ಗದಗ

ವಿದ್ಯುತ್ ಉಳಿತಾಯಕ್ಕೆ ಶ್ರಮಿಸಿ: ಕುಮಾರ ಆಚಾರ್ಯ

Published On :

ಶಿಗ್ಗಾಂವಿ: ಆಧುನಿಕ ಯುಗದ ಜೀವನಾಡಿ ವಿದ್ಯುತ್ ಅದನ್ನು ಹಿತಮಿತವಾಗಿ ಬಳಸಿ, ಅದರ ಸುರಕ್ಷತೆ ತಿಳಿದು ವಿದ್ಯುತ್ ಅಪಘಾತಗಳಿಂದ ದೂರವಿರಬೇಕಾಗಿದ್ದು, ವಿದ್ಯುತ್ ಎಲ್ಲ ಪ್ರಗತಿಗಳ ಅಡಿಪಾಯವಾಗಿದ್ದರಿಂದ ವಿದ್ಯುತ್ ಉಳಿತಾಯ ಅಗತ್ಯವಾಗಿದೆ ಎಂದು ಶಿಗ್ಗಾಂವಿ ಹೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಅಧಿಕಾರಿ ಕುಮಾರ ಆಚಾರ್ಯ ಹೇಳಿದರು.
ಪಟ್ಟಣದ ಪುರಸಭೆ ವೃತ್ತದ ಬಳಿ ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ ವತಿಯಿಂದ ತಾಲೂಕಿನ ಸಾರ್ವಜನಿಕರಲ್ಲಿ ವಿದ್ಯುತ್ ಉಳಿತಾಯ ಮತ್ತು ಸುರಕ್ಷತೆ ಆದೋಲನ ಪ್ರಯುಕ್ತ, 'ಬಾ ಗೆಳತಿ ಬಾ' ರೂಪಕ ಪ್ರದರ್ಶನ ಮಾಡಲಾಯಿತು. ರೂಪಕವನ್ನು ಸಾಹಿತಿ ಸತೀಶ ಕುಲಕರ್ಣಿ, ಕೆ.ಎಂ. ಜಾನವೇಕರ, ಸಿ.ಎನ್. ಬಡ್ನಿ ಹಾಗೂ ಹೆಸ್ಕಾಂ ತಂಡದವರು ಪ್ರದರ್ಶಿಸಿದರು.
ಶಿಗ್ಗಾಂವಿ ವಿದ್ಯುತ್ ಗುತ್ತಿಗೆದಾರ ಸಂಘದ ಅಧ್ಯಕ್ಷ ಮಂಜುನಾಥ ಮನ್ನಣ್ಣವರ ಮಾತನಾಡಿ, ಎಲ್ಲ ಜನರಿಗೆ ವಿದ್ಯುತ್ ಬಳಕೆ ಹಾಗೂ ಸುರಕ್ಷತೆ ಕುರಿತು ರೂಪಕದ ಮೂಲಕ ಜನರ ಮನಸ್ಸಿಗೆ ಮುಟ್ಟಿಸುವ ಕಾರ್ಯ ಇದಾಗಿದೆ. ಆವರು ಸ್ವ ಆಸಕ್ತಿಯಿಂದ ವಿದ್ಯುತ್ ಉಳಿತಾಯ ಹಾಗೂ ಸುರಕ್ಷತೆ ಬಗ್ಗೆ ಮುಂದಾಗಬೇಕೆಂದು ಕರೆ ನೀಡಿದರು.
ಗುತ್ತಿಗೆದಾರ ಸಂಘದ ಪದಾಧಿಕಾರಿಗಳು ಹಾಗೂ ವಿದ್ಯುತ್ ಕಾರ್ಮಿಕರು ವಿದ್ಯುತ್ ಉಳಿತಾಯದ ಬಗ್ಗೆ ಸಿಎಫ್‌ಎಲ್ ಬಲ್ಬಗಳು ಹಾಗೂ ಸೋಲಾರ್ ವಾಟರ್ ಹಿಟರ್‌ಗಳ ಚಿತ್ರಗಳನ್ನು ಪ್ರದರ್ಶಿಸಿ ಗಮನ ಸೆಳೆದರು.
ಈ ಸಂದರ್ಭದಲ್ಲಿ ಶಾಖಾಧಿಕಾರಿ ಪಿ.ಎ. ಬಂಕಾಪುರ, ವಿ.ವಿ. ಪತ್ತಾರ, ಬಿ.ಎಚ್. ಬಂಡಿವಡ್ಡರ, ತಾಂತ್ರಿಕ ಸಹಾಯಕ ಕೆ.ವಿ. ಕುಲಕರ್ಣಿ, ಗುತ್ತಿಗೆದಾರ ಸಂಘದ ಕಾರ್ಯದರ್ಶಿ ಎನ್.ಎಸ್. ಹಿರೇಮಠ, ಪುರಸಭೆ ಸದಸ್ಯರಾದ ಶಿವಪ್ರಸಾದ ಸುರಗಿಮಠ, ನಾಸಿರ ದೊಡ್ಡಮನಿ, ಮುತ್ತು ಕಟ್ಟಿಮನಿ, ಜೆ.ಎಸ್. ಹಿರೇಮಠ, ಅಬ್ದುಲ್ ಆದಂಬಾಯಿ, ಹೆಸ್ಕಾಂ ಸಿಬ್ಬಂದಿ ವರ್ಗ ಹಾಗೂ ವಿದ್ಯುತ್ ಕಾರ್ಮಿಕ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು. ಶಾಖಾಧಿಕಾರಿ ಶಿವಾನಂದ ಹಾದಿಮನಿ ನಿರೂಪಿಸಿ, ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.