ಪುರಸಭೆ ಸದಸ್ಯರ ಮಧ್ಯೆ 'ಕಾಮಗಾರಿ' ವಾಗ್ವಾದ
ಲಕ್ಷ್ಮೇಶ್ವರ: ಇಲ್ಲಿಯ ಪುರಸಭೆಯಲ್ಲಿ ಗುರುವಾರ ನಡೆದ ಸಾಮಾನ್ಯ ಸಭೆಯಲ್ಲಿ ಸ್ಥಾಯಿ ಸಮಿತಿ ಅಧ್ಯಕ್ಷ ಗಂಗಾಧರ ಮ್ಯಾಗೇರಿ ಹಾಗೂ ಸದಸ್ಯ ಬಸವರಾಜ ಓದಾನವರ ಮಧ್ಯ ಕಾಮಗಾರಿ ಚೆಕ್ ಪಡೆದಿರುವುದಕ್ಕೆ ಸಂಬಂಧಿಸಿದಂತೆ ಮಾತಿನ ಚಕಮಕಿ ನಡೆಯಿತು.
4 ವರ್ಷಗಳ ಹಿಂದೆ ಹಲವಾರು ಕಾಮಗಾರಿಗಳನ್ನು ಮಾಡಲು ಟೆಂಡರ್ ಕರೆದು, ಕಾಮಗಾರಿ ಮಾಡಲು ಗುತ್ತಿಗೆ ಪಡೆದುಕೊಂಡು ಕಾಮಗಾರಿಯನ್ನು ಅರ್ಧಂಬರ್ಧ ಮಾಡಿದ್ದು, ಬಾಕಿ ಉಳಿದಿರುವ ಕಾಮಗಾರಿಗಳನ್ನು ಮಾಡದೆ ಸತಾಯಿಸುತ್ತಿರುವ ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಸೇರಿಸಲು ಈ ಹಿಂದೆ ಶಿಫಾರಸು ಮಾಡಲಾಗಿತ್ತು, ಅದರ ಕುರಿತು ಜಿಲ್ಲಾಧಿಕಾರಿಗೆ ಪತ್ರ ಬರೆಯುವಂತೆ ಕಳೆದ ಸಾಮಾನ್ಯ ಸಭೆಯಲ್ಲಿ ಠರಾವು ಪಾಸ್ ಮಾಡಲಾಗಿತ್ತು. ಅಲ್ಲದೆ ಈ ಕುರಿತು ಗುತ್ತಿಗೆದಾರರಿಗೆ ನೋಟಿಸ್ ನೀಡುವಂತೆ ತಿಳಿಸಲಾಗಿತ್ತು.
ಪುರಸಭೆಯ ಯಾವುದೆ ನೋಟಿಸ್ನ್ನು ದಾಡಿಬಾಯಿ ಎನ್ನುವ ಗುತ್ತಿಗೆದಾರರು ಸ್ವೀಕರಿಸುತ್ತಿಲ್ಲ. ಆದರೆ, ಗುತ್ತಿಗೆದಾರರ ಹೆಸರಿನಲ್ಲಿ ಚೆಕ್ಕುಗಳು ಮಾತ್ರ ನೀಡಿಕೆಯಾಗುತ್ತಿವೆ. ಇದು ಹೇಗೆ? ಎಂದು ಗಂಗಾಧರ ಮ್ಯಾಗೇರಿ ಎತ್ತಿದ ಪ್ರಶ್ನೆಗೆ ಸದಸ್ಯ ಬಸವರಾಜ ಓದಾನವರ ಆಕ್ಷೇಪ ವ್ಯಕ್ತಪಡಿಸಿದಾಗ ಇಬ್ಬರ ನಡುವೆ ಮಾತಿನ ಚೆಕಮಿಕಿ ನಡೆಯಿತು. ಇದಕ್ಕೂ ಮೊದಲು ಸದಸ್ಯ ಗಣಪತಿ ಬೇವಿನಮರದ ಮಾತನಾಡಿ, ಹಳೆಯ ಕಾಮಗಾರಿ ಮಾಡದಿರುವ ಗುತ್ತಿಗೆದಾರರ ಮೇಲೆ ಯಾವ ಕ್ರಮ ಕೈಗೊಂಡಿದ್ದೀರಿ? ಎಂಬ ಬಗ್ಗೆ ಸಭೆಗೆ ಮಾಹಿತಿ ನೀಡಬೇಕು. ಅಲ್ಲದೆ ಕಾಮಗಾರಿ ಮಾಡದಿರುವ ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಸೇರಿಸುವಂತೆ ಈ ಹಿಂದೆ ಠರಾವು ಪಾಸ್ ಮಾಡಲಾಗಿತ್ತು. ಹೀಗಾಗಿ ಠರಾವು ಪಾಸ್ ಮಾಡಿದ ವಿಷಯಗಳನ್ನು ಸಾಮಾನ್ಯ ಸಭೆಯಲ್ಲಿ ಪದೇ ಪದೆ ಪ್ರಸ್ತಾಪ ಮಾಡುವ ಬದಲು ಬೇರೆ ವಿಷಯಗಳ ಬಗ್ಗೆ ಚರ್ಚೆ ನಡೆಸುವುದು ಸೂಕ್ತ ಎನ್ನುವ ಮಾತಿಗೆ ಎಲ್ಲ ಸದಸ್ಯರು ಬೆಂಬಲ ನೀಡಿದರು. ಸದಸ್ಯ ಮಹೇಶ ಹೊಗೆಸೊಪ್ಪಿನ, ಮಾಜಿ ಅಧ್ಯಕ್ಷ ವಿ.ಜಿ. ಪಡಗೇರಿ, ಜಯಕ್ಕ ಕಳ್ಳಿ, ರಾಜು ಕುಂಬಿ, ಗುರು ಮೆಡ್ಲೇರಿ, ರಾಮಣ್ಣ ರಿತ್ತಿ ಮಾತನಾಡಿದರು. ಗಂಗಮ್ಮ ಫಕ್ಕೀರಸ್ವಾಮಿಮಠ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಎಂ.ಆರ್. ಪಾಟೀಲ, ಮುಖ್ಯಾಧಿಕಾರಿ ಉಮೇಶ ಗುಡ್ಡದ ಸದಸ್ಯರು ಹಾಜರಿದ್ದರು. ಸಭೆಯ ಆರಂಭದಲ್ಲಿ ಪುರಸಭೆಗೆ ನೂತನವಾಗಿ ನಾಮ ನಿರ್ದೇಶನಗೊಂಡ 5 ಸದಸ್ಯರನ್ನು ಹಾರ್ದಿಕವಾಗಿ ಸ್ವಾಗತಿಸಲಾಯಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

