ಪತ್ರಿಕೆ ಜವಾಬ್ದಾರಿಯಿಂದ ಕೆಲಸ ಮಾಡಲಿ
ಕನ್ನಡಪ್ರಭ ವಾರ್ತೆ, ಮುಂಡರಗಿ, ಜು. 1
ಮಾರುಕಟ್ಟೆಯಲ್ಲಿ ನೂರಾರು ದಿನಪತ್ರಿಕೆಗಳಿದ್ದರೂ ಸಹ ವಸ್ತುನಿಷ್ಠ ವರದಿಗಳನ್ನು ಮಾಡುವ ಪತ್ರಿಕೆಗಳಿಗೆ ಯಾವಾಗಲೂ ಬೆಲೆ ಇದ್ದೇ ಇದೆ. ಸದೃಢ ಮತ್ತು ಸಶಕ್ತ ಸಮಾಜ ನಿರ್ಮಾಣಕ್ಕೆ ಪತ್ರಿಕೆಗಳು ಬಹಳಷ್ಟು ಜವಾಬ್ದಾರಿಯಿಂದ ಕಾರ್ಯನಿರ್ವಹಿಸಬೇಕಾಗಿದೆ ಎಂದು ಸಂಸದ ಶಿವಕುಮಾರ ಉದಾಸಿ ಹೇಳಿದರು.
ಅವರು ಮಂಗಳವಾರ ಮುಂಡರಗಿ ಕೆ.ಆರ್. ಬೆಲ್ಲದ ಕಾಲೇಜು ಸಭಾಭವನದಲ್ಲಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ಜಗದ್ಗುರು ಅನ್ನದಾನೀಶ್ವರ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಆಶ್ರಯದಲ್ಲಿ ಆಯೋಜಿಸಲಾಗಿದ್ದ ಪತ್ರಿಕಾ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಆಸಕ್ತಿ ಮೂಡಿಸುವ ಮತ್ತು ಬೋಧನಾ ರೀತಿಯಲ್ಲಿ ವರದಿಗಳು ಬಂದರೆ ಸಮಾಜದಲ್ಲಿ ಪರಿಣಾಮ ಬೀರುತ್ತವೆ. ಸಕಾರಾತ್ಮಕ ವಿಚಾರಗಳನ್ನು ಯುವ ಜನತೆಗೆ ಕೊಡುವುದು ಇಂದಿನ ಅವಶ್ಯವಾಗಿದೆ ಎಂದರು.
ಜ. ಡಾ. ಅನ್ನದಾನೀಶ್ವರ ಮಹಾಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಕಾಶೀನಾಥ ಬಿಳಿಮಗ್ಗದ ಅಧ್ಯಕ್ಷತೆ ವಹಿಸಿದ್ದರು.
ಸಮಾರಂಭದಲ್ಲಿ ಹಿರಿಯ ಪತ್ರಕರ್ತ ಮಲ್ಲಿಕಾರ್ಜುನ ಸಿದ್ದಣ್ಣವರ, ಮಾಜಿ ಶಾಸಕ ರಾಮಣ್ಣ ಲಮಾಣಿ, ಜಿಪಂ ಸದಸ್ಯ ಹೇಮಗಿರೀಶ ಹಾವಿನಾಳ, ತಾಪಂ ಅಧ್ಯಕ್ಷ ನಿಂಗಬಸಪ್ಪ ಪ್ಯಾಟಿ, ಪುರಸಭೆ ಅಧ್ಯಕ್ಷೆ ಭಾರತಿ ಹಕ್ಕಿ, ಉಪಾಧ್ಯಕ್ಷ ಸೋಮನಗೌಡ ಗೌಡರ, ಪ್ರೊ. ಎಸ್.ಎಂ. ಹೊಸಮಠ, ಪ್ರಾ. ಡಿ. ಪ್ರಕಾಶ, ಕರಬಸಪ್ಪ ಹಂಚಿನಾಳ, ಡಾ. ಎಂ.ಬಿ. ಬೆಳವಟಗಿ, ರಜನೀಕಾಂತ ದೇಸಾಯಿ, ಕೊಟ್ರೇಶ ಅಂಗಡಿ, ದೇವಪ್ಪ ಕಂಬಳಿ, ಎ.ಪಿ. ದಂಡಿನ. ಪವನ ಚೋಪ್ರಾ, ಮಂಜುನಾಥ ಇಟಗಿ, ಮಂಜುನಾಥ ಮುಧೋಳ, ದೇವಪ್ಪ ಇಟಗಿ ಸೇರಿದಂತೆ ಪತ್ರಕರ್ತರ ಸಂಘದ ಸದಸ್ಯರು ಪಾಲ್ಗೊಂಡಿದ್ದರು.
