ಕಾಲಕಾಲೇಶ್ವರ ಜಿನ್ನಿಂಗ್ ಫ್ಯಾಕ್ಟರಿಗೆ ಡಿಸಿ ಭೇಟಿ
ಕನ್ನಡಪ್ರಭ ವಾರ್ತೆ, ಗಜೇಂದ್ರಗಡ, ಜ. 31
ಸಮೀಪದ ಕಾಲಕಾಲೇಶ್ವರ ಗ್ರಾಮದಲ್ಲಿ ಹತ್ತಿಕಾಳನ್ನು ಡಿಲಿಂಕ್ ಮಾಡುವ ಮೂಲಕ ಪರಿಸರ ಮೇಲೆ ಆ್ಯಸಿಡ್ ದಾಳಿ ನಡೆಸಿರುವ ಜಿನ್ನಿಂಗ್ ಫ್ಯಾಕ್ಟರಿಗೆ ಜಿಲ್ಲಾಧಿಕಾರಿ ಎನ್.ಎಸ್. ಪ್ರಸನ್ನಕುಮಾರ ಶುಕ್ರವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಜೀವ ಸಂಕುಲಕ್ಕೆ ಗಂಡಾತರಕಾರಿಯಾದ ಡಿಲಿಂಕ್ ಮಾಡಿದರೆ ಕಠಿಣ ಶಿಕ್ಷೆಗೆ ಗುರಿಪಡಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಐತಿಹಾಸಿಕ ದೇಗುಲ ಹೊಂದಿರುವ ಕಾಲಕಾಲೇಶ್ವರ ಗ್ರಾಮದಲ್ಲಿ ಯಾವುದೇ ಇಲಾಖೆಯಿಂದ ಪರವಾನಗಿ ಪಡೆಯದೇ ಅನಧಿಕೃತವಾಗಿ ತಲೆ ಎತ್ತಿರುವ ಹತ್ತಿ ಜಿನ್ನಂಗ್ ಫ್ಯಾಕ್ಟರಿಗಳು ಬಳಸಿ ಬಿಟ್ಟ ಆ್ಯಸಿಡ್ ಮಿಶ್ರಿತ ಕಲುಷಿತ ರಾಸಾಯನಿಕ ನೀರಿನಲ್ಲಿ ನಿಗದಿತ ಪ್ರಮಾಣಕಿಂತಲೂ ಹೆಚ್ಚಿನ ಪ್ರಮಾಣದ ಆಸಿಡ್‌ನ್ನು ಬಳಸಿ ಡಿಲಿಂಕ್ ಮಾಡಿರುವುದು ಪ್ರಾಥಮಿಕ ತನಿಖೆಯಿಂದ ತಿಳಿದಿದೆ. ತಕ್ಷಣ ಇದನ್ನು ನಿಲ್ಲಿಸುವಂತೆ ನೋಟಿಸ್ ಕೊಡಲು ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಪ್ರಾದೇಶಿಕ ಅಧಿಕಾರಿ ಶೋಭಾ ಗಜಕೋಶಗೆ ಜಿಲ್ಲಾಧಿಕಾರಿ ಎನ್.ಎಸ್. ಪ್ರಸನ್ನಕುಮಾರ ಆದೇಶಿಸಿದರು. ಕಾಲಕಾಲೇಶ್ವರ ಗ್ರಾಮ ಆಸ್ತಿ ನಂ. 2006ರಿಂದ ಸರ್ವೆ ನಂಬರ್ 60/2 ಮತ್ತು 53/6ನೇ ಜಮೀನಿನಲ್ಲಿ ಅನಧಿಕೃತವಾಗಿ ತಲೆ ಎತ್ತಿದ ಜಿನ್ನಿಂಗ್ ಕಾರ್ಖಾನೆಗಳು ತಮ್ಮ ಆವರಣದಲ್ಲಿ ದೊಡ್ಡ ದೊಡ್ಡ ಗುಂಡಿಗಳನ್ನು ತೋಡಿ ಕಾರ್ಖಾನೆ ಬಳಸಿ ಬಿಟ್ಟ ಆ್ಯಸಿಡ್ ಮಿಶ್ರಿತ ಕಲುಷಿತ ರಾಸಾಯನಿಕ ನೀರನ್ನು ಅದರಲ್ಲಿ ಸಂಗ್ರಹಿಸಿರುವುದು ಕಾನೂನು ಬಾಹಿರವಾಗಿದೆ. ಕಾರ್ಖಾನೆ ಮಾಲೀಕರು ಡಿಲಿಂಕ್ ಮಾಡುವುದನ್ನು ನಿಲ್ಲಿಸದಿದ್ದರೆ ಕ್ರಿಮಿನಲ್ ಕೇಸ್ ಹಾಕಲಾಗುವುದು ಎಂದು ಎಚ್ಚರಿಸಿದರು.
