಡುವುದು ಬಹಳ ಅವಶ್ಯಕವಾಗಿದೆ. ಸಂಸ್ಕೃತ ಭಾಷೆಯ ಮಹತ್ವವನ್ನು ವಿದೇಶಿಯರು ಬಹಳಷ್ಟು ಅರಿತಿದ್ದಾರೆ. ದೇಶ ಎಲ್ಲ ಜನ ದೇವ ಭಾಷೆ ಅರಿಯಲು ಮುಂದಾಗಬೇಕು ಎಂದರು. ಬಾಗಲಕೋಟೆ ಜಿಲ್ಲಾ ಕೋಟೇಕಲ್ ಶಾರದಾ ಸಂಸ್ಕೃತ ಪಾಠಶಾಲೆಯ ನಿವೃತ್ತ ಶಿಕ್ಷಕ ಸೋಮಶೇಖರ ಬಂಕಾಪುರ ಹಾಗೂ ದಾನಿಗಳನ್ನು ಸನ್ಮಾನಿಸಲಾಯಿತು. ಧಾರವಾಡ ವಲಯ ವಿಷಯ ಪರೀವಿಕ್ಷಕ ರಾಮಚಂದ್ರ ಭಟ್, ವಲಯ ಸಂಯೋಜಕ ಬಿ.ಬಿ. ಆರೇರ, ಮಲ್ಲಿಕಾರ್ಜುನ ಬಿದರೂರ ಉಪಸ್ಥಿತರಿದ್ದರು. ಮಕ್ಕಳ ಸಂಸ್ಕೃತ ಭಾಷೆಯಲ್ಲಿ ನೃತ್ಯ, ಭಾಷಣ, ಕಂಠಪಾಠ ಪಠಣ ಮತ್ತು ವಸ್ತು ಪ್ರದರ್ಶನ ಜನ ಮೆಚ್ಚುಗೆ ಪಾತ್ರವಾಯಿತು. ಎನ್.ಎಸ್. ಕುಲಕರ್ಣಿ ಸ್ವಾಗತಿಸಿದರು. ಬಿ.ವಿ. ಜೋಶಿ ನಿರೂಪಿಸಿದರು. ಅರುಣ ಜೋಶಿ ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

