ಗದಗ

ಕಸಾಪ ಜಿಲ್ಲಾಧ್ಯಕ್ಷ ಜಿ.ಬಿ. ಮಾಸಣಗಿ ಕ್ಷಮೆ ಯಾಚಿಸಲಿ

Published On :

ಶಿಗ್ಗಾಂವಿ: 81ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಹಾವೇರಿಯಲ್ಲೇ ನಡೆಯಬೇಕೆಂದು ಇತ್ತೀಚೆಗೆ ಮಡಿಕೇರಿಯಲ್ಲಿ ನಡೆದ ಸಮ್ಮೇಳನದಲ್ಲಿ ಘೋಷಣೆಯಾಗಿದ್ದು, ಈ ಮಧ್ಯೆ ಕಸಾಪ ಜಿಲ್ಲಾಧ್ಯಕ್ಷ ಜಿ.ಬಿ. ಮಾಸಣಗಿ ರಾಣಿಬೆನ್ನೂರಿನಲ್ಲಿ ನಡೆಸುವುದು ಒಳ್ಳೆಯದು ಎಂದು ಸರ್ವಾಧಿಕಾರಿ ವರ್ತನೆ ಮೂಲಕ ಜಿಲ್ಲೆಯ ಜನತೆಯಲ್ಲಿ ಗೊಂದಲವುಂಟಾಗಿದೆ ಕೂಡಲೇ ಅವರು ಕ್ಷಮೆಯಾಚಿಸಬೇಕೆಂದು ಕಲಾವಿದರು, ವಿದ್ಯಾರ್ಥಿ ಸಂಘಟನೆಗಳು ಒತ್ತಾಯಿಸಿವೆ.
ಸಮ್ಮೇಳನ ಕೇವಲ ಕಸಾಪ ಜಿಲ್ಲಾಧ್ಯಕ್ಷರಿಂದ ನಡೆಯುವುದಿಲ್ಲ, ಅದು ಯಶಸ್ವಿಯಾಗಬೇಕಾದರೆ ಜಿಲ್ಲೆಯ ಜನತೆ, ಸಾಹಿತಿಗಳು, ಸಂಘ-ಸಂಸ್ಥೆಗಳು, ರೈತ-ಕಾರ್ಮಿಕರು, ರಾಜಕಾರಣಿಗಳು, ಪ್ರಗತಿಪರ ಮಠಾಧೀಶರಾಗಿ ಎಲ್ಲರ ಸಹಕಾರ ಬಹಳ ಮುಖ್ಯವಾಗಿ ಬೇಕಾಗುತ್ತದೆಂಬುದನ್ನು ಅರಿಯಬೇಕು. ಜಿಲ್ಲಾ ಕೇಂದ್ರ ಹಾವೇರಿ ಸೂಕ್ತವಾಗಿದ್ದು, ಅಗತ್ಯ ಮೂಲಭೂತ ಸೌಲಭ್ಯ ಕಲ್ಪಿಸಲು ಅವಕಾಶವಿದೆ. ಆದರೆ, ಮಾಸಣಗಿಯವರು ಹಾವೇರಿ ಬದಲಾಗಿ ರಾಣಿಬೆನ್ನೂರಿನಲ್ಲಿ ನಡೆಸುವುದಾಗಿ ಹೇಳಿ ಒಡಕನ್ನುಂಟು ಮಾಡಿ ದ್ರೋಹ ಬಗೆಯುತ್ತಿದ್ದಾರೆ.
ಇದು ಸಮ್ಮೇಳನ ಯಶಸ್ಸಿಗೆ ತಾವೇ ಅಡ್ಡಗಾಲು ಹಾಕಿದಂತಾಗುವುದು. ತಕ್ಷಣ ತಿದ್ದಿಕೊಂಡು ಎಲ್ಲರನ್ನೊಳಗೊಂಡು ಕೆಲಸಕ್ಕಿಳಿಯಬೇಕು. ಅದು ತಮ್ಮಿಂದ ಸಾಧ್ಯವಾಗದಿದ್ರೆ ಕಸಾಪ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಗೌರವಯುತವಾಗಿ ರಾಜಿನಾಮೆ ನೀಡಿ ಮನೆಯಲ್ಲಿರುವುದು ಒಳಿತು ಹಾವೇರಿಯಲ್ಲಿಯೇ ಸಮ್ಮೇಳನ ನಡೆಯಬೇಕು. ಇಲ್ಲವಾದರೆ ಉಗ್ರ ಹೋರಾಟಕ್ಕೆ ವಿದಾರ್ಥಿಗಳು ಹಾಗೂ ಸಾಹಿತಿ ಕಲಾವಿದರು ಮುಂದಾಗಬೇಕಾಗುತ್ತದೆಂದು ಭಾರತ ವಿದ್ಯಾರ್ಥಿ ಫೆಡರೇಷನ್ (ಎಸ್‌ಎಫ್‌ಐ) ಶಿಗ್ಗಾಂವಿ ತಾಲೂಕು ಸಮಿತಿ ಎಚ್ಚರಿಸಿದೆ.
ಚಂಪಾಗೆ ಅವಮಾನ: ಖಂಡನೆ
ಹಾವೇರಿಯಲ್ಲೇ ಸಮ್ಮೇಳನ ನಡೆಯಲಿ ಎಂದು ಹೇಳಿದ್ದ ಪ್ರೊ. ಚಂದ್ರಶೇಖರ್ ಪಾಟೀಲ (ಚಂಪಾ) ಯಾರು ಅವರು ಇಲ್ಲಿ ರಂಪ ಮಾಡಿದ್ದಾರೆ ಎಂದು ಹೇಳುವ ಮೂಲಕ ಈ ನೆಲದ ಹಿರಿಯ ಸಾಹಿತಿ ಚಂಪಾ ಅವರಿಗೆ ಅವಮಾನ ಮಾಡಿರುವುದು ದುರಹಂಕಾರದ ಪರಮಾವಧಿಯಾಗಿದ್ದು, ತಕ್ಷಣ ಅವರ ಕ್ಷಮೆಯನ್ನು ಮಾಸಣಗಿಯವರು ಕೇಳಬೇಕು. ಜತೆಗೆ ತಾತ್ವಿಕ ಭಿನ್ನಾಭಿಪ್ರಾಯವಿದ್ದರೆ ಮಾತನಾಡಿಕೊಂಡು ಬಗೆಹರಿಸಿಕೊಳ್ಳಲಿ. ಅದರ ಬದಲು ಈ ರೀತಿ ಮಾತನಾಡುವುದು ಉಡಾಫೆಯಾಗುತ್ತದೆ. ಇದರಿಂದಾಗಿ ಜಿಲ್ಲೆಯ ಸಾಹಿತಿ ಕಲಾವಿದರಿಗೆ ಹಾಗೂ ಪ್ರಗತಿಪರ ಚಿಂತನೆಯ ಮನಸುಗಳಿಗೆ ನೋವುಂಟು ಮಾಡಿದ್ದು, ಇನ್ನು ಮುಂದಾದರೂ ಇಂಥ ಉಡಾಫೆಯ ಮಾತುಗಳಿಂದ ದೂರವಿದ್ದು, ಸೌಹಾರ್ದತೆ ಕಾಪಾಡಿಕೊಳ್ಳಬೇಕು. ಸಾಹಿತ್ಯಿಕ ವಲಯದಲ್ಲಿ ತೋರಬೇಕಿದೆ ಎಂದು ಭಾರತ ವಿದ್ಯಾರ್ಥಿ ಫೆಡರೇಷನ್(ಎಸ್‌ಎಫ್‌ಐ) ಶಿಗ್ಗಾಂವಿ ತಾಲೂಕು ಸಮಿತಿ ಜಿಲ್ಲಾ ಉಪಾಧ್ಯಕ್ಷ ಸುಭಾಸ ಮಾದರ, ಜಿಲ್ಲಾ ಸಹ ಕಾರ್ಯದರ್ಶಿ ಮಲ್ಲೇಶ ಗೋಟನವರ, ತಾಲೂಕು ಅಧ್ಯಕ್ಷ ಸಂತೋಷ ಹಿರೆವಳ್ಳಿ, ಜ್ಯೋತಿ ದೊಡ್ಮನಿ, ಮಂಜುನಾಥ ಹರಿಜನ, ಈರಣ್ಣ ಚಟ್ಟಿ, ದೀಪಾ ದೊಡ್ಮನಿ, ಸುನೀಲ ಲಮಾಣಿ, ಪರಶುರಾಮ ಎನ್, ಮಲೀಕ ರಾಜನಾಳ, ಮಹಾಚಿತೇಶ ಕ್ಯಾಲಕೊಂಡ ಮುಂತಾದವರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.