ಗದಗ

ಓವರ್ ಲೋಡ್ ವಾಹನ ಸಂಚಾರ ನಿಷೇಧಿಸಿ

Published On :

ಕನ್ನಡಪ್ರಭ ವಾರ್ತೆ, ಗಜೇಂದ್ರಗಡ, ಜು. 7
ಗ್ರಾಮೀಣ ಭಾಗದಲ್ಲಿ ಓವರ್ ಲೋಡ್ ಲಾರಿಗಳ ಸಂಚಾರ ನಿರ್ಬಂಧಿಸಬೇಕು ಎಂದು ಆಗ್ರಹಿಸಿ ಕನ್ನಡ ಪರ ಸಂಘಟನೆಗಳ ಕಾರ್ಯಕರ್ತರು ಸೋಮವಾರ ಪ್ರಾದೇಶಿಕ ಸಾರಿಗೆ ಇಲಾಖೆ ಅಧಿಕಾರಿ ಜೆ. ಪುರುಷೋತ್ತಮ ಅವರಿಗೆ ಮನವಿ ಸಲ್ಲಿಸಿದರು.
ಇಳಕಲ್‌ದಿಂದ ಗಜೇಂದ್ರಗಡ, ಉಣಚಗೇರಿ, ರಾಮಾಪುರ, ಹಿರೇಕೊಪ್ಪ ಮಾರ್ಗವಾಗಿ ಕೊಪ್ಪಳ ಜಿಲ್ಲೆ ಯಲಬುರ್ಗಾ ತಾಲೂಕಿನ ಬನ್ನಿಕೊಪ್ಪ ರೈಲು ನಿಲ್ದಾಣಕ್ಕೆ ಓವರ್ ಲೋಡ್ ತುಂಬಿದ ನೂರಾರು ಕಲ್ಲು ಲಾರಿಗಳು ನಿತ್ಯ ಸಂಚರಿಸುತ್ತಿವೆ. ಭಾರಿ ಸರಕು ತುಂಬಿದ ವಾಹನಗಳ ಸಂಚಾರದಿಂದಾಗಿ ಗ್ರಾಮೀಣ ರಸ್ತೆಗಳು ಸಂಪೂರ್ಣ ಹದಗೆಟ್ಟು, ಹಲವಾರು ಅಪಘಾತಗಳು ಸಂಭವಿಸಿವೆ. ಈ ಕಾರಣದಿಂದಾಗಿ ಓವರ್ ಲೋಡ್ ಲಾರಿಗಳ ಸಂಚಾರವನ್ನು ಈ ಮಾರ್ಗದಲ್ಲಿ ನಿಷೇಧಿಸಬೇಕು ಎಂದು ಸಂಘಟಕರು ಮನವಿಯಲ್ಲಿ ಆಗ್ರಹಿಸಿದರು.
ಸಂಘಟಕರಿಂದ ಮನವಿ ಸ್ವೀಕರಿಸಿದ ಪ್ರಾದೇಶಿಕ ಸಾರಿಗೆ ಇಲಾಖೆ ಅಧಿಕಾರಿ ಜೆ. ಪುರುಷೋತ್ತಮ ಮಾತನಾಡಿ, ಭಾರಿ ವಾಹನಗಳು ಮತ್ತು ಸಾರಿಗೆ ಇಲಾಖೆ ನಿಗದಿಪಡಿಸಿದ್ದಕ್ಕಿಂತ ಹೆಚ್ಚು ಸರಕು ತುಂಬಿದ ವಾಹನಗಳ ಸಂಚಾರವನ್ನು ಗ್ರಾಮೀಣ ರಸ್ತೆಗಳಲ್ಲಿ ಸಂಚರಿಸಲು ಇಲಾಖೆ ಯಾವುದೇ ಅನುಮತಿ ನೀಡಿಲ್ಲ, ಇಲಾಖೆ ಕಣ್ತಪ್ಪಿಸಿ ಲಾರಿಗಳು ಈ ಭಾಗದಲ್ಲಿ ಸಂಚರಿಸುತ್ತಿರುವ ಬಗ್ಗೆ ಇಲಾಖೆ ಗಮನಕ್ಕೆ ಬಂದಿದೆ. ಈ ಕೂಡಲೇ ಅಂತಹ ವಾಹನಗಳ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದರು.
ಕರವೇ ನಾರಾಯಣಗೌಡ ಬಣದ ರಜಾಕ ಡಾಲಾಯತ್, ಹುಸೇನಸಾಬ ಕವಲೂರ, ನಾಗರಾಜ ಕೋಟಿ, ಕರವೇ ಸ್ವಾಭಿಮಾನಿ ಬಣದ ಮಾರುತಿ ಮಾಳೋತ್ತರ, ಮಹೇಶ ಪಾಟೀಲ, ಮಹೇಶ ಗಡೇದವರ, ಜಯಕರ್ನಾಟಕ ಸಂಘಟನೆಯ ಎಂ.ಬಿ. ತೋರಗಲ್, ಶಿವಕುಮಾರ ಜಾಧವ, ಕರ್ನಾಟಕ ಜನಪರ ಸೇವಾ ಸಮಿತಿಯ ಗಣೇಶ ಗುಗಲೋತ್ತರ, ಮಹೇಶ ಲೋದಿ, ಶ್ರೀಕಾಂತ ಕಮ್ಮಾರ ಇತರರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.