ಗದಗ

ಸಂಘಟನೆಗಳು ಸಮಾಜಮುಖಿಯಾಗಲಿ

Published On :

ಗಜೇಂದ್ರಗಡ: ಸಂಘಟನೆಗಳು ಸಮಾಜಮುಖಿಯ ಮೂಲ ಉದ್ದೇಶ ಹೊಂದಿದಾಗ ಮಾತ್ರ ಅಂತಹ ಸಂಘಟನೆ ಚಿರನೂತನವಾಗಿರುತ್ತವೆ ಎಂದು ಪುರಸಭೆ ಸದಸ್ಯ ಎಂ.ಎಸ್. ಹಡಪದ ಹೇಳಿದರು.
ಅವರು ಈಚೆಗೆ ಸ್ಥಳೀಯ ಕುಷ್ಟಗಿ ರಸ್ತೆ ಬಳಿ ಸ್ನೇಹಬಂಧ ವೈರ್‌ಮನ್ ಹಾಗೂ ಪ್ಲೆಂಬರ್ ಕಾರ್ಮಿಕರ ಸಂಘ ಉದ್ಘಾಟಿಸಿ ಮಾತನಾಡಿದರು. ದೇಶದ ಅಭಿವೃದ್ದಿಯಲ್ಲಿ ಕಾರ್ಮಿಕರ ಪಾತ್ರ ಅತ್ಯಂತ ಪ್ರಾಮುಖ್ಯವಾದದ್ದು, ಕಾರ್ಮಿಕರು ಸಂಘಟಿತರಾಗಿ ಕಾರ್ಯ ನಿರ್ವಹಿಸಿದಾಗ ಮಾತ್ರ ತಮ್ಮ ಹಕ್ಕು ಪಡೆಯಲು ಸಾಧ್ಯ. ಈ ನಿಟ್ಟಿನಲ್ಲಿ ಸಿಐಟಿಯು ಸಂಘಟನೆ ಕಾರ್ಮಿಕರ ಶ್ರಯೋಭಿವೃದ್ದಿಗೆ ನಡೆಸಿದ ಹೋರಾಟದ ಫಲವಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರ ಕಾರ್ಮಿಕ ಮಂಡಳಿ ರಚಿಸಿದೆ. ಈ ಮೂಲಕ ಕಾರ್ಮಿಕರ ಕಲ್ಯಾಣಕ್ಕಾಗಿ ಹತ್ತು ಹಲವು ಯೋಜನೆ ಜಾರಿಗೊಳಿಸಿದೆ. ಸಂಘಟನಾತ್ಮಕ ಶಕ್ತಿಯಿಂದ ಸರ್ಕಾರದ ಸೌಲಭ್ಯ ಪಡೆದು ಅಭಿವೃದ್ದಿ ಹೊಂದಿ ಎಂದರು. ಹೆಸ್ಕಾಂ ಶಾಖಾ ಅಭಿಯಂತರ ಎಸ್.ಬಿ. ಮಹಾಮನಿ ಮಾತನಾಡಿದರು. ಗದಗ ಜಿಲ್ಲಾ ಕಾರ್ಮಿಕ ಸಂಘದ ಅಧಿಕಾರಿ ಎಂ. ಬಾಲಕೃಷ್ಣ, ಷಣ್ಮುಖಸಾ ರಂಗ್ರೇಜಿ, ಸಿಐಟಿಯು ಜಿಲ್ಲಾ ಕಾರ್ಯದರ್ಶಿ ಮಾರುತಿ ಚಿಟಗಿ, ತಾಲೂಕು ಗುತ್ತಿಗೆದಾರರ ಸಂಘದ ಅಧ್ಯಕ್ಷ ಜಗದೀಶ ಪಲ್ಲೇದ, ಸಿದ್ದರಾಮೇಶ್ವರ ಕಟ್ಟಡ ಹಾಗೂ ಬಾರ್‌ಬೆಂಡಿಂಗ್ ಸಂಘದ ಅಧ್ಯಕ್ಷ ಯಲ್ಲಪ್ಪ ಬಂಕದ, ಎಂ.ಎಂ. ಯಲಬುಣಚಿ, ಎಸ್. ಸಾಲಿಮಠ, ಎಸ್. ರುದ್ರಗಂಟಿ, ಪ್ರಕಾಶ ಜೂಚನಿ, ಆನಂದ ಸವಣೂರ, ಶರಣಪ್ಪ ಬೆನ್ನೂರ, ಶಿವಕುಮಾರ ಚುರ್ಚಿಹಾಳ ಇದ್ದರು.