ಸರ್ಕಾರಿ ಯೋಜನೆಗಳ ಮಾಹಿತಿ ಇರಲಿ
ಗದಗ: ಸರ್ಕಾರ ಅಲ್ಪಸಂಖ್ಯಾತರಿಗಾಗಿ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದ್ದು, ಅವುಗಳ ಬಗ್ಗೆ ಸರಿಯಾದ ರೀತಿಯಲ್ಲಿ ಮಾಹಿತಿಯನ್ನು ಪಡೆದುಕೊಂಡು ಪ್ರತಿಯೊಬ್ಬರ ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಗಮನ ನೀಡಬೇಕು ಎಂದು ಎಸ್ಡಿಎಂಸಿ ಸದಸ್ಯ ಹಾಗೂ ಅಲ್ಪಸಂಖ್ಯಾತ ಮುಖಂಡ ಉಮರ್ ಫಾರೂಕ್ ಹುಬ್ಬಳ್ಳಿ ಹೇಳಿದರು.
ಅವರು ಮಂಗಳವಾರ ನಗರದ ಸರ್ಕಾರಿ ಮಾದರಿಯ ಉರ್ದು ಕೇಂದ್ರ ಶಾಲೆ ನಂ. 2ರಲ್ಲಿ ಆಯೋಜಿಸಲಾಗಿದ್ದ ಯೋಜನೆಗಳ ತಿಳಿವಳಿಕೆ ಕಾರ್ಯಕ್ರಮ ಕುರಿತು ಮಾತನಾಡಿದರು. ಶ್ರೀಮತಿ ಎನ್.ಎ. ಖಾಜಿ ಮಾತನಾಡಿ, ಸರ್ಕಾರಿ ಸೌಲಭ್ಯಗಳನ್ನು ಯಾವ ರೀತಿ ಪಡೆಯಬೇಕು. ಶಿಷ್ಯವೇತನ ಪಡೆಯಲು ಯಾವ ದಾಖಲೆಗಳು ನೀಡಬೇಕು ಎನ್ನುವುದರ ಕುರಿತು ಮಾಹಿತಿ ನೀಡಿದರು. ಸುನಂದಾ ಹುಳ್ಯಾಳ, ಅಲ್ಪಸಂಖ್ಯಾತರ ಶಾದಿಭಾಗ್ಯ, ಶಮ್ಮಿ ಶಕ್ತಿ, ಕಾಲೇಜುವರೆಗೂ ಶಿಷ್ಯವೇತನ ಹಾಗೂ ಎಲ್ಲ ಸೌಲಭ್ಯ ಯಾವ ರೀತಿಯಲ್ಲಿ ಪಡೆಯಬೇಕು ಎನ್ನುವುದರ ಕುರಿತು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಎಸ್ಡಿಎಂಸಿ ಅಧ್ಯಕ್ಷ ಅಕ್ಬರಸಾಬ್ ಬಬರ್ಚಿ ಮಾತನಾಡಿ, ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಪಡೆಯಲು 21 ದಿನ ಬೇಕಾಗುತ್ತದೆ. ಶಿಷ್ಯವೇತನಕ್ಕೆ ಜುಲೈ 5 ಕೊನೆಯ ದಿನವಾಗಿದೆ. ಅದಕ್ಕಾಗಿ ಇದನ್ನು ಮುಂದಿನ ತಿಂಗಳುವರೆಗೆ ಮುಂದೂಡಬೇಕು. ಈ ಬಗ್ಗೆ ಗದಗ ಜಿಲ್ಲಾ ಉಸ್ತುವಾರಿ ಸಚಿವರಿಗೆ ಮನವಿ ಮಾಡುವುದಾಗಿ ತಿಳಿಸಿದರು. ಎಚ್.ಡಿ. ನೂರಬಾಷಾ, ಗುಮ್ಮಗೋಳ, ಅಬೂಬಕರ ಅಣ್ಣಿಗೇರಿ, ಅನ್ವರ ಶಿರಹಟ್ಟಿ, ರಾಜಾಖಾನ ಪಠಾಣ, ಸಲೀಂ ಬಳ್ಳಾರಿ, ಸತ್ತಾರಸಾಬ್ ಶಿರಹಟ್ಟಿ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

