ಮುಂಡರಗಿ ರೈಲು ಮಾರ್ಗ ಮಂಜೂರು ಮಾಡಿ
ಮುಂಡರಗಿ: ಗದಗದಿಂದ ಮುಂಡರಗಿ ಮಾರ್ಗವಾಗಿ ಹರಿಹರಕ್ಕೆ ನೂತನ ರೈಲು ಮಾರ್ಗವನ್ನು ಕೇಂದ್ರ ಸರ್ಕಾರ ಬರುವ ರೇಲ್ವೆ ಬಜೆಟ್ನಲ್ಲಿ ಮಂಜೂರು ಮಾಡಬೇಕೆಂದು ಆಗ್ರಹಿಸಿ ತಾಲೂಕು ಸಾರ್ವಜನಿಕ ಹೋರಾಟ ವೇದಿಕೆಯು ಮಂಗಳವಾರ ಇಲ್ಲಿನ ತಹಸೀಲ್ದಾರ್ ಕಚೇರಿ ಎದುರು ಧರಣಿ ನಡೆಸಿತು.
ಹಾವೇರಿ ಲೋಕಸಭಾ ವ್ಯಾಪ್ತಿಯ ಮುಂಡರಗಿ ಹಾಗೂ ಬಳ್ಳಾರಿ ಲೋಕಸಭಾ ವ್ಯಾಪ್ತಿಗೆ ಬರುವ ಹೂವಿನ ಹಡಗಲಿ ಪಟ್ಟಣಗಳಿಗೆ ರೈಲು ಮಾರ್ಗಗಳೇ ಇರುವುದಿಲ್ಲ. ಗದಗದಿಂದ ಮುಂಡರಗಿ, ಹೂವಿನಹಡಗಲಿ ಮತ್ತು ಹರಪನಹಳ್ಳಿ ಮಾರ್ಗವಾಗಿ ಹರಿಹರಕ್ಕೆ ಸೇರುವ ನೂತನ ರೈಲು ಮಾರ್ಗವನ್ನು ಸ್ಥಾಪಿಸಿದರೆ ಸೋಲಾಪುರ, ಬಿಜಾಪುರ, ಬಾಗಲಕೋಟಿ, ಬದಾಮಿ, ಗದಗ, ಮುಂಡರಗಿ, ಹೂವಿನಹಡಗಲಿ ಮತ್ತು ಹರಪನಹಳ್ಳಿ ಮಾರ್ಗವಾಗಿ ಓಡಾಡುವ ಪ್ರಯಾಣಿಕರಿಗೆ ಸಾಕಷ್ಟು ಅನುಕೂಲವಾಗಲಿದೆ. ಮುಂಡರಗಿ, ಹೂವಿನಹಡಗಲಿ ಮತ್ತು ಹರಪನಹಳ್ಳಿ ತಾಲೂಕುಗಳು ಬಹಳ ಹಿಂದುಳಿದಿದ್ದು, ಅಭಿವೃದ್ಧಿ ಹೊಂದಲು ಈ ರೇಲ್ವೆ ಮಾರ್ಗ ಸಹಕಾರಿಯಾಗುತ್ತದೆ ಎಂದು ತಹಸೀಲ್ದಾರ್ ಮೂಲಕ ಕೇಂದ್ರ ರೇಲ್ವೆ ಸಚಿವರಿಗೆ ಅರ್ಪಿಸಿದ ಮನವಿಯಲ್ಲಿ ತಿಳಿಸಿದ್ದಾರೆ.
ವೇದಿಕೆ ಸಂಚಾಲಕ ಬಸವರಾಜ ನವಲಗುಂದ, ವೈ.ಎನ್. ಗೌಡರ ಮಾತನಾಡಿ, 10-11 ವರ್ಷಗಳಿಂದ ನೂತನ ರೇಲ್ವೆ ಮಾರ್ಗಕ್ಕಾಗಿ ಹೋರಾಟಗಳನ್ನು ಮಾಡುತ್ತಾ ಬಂದಿದ್ದರೂ ಸರ್ಕಾರಗಳು ಕಣ್ಣು ತೆರದಿಲ್ಲ. ರೇಲ್ವೆ ಮಾರ್ಗ ಪ್ರಾರಂಭವಾದರೆ ಹಿಂದುಳಿದ ತಾಲೂಕುಗಳು ಮತ್ತಷ್ಟು ಬೆಳೆಯಲು ಅನುಕೂಲವಾಗುತ್ತದೆ. ರಾಜ್ಯದವರೇ ರೇಲ್ವೆ ಮಂತ್ರಿಗಳಾಗಿದ್ದರಿಂದ ಮಾರ್ಗ ಮಂಜೂರಾತಿ ನೀಡಬೇಕೆಂದು ಆಗ್ರಹಿಸಿದರು. ಬಸಪ್ಪ ವಡ್ಡರ, ಅಂದಾನಗೌಡ ಕುಲಕರ್ಣಿ, ಕೆ.ಎಸ್. ಪಾಟೀಲ, ಯಮನಪ್ಪ ಭಜಂತ್ರಿ, ರಾಮಚಂದ್ರ ಗಾರವಾಡ, ಅಲ್ಲಾಸಾಬ ಕವಲೂರ ಇತರರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