ಇದೇ ಸಂದರ್ಭ ಹಿರಿಯ ಗುತ್ತಿಗೆದಾರ ಡಿ.ಎಚ್. ಬಳೊಟಗಿ ಅವರನ್ನು ಸನ್ಮಾನಿಸಲಾಯಿತು. ಶಿವಕುಮಾರ ಅರಳಿ ಸ್ವಾಗತಿಸಿದರು. ಎಸ್.ಐ. ಪತ್ತಾರ ನಿರೂಪಿಸಿದರು. ಅನ್ವರಹುಸೇನ ವಂದಿಸಿದರು.
--
ಅಕ್ಷರಸ್ಥರಾಗಿ ಅಭಿವೃದ್ಧಿಯಾಗೋಣ
ಗದಗ: ಮುಸ್ಲಿಂ ಸಮಾಜದಲ್ಲಿ ಅನಕ್ಷರತೆ ಮಹಾಶಾಪವಾಗಿದ್ದು, ಸಮಾಜದ ಪ್ರತಿಯೊಂದು ಕುಟುಂಬಗಳಲ್ಲಿ ಅಕ್ಷರಸ್ಥರಾಗಿ ಅಭಿವೃದ್ದಿ ಹೊಂದಬೇಕಾಗಿದೆ ಎಂದು ರಾಜ್ಯ ಮುಸ್ಲಿಂ ಜಾಗೃತ ವೇದಿಕೆಯ ರಾಜ್ಯಾಧ್ಯಕ್ಷ ಫರೀದ ಸುಂಕದ ಹೇಳಿದರು.
ಅವರು ಭಾನುವಾರ ಜಿಲ್ಲೆಯ ರೋಣ ತಾಲೂಕಿನ ಮಾರನಬಸರಿ ಗ್ರಾಮದ ಯುವಕ ಮಂಡಳ ವತಿಯಿಂದ ಸಂಘಟಿಸಿದ ಸಭೆಯಲ್ಲಿ ಮುಸ್ಲಿಂ ಸಮಾಜದ ಸಮುದಾಯ ಉದ್ದೇಶಿಸಿ ಮಾತನಾಡಿದರು. ಸಮಾಜದಲ್ಲಿ ವ್ಯಾಜ್ಯಗಳು ಉಂಟಾದಲ್ಲಿ ಪೊಲೀಸ್ ಠಾಣೆ, ನ್ಯಾಯಾಲಯಗಳಿಗೆ ವ್ಯರ್ಥವಾಗಿ ಅಲೆಯದೆ ತಮ್ಮ ಗ್ರಾಮಗಳಲ್ಲಿ ಬಗೆಹರಿಸಿಕೊಳ್ಳಬೇಕು. ತಮ್ಮಲ್ಲಿ ನ್ಯಾಯ ಸಿಗದಿದ್ದರೆ ನಮ್ಮ ವೇದಿಕೆ ವತಿಯಿಂದ ನ್ಯಾಯ ಒದಗಿಸಿ ಅನ್ಯಾಯಕ್ಕೆ ಒಳಗಾದವರಿಗೆ ನ್ಯಾಯ ಒದಗಿಸಿ ವ್ಯಾಜ್ಯ ಮುಕ್ತ ಸಮಾಜ ನಿರ್ಮಾಣ ಮಾಡಲಾಗುವುದು ಎಂದರು.
ವೇದಿಕೆಯ ರಾಜ್ಯ ಸಂಘಟನಾ ಕಾರ್ಯದರ್ಶಿ ನಿಸ್ಸಾರಅಹ್ಮದ ಖಾಜಿಯವರು ಮಾತನಾಡಿದರು. ಜಿಲ್ಲಾ ಸಂಚಾಲಕ ಜಾವೇದ ಸುಂಕದ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಂ.ಐ. ಮುಲ್ಲಾ ಪ್ರಾಸ್ತಾವಿಕ ಮಾತನಾಡಿದರು. ಶಿರಾಜಅಹ್ಮದ ಖಾಜಿ, ಎನ್.ಎಚ್. ಖಾದ್ರಿ, ಹಸನಸಾಬ ದೋಟಿಹಾಳ, ಮಂಜೂರ ದೋಟಿಹಾಳ, ಜಾಪರಸಾಬ ಆಲೂರ, ಹುಸೇನಸಾಬ ಮಾಲೇಖಾನ, ಮರ್ತುಜಾ ಸವದಿ, ಅಬ್ದುಲಸಾಬ ಗದಗ, ರಿಯಾಜ ಆಲೂರ ಮುಂತಾದವರು ಇದ್ದರು.
--

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.