ಗೋವಾ ಕನ್ನಡಿಗರ ತೆರವು: ಆಕ್ರೋಶ
ನರಗುಂದ: ಕನ್ನಡಿಗರ ಮನೆಗಳನ್ನು ತೆರವುಗೊಳಿಸಿರುವ ಗೋವಾ ಸರ್ಕಾರದ ಕ್ರಮ ಖಂಡನೀಯ ಎಂದು ಭೈರನಹಟ್ಟಿ ದೊರೆಸ್ವಾಮಿ ಮಠದ ಶಾಂತಲಿಂಗ ಶ್ರೀಗಳು ಹೇಳಿದರು.
ಅವರು ಬುಧವಾರ ಪಟ್ಟಣದ ವೀರ ಬಾಬಾಸಾಹೇಬರ ಮೂರ್ತಿಗೆ ಮಾಲಾರ್ಪಣೆ ಮಾಡಿ, ಬಸವೇಶ್ವರ ವೃತ್ತದಲ್ಲಿರುವ ಕನ್ನಡ ಧ್ವಜಸ್ತಂಭಕ್ಕೆ ಕನ್ನಡ ಬಾವುಟ ಹಾರಿಸಿ ನಂತರ ಮಿನಿ ವಿಧಾನಸೌಧಕ್ಕೆ ತೆರಳಿ ತಹಸೀಲ್ದಾರ್ ಮೂಲಕ ಪ್ರಧಾನಮಂತ್ರಿಗೆ ಮನವಿ ಸಲ್ಲಿಸಿದರು.
ನಾಲ್ಕೈದು ದಶಕಗಳ ಹಿಂದೆ ಗೋವಾ ಎಂದರೆ ಕನ್ನಡಿಗರ ದುಡಿಯುವ ಕೈಗಳಿಗೆ ಭರಪೂರ ಕೆಲಸ ಒದಗಿಸುವ ತಾಣ ಆಗಿದ್ದರಿಂದ ಉತ್ತರ ಕರ್ನಾಟಕ ಜನತೆ ಅಲ್ಲಿ ಹೋಗಿ ಜೀವನ ಸಾಗಿಸುತ್ತಿದ್ದಾರೆ. ಆದರೆ ಗೋವಾ ಸರ್ಕಾರ ಕಡಲ ಕೊರೆತದ ನೆಪ ಹೇಳಿ ಸುಮಾರು 75 ಕುಟುಂಬಗಳ 400 ಜನರ ಮನೆಗಳನ್ನು ಕೆಡವಿದ್ದು, ಅವರಿಗೆ ಯಾವುದೇ ಪರ್ಯಾಯ ವ್ಯವಸ್ಥೆ ಕಲ್ಪಿಸದೇ ನಡು ಬೀದಿಯಲ್ಲಿ ಬಿಟ್ಟಿದ್ದು ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪತ್ರಿವನ ಮಠದ ಸಿದ್ದವೀರ ಶ್ರೀಗಳು ಮಾತನಾಡಿ, ಗೋವಾ ಸರ್ಕಾರವು ಕನ್ನಡಿಗರನ್ನು ನಡುಬೀದಿಯಲ್ಲಿ ನಿಲ್ಲಿಸಿದೆ. ರಾಜ್ಯದ ಎಲ್ಲ ಸಂಸದರು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಿ ಮರಳಿ ಅವರ ಬದುಕಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಲು ಮುಂದಾಗಬೇಕು ಎಂದರು. ತಹಸೀಲ್ದಾರ್ ವಿ.ಎಚ್. ಕೊತಬಾಳ ಮನವಿ ಸ್ವೀಕರಿಸಿದರು. ಹೆಬ್ಬಾಳದ ವೀರೇಶ ದೇವರು, ಸಿ.ಎ. ಕೋರಿ, ಚನ್ನಪ್ಪ ಕಂಠಿ, ಶಂಕ್ರಣ್ಣ ವಾಳ, ಎಸ್.ಬಿ. ಕುಷ್ಟಗಿ, ಬಸವರಾಜ ಪಾಟೀಲ, ಕರವೇ ಅಧ್ಯಕ್ಷ ಹನುಮಂತ ಮಜ್ಜಿಗುಡ್ಡ, ಕಸಾಪ ಅಧ್ಯಕ್ಷ ಪಿ.ಸಿ. ಕಲಹಾಳ, ತಾಲೂಕು ನೌಕರರ ಸಂಘದ ಅಧ್ಯಕ್ಷ ಎ.ಎಚ್. ಅಜ್ಜಿ, ಎನ್.ವಿ. ಮೇಟಿ, ಪ್ರಕಾಶ ಕಂಠಿ, ವಿಜಯಕುಮಾರ ಬೇಲೇರಿ, ಎಸ್.ವೈ. ಹುಂಬಿ, ಅಜ್ಜು ಪಾಟೀಲ, ವೈ.ಬಿ. ಮೊರಬದ, ಮಂಜು ಮೆಣಸಗಿ, ಉಮೇಶ ಮೊರಬದ, ರಮೇಶ ಐನಾಪುರ, ಬಸವಂತಪ್ಪ ಮೊರಬದ, ಈರಪ್ಪ ಐನಾಪುರ, ಚಿದಾನಂದ ಐನಾಪುರ, ಕನ್ನಡ ಸಾಹಿತ್ಯ ಪರಿಷತ, ಕರವೇ, ಬಸವಕೇಂದ್ರ, ಕಾರ್ಯನಿರತ ಪತ್ರಕರ್ತರ ಸಂಘ, ಶರಣ ಸಾಹಿತ್ಯ ಪರಿಷತ್ ಪದಾಧಿಕಾರಿಗಳಿದ್ದರು.
ಚುಟುಕು ಸಾಹಿತ್ಯ ಪರಿಷತ್ತು, ಜೈಂಟ್ಸ್ ಗ್ರುಪ್, ಛಾಯಾಗ್ರಾಹಕ ಸಂಘ, ಜನಪದ ಸಾಹಿತ್ಯ ಪರಿಷತ್, ಲಯನ್ಸ್ ಕ್ಲಬ್, ರೋಟರಿ ಕ್ಲಬ್, ನ್ಯಾಯವಾದಿಗಳ ಸಂಘ, ರಾಹುಲ್ ಸ್ಪೋಟ್ಸ್ ಕ್ಲಬ್ ಪದಾಧಿಕಾರಿಗಳು ಹಾಜರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

