ಹುಯಿಲಗೋಳ ನಾರಾಯಣರಾವ್ ಶ್ರೇಷ್ಠ ಕವಿ
ಕನ್ನಡಪ್ರಭ ವಾರ್ತೆ, ಗದಗ, ಜು. 7
ಹುಯಿಲಗೋಳ ನಾರಾಯಣರಾವ್ ಅವರು ಈ ಯುಗದ ಶ್ರೇಷ್ಠ ಕವಿ ಎಂದು ಹಿರಿಯ ಕವಿ, ನಾಟಕಕಾರ ಸಿಜಿಬಿ ಹಿರೇಮಠ ಹೇಳಿದರು.
ಅವರು ಈಚೆಗೆ ನಗರದ ಮಹೇಂದ್ರಕರ್ ವೃತ್ತದ ಬಳಿ ಇರುವ ಎಂ.ಎಸ್. ಹುಲ್ಲೂರ ಫೌಂಡೇಶನ್ ಕಚೇರಿ ಮತ್ತು ಸಿಇಟಿ ಕೋರ್ಸ್ ಕಚೇರಿಯಲ್ಲಿ ಹುಯಿಲಗೋಳ ನಾರಾಯಣರಾವ್ ಕಲಾ ಮತ್ತು ಸಂಸ್ಕೃತಿ ರಾಜ್ಯ ಸಮಿತಿ, ಎಂ.ಎಸ್.ಹುಲ್ಲೂರ ಫೌಂಡೇಶನ್ ವತಿಯಿಂದ ಜರುಗಿದ ಹುಯಿಲಗೋಳ ನಾರಾಯಣರಾವ್ 44 ನೇ ಪುಣ್ಯಸ್ಮರಣೋತ್ಸವದಲ್ಲಿ ಮಾತನಾಡಿದರು.
ನಾಡಕವಿ ಹುಯಿಲಗೋಳ ನಾರಾಯಣರಾವ್ ಹುಯಿಲಗೋಳ, ನಾಗಾವಿ, ಕಳಸಾಪುರದ 3 ಊರಿನ ಜಹಗೀರದಾರರನ್ನು ಲೆಕ್ಕಿಸದೇ ನಾಡಿನ ಜಲ, ನೆಲ, ಭಾಷೆಯ ಸೇವೆಗೆ ಟೊಂಕಕಟ್ಟಿ ಅವಿರತವಾಗಿ ಹೋರಾಡಿದವರು. ಸ್ವಾತಂತ್ರ್ಯ ಪೂರ್ವದಲ್ಲಿ ಗಡಿಭಾಷೆ ಪ್ರದೇಶದಲ್ಲಿ 1924ರಲ್ಲಿ ನಮ್ಮ ಕನ್ನಡ ನಾಡ ಧ್ವಜವನ್ನು ಮೆರೆಸಿದ ಕೀರ್ತಿ ನಾರಾಯಣರಾವ್ ಅವರಿಗೆ ಸಲ್ಲುತ್ತದೆ ಎಂದರು.
ಸ್ಮರಣೋತ್ಸವ ಸಮಾರಂಭವನ್ನು ನವಕರ್ನಾಟಕ ಜನಪರ ರಾಜ್ಯಾಧ್ಯಕ್ಷ ಪಿ. ಸುಬ್ರಮಣ್ಯಂರಡ್ಡಿ ಅವರು ನಾಡಕವಿ ಹುಯಿಲಗೋಳ ನಾರಾಯಣರಾವ್ ಅವರ ಭಾವಚಿತ್ರಕ್ಕೆ ಹೂಮಾಲೆ ಹಾಕಿ ಉದ್ಘಾಟಿಸಿದರು. ನವಕರ್ನಾಟಕ ಜನಪರ ಅಭಿವೃದ್ಧಿ ರಾಜ್ಯ ಕಾರ್ಮಿಕ ಘಟಕದ ಅಧ್ಯಕ್ಷ ಎಸ್.ಎಸ್. ರಡ್ಡಿ ಅಧ್ಯಕ್ಷತೆ ವಹಿಸಿದ್ದರು. ನವಕರ್ನಾಟಕ ಜನಪರ ಅಭಿವೃದ್ಧಿ ವೇದಿಕೆಯ ಜಿಲ್ಲಾಧ್ಯಕ್ಷ ಶಿವಕುಮಾರ ರಾಮನಕೊಪ್ಪ ಮಾತನಾಡಿದರು.
ಸಮಿತಿಯ ಉಪಾಧ್ಯಕ್ಷ ಎನ್.ಕೆ. ಕೊರ್ಲಹಳ್ಳಿ, ಎಂ.ಆರ್. ನದಾಫ, ಎಂ.ಎಸ್. ಹುಲ್ಲೂರ, ರಂಗನಾಥ, ಡಾ. ಸುರೇಶ ಮಳವಳ್ಳಿ ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