ಜೀವ, ಜಲಕ್ಕೆ ಅಪಾಯಕಾರಿಯಾದ ಆ್ಯಸಿಡ್ ಬಳಸಲು ನೀತಿ, ನಿಯಮಗಳಿವೆ. ಅದನ್ನು ಎಲ್ಲಂದರಲ್ಲಿ ಬಳಸಲು ಅವಕಾಶಲಿಲ್ಲ. ಆ್ಯಸಿಡ್ ಖರೀದಿಗೆ ಸರ್ಕಾರ ಪರವಾನಗಿ ಅವಶ್ಯ. ಆದರೆ, ಇಲ್ಲಿ ಅಂತಹ ಯಾವುದೇ ನಿಯಮ ಪಾಲಿಸದೇ ಬೇಕಾಬಿಟ್ಟಿಯಾಗಿ ಬಳಸಿರುವುದು ಅಪರಾಧ. ಜಿನ್ನಿಂಗ್ ಫ್ಯಾಕ್ಟರಿ ಮಾಲೀಕರು ಸ್ಟ್ರಾಂಗ್ ಆ್ಯಸಿಡ್‌ನ್ನು ಎಲ್ಲಿಂದ ಖರೀದಿಸಿದ್ದಾರೆ? ಅದರ ಎಲ್ಲ ದಾಖಲೆಗಳನ್ನು ಪರಿಶೀಲನೆ ನಡೆಸಿ ತನಿಖೆ ನಡೆಸಲಾಗುವುದು ಎಂದರು.
ಕಾಲಕಾಲೇಶ್ವರ ದೇಗುಲ ಬಳಿ ತಲೆ ಎತ್ತಿರುವ ಜೀವ ಸಂಕುಲಕ್ಕೆ ಮಾರಕವಾದ ಡಿಲಿಂಕ್‌ನಲ್ಲಿ ತೊಡಗಿರುವ 2 ಜಿನ್ನಿಂಗ್ ಫ್ಯಾಕ್ಟರಿ ಬಂದ ಮಾಡಿ ಮಾಲೀಕರ ವಿರುದ್ಧ ಕ್ರಮ ಜರುಗಿಸುವಂತೆ ದೇಗುಲ ಧರ್ಮದರ್ಶಿ ಮಂಗಲಾ ಘೋರ್ಪಡೆಯವರು ಜಿಲ್ಲಾಧಿಕಾರಿ ಎನ್.ಎಸ್. ಪ್ರಸನ್ನಕುಮಾರಗೆ ಮನವಿ ಸಲ್ಲಿಸಿದರು.
ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಪ್ರಾದೇಶಿಕ ಅಧಿಕಾರಿ ಶೋಭಾ ಗಜಕೋಶ, ಗ್ರಾಪಂ ಸದಸ್ಯ ಪರಶುರಾಮ ಚಿಲಝರಿ, ಪಾಂಡುರಂಗ ಶಿಲವೇರಿ, ಶರಣಪ್ಪ ಹಿರೇಮಠ, ಆನಂದ ಭಾಂಡಗೆ, ಶರಣಪ್ಪ ಚಿಲ್‌ಝರಿ, ವೀರಯ್ಯ ಹೀರೇಮಠ, ಶರಣಪ್ಪ ಕೆಂಪನಾಳ, ಮುತ್ತು ಪಾಟೀಲ, ಶಿವಯ್ಯ ಹಿರೇಮಠ, ಶರಣು ಚಿಲಝರಿ, ಮಲ್ಲಿಕಾರ್ಜುನ ಕೆಂಪನಾಳ, ಮಂಜುನಾಥ ಭಜಂತ್ರಿ, ಮಂಜುನಾಥ ಮುರಡಿ ತಾವುಸಾ ಗಾಂಗಜಿ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

