ಕೆರೆ ಅವಲಂಬಿತ ಗ್ರಾಮಗಳಲ್ಲಿ ನೀರಿಗೆ ಹಾಹಾಕಾರ
ಕನ್ನಡಪ್ರಭ ವಾರ್ತೆ, ನರಗುಂದ, ಜು. 4
ಜಿಲ್ಲೆಯಲ್ಲಿ ಕುಡಿವ ನೀರಿಗಾಗಿ ಕೆರೆಗಳನ್ನು ಆಶ್ರಯಿಸಿರುವ ಹೆಚ್ಚಿನ ಗ್ರಾಮಗಳು ನರಗುಂದ ತಾಲೂಕಿನಲ್ಲಿ ಇವೆ. ತಾಲೂಕಿನ ಕೆರೆಗಳಲ್ಲಿ ಸಂಗ್ರಹವಾಗಿದ್ದ ನೀರು ಖಾಲಿಯಾಗಿದ್ದು, ಸಾರ್ವಜನಿಕರು ಕೆಲವೆಡೆ ಅನಿವಾರ್ಯವಾಗಿ ಕೊಳವೆಬಾವಿಯ (ಗಡಸು) ನೀರನ್ನೇ ಕುಡಿಯಬೇಕಾಗಿದೆ. ಇದರ ಬಗ್ಗೆ ಗಮನ ನೀಡಬೇಕಾದ ತಾಲೂಕು ಆಡಳಿತ ಮಾತ್ರ ನಿದ್ದೆಗೆ ಜಾರಿದ್ದು, ಸಾರ್ವಜನಿಕರ ಆರೋಗ್ಯ ಕಾಪಾಡುವವರ್ಯಾರು ಎನ್ನುವ ಪ್ರಶ್ನೆ ಎದುರಾಗಿದೆ.
ತಾಲೂಕಿನ ರಡ್ಡೇರ-ನಾಗನೂರ ಗ್ರಾಮದಲ್ಲಿ 2 ತಿಂಗಳ ಹಿಂದೆ ಕೆರೆಯಲ್ಲಿನ ನೀರು ಮುಗಿದು ಹೋಗಿದ್ದು, ಗ್ರಾಮದ ಜನತೆ ತೀವ್ರ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಗ್ರಾಮಗಳಿಗೆ ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡುವಂತೆ ಗ್ರಾಮಸ್ಥರು ಹಲವಾರು ಬಾರಿ ತಹಸೀಲ್ದಾರ್ ಸೇರಿದಂತೆ ಹಿರಿಯ ಅಧಿಕಾರಿಗಳಿಗೆ ವಿನಂತಿಸಿದರೂ ಪ್ರಯೋಜನವಾಗಿಲ್ಲ. ಕೆರೆಯಲ್ಲಿ ನೀರು ಖಾಲಿಯಾಗುತ್ತಿರುವ ಹಿನ್ನೆಲೆಯಲ್ಲಿ ಮಲಪ್ರಭಾ ಕಾಲುವೆಯ ಮೂಲಕ ನೀರು ಭರ್ತಿ ಮಾಡಬೇಕು ಎಂದು ಹಲವಾರು ಬಾರಿ ಮನವಿ ಮಾಡಿದರೂ ಅಧಿಕಾರಿಗಳು ಗಮನವನ್ನೇ ನೀಡುತ್ತಿಲ್ಲ.
ಗ್ರಾಮಸ್ಥರು ಹಳ್ಳಗಳಲ್ಲಿ ದೊಡ್ಡ ಒರತಿ ತೋಡಿ ಅಲ್ಲಿಂದ ಬರುವ ಸಿಹಿ ನೀರನ್ನು ಕುಡಿಯುತ್ತಿದ್ದರು. ಆದರೆ ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿನಲ್ಲಿ ಮಳೆ ಸಮರ್ಪಕ ಸುರಿಯದ ಹಿನ್ನೆಲೆಯಲ್ಲಿ ಹಳ್ಳದ ಗುಂಡಿಗಳಲ್ಲಿಯೂ ನೀರು ಲಭ್ಯವಾಗದಿರುವುದು ಗ್ರಾಮಸ್ಥರಿಗೆ ತಲೆನೋವಾಗಿ ಪರಿಣಮಿಸಿದೆ.
ಶಾಸಕರು ಮೌನ: ಅಧಿಕಾರಿಗಳಿಗೆ ಬಿಸಿ ಮುಟ್ಟಿಸಿ, ಜನತೆಗೆ ಟ್ಯಾಂಕರ್ ಮೂಲಕವಾದರೂ ಶುದ್ದವಾದ ಕುಡಿವ ನೀರನ್ನು ತಲುಪಿಸುವ ನಿಟ್ಟಿನಲ್ಲಿ ಶಾಸಕರು ಅದೇಕೆ ಮೌನ ವಹಿಸಿರುವುದು. ಸಾರ್ವಜನಿಕ ವಲಯದಲ್ಲಿ ಚರ್ಚೆಯಾಗುತ್ತಿದೆ.
ಎಸ್.ಜಿ. ತೆಗ್ಗಿನಮನಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

