ಗದಗ

ಗದಗ-ಹರಪ್ಪನಹಳ್ಳಿ ರೈಲು ಮಾರ್ಗ: ಸಂತಸ

Published On :

ಗದಗ: ಗದಗ-ಹರಪ್ಪನಹಳ್ಳಿ ರೈಲು ಮಾರ್ಗಕ್ಕೆ ರೇಲ್ವೆ ಸಚಿವ ಸದಾನಂದಗೌಡರು ಹಸಿರು ನಿಶಾನೆ ತೋರಿಸಿದ್ದು ಸಂತಸ ತಂದಿದೆ ಎಂದು ಹೋರಾಟಗಾರ, ಕಲಾವಿದ ಗವಿಸಿದ್ಧಯ್ಯ ಹಳ್ಳಿಕೇರಿಮಠ ತಿಳಿಸಿದ್ದಾರೆ.   ಈ ಕುರಿತು ಪ್ರಕಟಣೆ ನೀಡಿರುವ ಅವರು, ಬ್ರಿಟಿಷರ ಕಾಲದಲ್ಲೇ ಮುಂಡರಗಿ, ಹೂವಿನಹಡಗಲಿ ಭಾಗದ ಕೂಗು ಇದಾಗಿದ್ದು, ತದನಂತರ ಸ್ವತಂತ್ರ ಪೂರ್ವ ಇತಿಹಾಸದಲ್ಲಿ ಅನೇಕ ರಾಜಕಿಯ ಮುತ್ಸದ್ದಿಗಳು, ಬುದ್ಧಿಜೀವಿಗಳು, ಕಲಾವಿದರು ಬೇಡಿಕೆಯನ್ನು ಸರ್ಕಾರದ ಮುಂದೆ ಸಲ್ಲಿಸುತ್ತಲೇ ಬಂದಿದ್ದಾರೆ ಎಂದಿದ್ದಾರೆ.
ಅದಲ್ಲದೇ ಅನೇಕ ವೇದಿಕೆಗಳು ಟೊಂಕಕಟ್ಟಿ ಹೋರಾಟಗಾರರಿಗೆ ಬೆಂಬಲ ನೀಡುವುದರ ಮುಖಾಂತರ ಶಕ್ತಿಯಾಗಿದ್ದು, ನಾನು ಬಾಲ್ಯದಿಂದಲೇ ಅನೇಕ ರೈಲ್ವೆ ಹೋರಾಟಗಳಲ್ಲಿ ನಿರತನಾಗಿದ್ದು, ಗದಗ-ಹರಪ್ಪನಹಳ್ಳಿ ಮಾರ್ಗ ಒಟ್ಟಾರೆ ರೈಲ್ವೆ ಹೋರಾಟಗಾರರ ಹೋರಾಟಕ್ಕೆ ಸಂದ ಜಯ. ಅನೇಕ ವರ್ಷಗಳಿಂದ ಜಿಲ್ಲೆಯಲ್ಲಿ ರೈಲ್ವೆ ಹೋರಾಟದಲ್ಲಿ ನಿರತರಾಗಿರುವ ರೈಲ್ವೆ ಹೋರಾಟಗಾರರಿಗೆ ಅವರು ಅಭಿನಂದನೆ ಸಲ್ಲಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.