ಗದಗ

ಪಟೇಲರ ತತ್ವಾದರ್ಶ ಎಲ್ಲರಿಗೂ ಮಾದರಿ: ಶ್ರೀ

Published On :

ಮುಂಡರಗಿ: ಸರ್ದಾರ ವಲ್ಲಭಭಾಯಿ ಪಟೇಲರು ಭಾರತದ ಗಣರಾಜ್ಯದ ಸಂಸ್ಥಾಪಕ ಪಿತಾಮಹರಲ್ಲಿ ಒಬ್ಬರು. ಇವರೊಬ್ಬ ಸಾಮಾಜಿಕ ಧುರೀಣರಾಗಿದ್ದು, ಅವರ ತತ್ವಾದರ್ಶಗಳು ಇಂದಿನ ಯುವಕ-ಯುವತಿಯರಿಗೆ ಮಾದರಿಯಾಗಬೇಕು ಎಂದು ನಾಡೋಜ, ಡಾ. ಅನ್ನದಾನೀಶ್ವರ ಶ್ರೀಗಳು ಹೇಳಿದರು.
ಅವರು ಸೋಮವಾರ ಪಟ್ಟಣದ ಅನ್ನದಾನೀಶ್ವರ ಮಠದಲ್ಲಿ ಲೋಹಸಂಗ್ರಹಣಾ ಸಹಕಾರ ಸಮಿತಿ ಕರ್ನಾಟಕ, ಭಾರತದ ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಭಾಯಿ ಪಟೇಲ್ ಏಕತಾ ಪ್ರತಿಮೆಗೆ ಲೋಹಸಂಗ್ರಹಣಾ ಅಭಿಯಾನಕ್ಕೆ ಲೋಹ ನೀಡುವ ಮೂಲಕ ಚಾಲನೆ ನೀಡಿ ಮಾತನಾಡಿದರು. ಪಟೇಲ್ ಅವರು ಸತ್ಯ, ನಿರ್ಭಯತೆ, ಶಾರೀರಿಕ ಶ್ರಮಕ್ಕೆ ಬೆಲೆ, ಹಿಂದುಳಿದ ವರ್ಗದವರ ಉನ್ನತಿಯ ಅವಶ್ಯಕತೆ ಹಾಗೂ ಎಲ್ಲ ಧರ್ಮಗಳತ್ತ ಗೌರವ ಭಾವ ಇತ್ಯಾದಿ ಆದರ್ಶಗಳನ್ನು ಕಾರ್ಯರೂಪಕ್ಕೆ ತಂದವರು. ತಮ್ಮ ನಂಬಿಕೆಗಳತ್ತ ಇವರಿಗಿದ್ದ ನಿಶ್ಚಲ ಶಿಸ್ತು ಮತ್ತು ನಂಬಿಕೆಯಿಂದಾಗಿಯೇ ಜನರು ಇವರನ್ನು ಉಕ್ಕಿನ ಮನುಷ್ಯ ಎಂದು ಬಿರುದು ನೀಡಿದರು. ಗುಜರಾತ್‌ನಲ್ಲಿ ಅವರ ಮೂರ್ತಿ ಮಾಡುತ್ತಿರುವ ಕಾರ್ಯ ಶ್ಲಾಘನೀಯವಾದದ್ದು ಎಂದರು. ಕರಿಬಸಪ್ಪ ಹಂಚಿನಾಳ, ಜಿಪಂ ಸದಸ್ಯ ಹೇಮಗಿರೀಶ ಹಾವಿನಾಳ ಮಾತನಾಡಿದರು. ಈ ಸಂದರ್ಭ ಕೆ.ವಿ. ಹಂಚಿನಾಳ, ದೇವಪ್ಪ ಕಂಬಳಿ, ಎಸ್.ವಿ. ಪಾಟೀಲ, ಸುರೇಶ ಜೈನ್, ದೇವಪ್ಪ ಇಟಗಿ, ಬಸವರಾಜ ಸಸಿಮಠ, ಸುರೇಶ ಮಾಳೆಕೊಪ್ಪ, ಪ್ರಭು ಅಬ್ಬಿಗೇರಿ, ಶಂಕ್ರಪ್ಪ ಬಾರಿಕಾಯಿ, ಶ್ರೀನಿವಾಸ ಅಬ್ಬೀಗೇರಿ, ಮೋಹನ್ ದೇಸಾಯಿ, ಬಸವರಾಜ ಮುಂಡವಾಡ, ಪರುಶುರಾಮ ಕರಡಿಕೊಳ್ಳ, ಶಿವು ನಾಡಗೌಡ್ರ, ಮಂಜುನಾಥ ಇಟಗಿ ಇದ್ದರು. ಪುರಸಭೆ ಸದಸ್ಯ ಶಂಕರಗೌಡ ಪಾಟೀಲ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.