ಗದಗ

ಇ-ಟ್ರೇಡಿಂಗ್ ವಿರೋಧಿಸಿ ಪ್ರತಿಭಟನೆ

Published On :

ಕನ್ನಡಪ್ರಭ ವಾರ್ತೆ, ಗದಗ, ಜು, 5
ನಗರದಲ್ಲಿರುವ ಎಪಿಎಂಸಿಯಲ್ಲಿ ಇ-ಟ್ರೇಡಿಂಗ್ ಮೂಲಕ ಕೃಷಿ ಹುಟ್ಟುವಳಿ ಮಾರಾಟ ವ್ಯವಸ್ಥೆಯನ್ನು ಶನಿವಾರ ಜಾರಿಗೆ ತರಲಾಗಿದ್ದು, ಈ ಪ್ರಕ್ರಿಯೆಯನ್ನು ವಿರೋಧಿಸಿ ಶನಿವಾರ ಬೆಳಗ್ಗೆ ವರ್ತಕರು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಆಡಳಿತ ಕಚೇರಿಗೆ ಮುತ್ತಿಗೆ ಹಾಕಿ ಟೈರ್‌ಗೆ ಬೆಂಕಿ ಹಚ್ಚಿದರು.
ಇ-ಟ್ರೇಡಿಂಗ್ ವರ್ತಕರು, ದಲ್ಲಾಳಿಗಳಿಗೆ ತೀವ್ರ ತೊಂದರೆಯನ್ನುಂಟು ಮಾಡಿದೆ. ಜು. 8ರಿಂದ ಇ-ಟ್ರೇಡಿಂಗ್ ಜಾರಿಗೊಳಿಸುವ ಕುರಿತು ವರ್ತಕರೊಂದಿಗೆ ಚರ್ಚಿಸಿ ನಿರ್ಣಯ ಕೈಗೊಳ್ಳುವ ಕುರಿತು ಚಿಂತನೆಯಲ್ಲಿದ್ದರೆ, ಜಿಲ್ಲೆಯಲ್ಲಿ ಶನಿವಾರದಿಂದಲೇ ಇ-ಟ್ರೇಡಿಂಗ್ ಜಾರಿಗೊಳಿಸಿರುವುದನ್ನು ವರ್ತಕರುಖಂಡಿಸಿದರು.  
ರೈತರ ಹಾಗೂ ವರ್ತಕರ ವಿರೋಧಿ ಯೋಜನೆಗಳನ್ನು ಗದಗ ಜಿಲ್ಲೆಯಿಂದಲೇ ಪ್ರಾರಂಭಿಸಲಾಗುತ್ತಿದ್ದು, ಸರ್ಕಾರವು ಇ-ಟ್ರೇಡಿಂಗ್ ಜಾರಿ ಕುರಿತು ಇನ್ನೂ ಚಿಂತನೆಯಲ್ಲಿದ್ದರೆ ಗದಗ ಎಪಿಎಂಸಿಯಲ್ಲಿ ಜಾರಿಗೊಳಿಸಲಾಗಿದೆ.  
ಯೋಜನೆಯಿಂದಾಗಿ ಜಿಲ್ಲೆಯ ವರ್ತಕರು, ಚಿಕ್ಕ ಚಿಕ್ಕ ದಲ್ಲಾಳಿಗಳ ಬಳಿ ಬರಬೇಕಿದ್ದ ರೈತರು ನೇರವಾಗಿ ಇ-ಟ್ರೇಡಿಂಗ್ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಈಗಾಗಲೇ ವರ್ತಕರು ಸಾವಿರಾರು ರೈತರಿಗೆ ಮುಂಗಡವಾಗಿ ಹಣ ನೀಡಿದ್ದು, ಇದರಿಂದಾಗಿ ವರ್ತಕರಿಗೆ ತೀವ್ರ ತೊಂದರೆಯಾಗಲಿದೆ. ಈ ಯೋಜನೆಯಿಂದ ಕೇವಲ ಹೊರ ದೇಶದಲ್ಲಿರುವ ಬೃಹತ್ ಉದ್ದಿಮೆದಾರರಿಗೆ ಈ ಲಾಭ ದೊರೆಯಲಿದ್ದು, ಇದನ್ನು ಜಿಲ್ಲೆಯ ವರ್ತಕರೆಲ್ಲರೂ ವಿರೋಧಿಸುವುದಾಗಿ ತಿಳಿಸಿದರು.
ಬೆಳಗ್ಗೆ 10 ಗಂಟೆಗೆ ಇ-ಟ್ರೇಡಿಂಗ್ ಮೂಲಕ ಕೃಷಿ ಹುಟ್ಟುವಳಿ ಮಾರಾಟ ವ್ಯವಸ್ಥೆಯನ್ನು ಪ್ರಾರಂಭಿಸುತ್ತಿದಂತೆಯೇ ಆಕ್ರೋಶಗೊಂಡ ವರ್ತಕರು, ಕೃಷಿ ಉತ್ಪನ್ನ ಮಾರುಕಟ್ಟೆಯ ಆಡಳಿತ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು. ಸ್ಥಳಕ್ಕೆ ಪೊಲೀಸರು ಆಗಮಿಸಿದ ವರ್ತಕರನ್ನು ತಡೆಯುವಲ್ಲಿ ಸಫಲರಾದರು. ಅಲ್ಲದೇ ವರ್ತಕರು ಮಾರುಕಟ್ಟೆಯ ಪ್ರಾಂಗಣವನ್ನು ಬಂದ್ ಮಾಡಿ 2 ಕಡೆಗಳಲ್ಲಿ ಟೈರ್‌ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು. ಬೆಳಗ್ಗೆ ಪ್ರಾರಂಭವಾದ ಪ್ರತಿಭಟನೆಯು ಸಂಜೆಯವರೆಗೂ ಮಂದುವರಿಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.