ನಾಳೆಯಿಂದ ದೊಡ್ಡಾಟ ರಂಗ ತರಬೇತಿ
ಗದಗ: ಜುಲೈ 20ರಿಂದ 29ರ ವರೆಗೆ ಗದಗ ನಗರದ ತೋಂಟದಾರ್ಯ ಕಲ್ಯಾಣ ಕೇಂದ್ರದಲ್ಲಿ ಮೂಡಲಪಾಯ ದೊಡ್ಡಾಟ ರಂಗ ತರಬೇತಿ ಶಿಬಿರ ಆಯೋಜಿಸಲಾಗಿದೆ ಎಂದು ಗ್ರಾಮರಂಗ ಮೂಡಲಪಾಯ ದೊಡ್ಡಾಟ ಸಂಶೋಧನೆ ಮತ್ತು ತರಬೇತಿ ಸಂಸ್ಥೆ ಅಧ್ಯಕ್ಷ ಎಂ.ಎಸ್. ಮಾಳವಾಡ ಹೇಳಿದರು.
ಶುಕ್ರವಾರ ನಗರದ ತೋಂಟದಾರ್ಯ ಕಲ್ಯಾಣ ಕೇಂದ್ರದಲ್ಲಿ ಆಯೋಜಿದ್ದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.
ಜನಪದ ವಿದ್ವಾಂಸ ಡಾ. ಬಸವರಾಜ ಮಲಶೆಟ್ಟಿ ಅವರ ಸ್ಮರಣಾರ್ಥ ತೋಂಟದಾರ್ಯ ಮಠದ ಆಶ್ರಯ ಹಾಗೂ ಜಿಲ್ಲೆಯ ವಿವಿಧ ಸಾಂಸ್ಕೃತಿಕ ಸಂಘಟನೆಗಳ ಆಶ್ರಯದಲ್ಲಿ ತರಬೇತಿ ಶಿಬಿರ ಆಯೋಜಿಸಲಾಗಿದೆ. 9 ದಿನಗಳ ಕಾಲ ನಡೆವ ತರಬೇತಿ ಶಿಬಿರದಲ್ಲಿ ಪ್ರತಿ ದಿನ ದೊಡ್ಡಾಟ ಹಾಗೂ ಜನಪದ ರೇಖಾಚಿತ್ರಗಳ ಪ್ರದರ್ಶನ ಆಯೋಜಿಸಲಾಗಿದೆ. ಬಯಲಾಟದ ರಂಗ ಪ್ರಕಾರಗಳ ವೈವಿಧ್ಯತೆ, ದೊಡ್ಡಾಟ ರಂಗಭೂಮಿಯ ಇತಿಹಾಸ, ರಂಗಭೂಮಿಯಲ್ಲಿ ದೇಸಿಯತೆ ಹಾಗೂ ಕೃತಿಗಳ ವೈಶಿಷ್ಟತೆ, ದೊಡ್ಡಾಟ ಎದುರಿಸುತ್ತಿರುವ ಸವಾಲುಗಳು, ಹಾಡುಗಾರಿಕೆಯ ವೈವಿದ್ಯತೆ ಸಂಗೀತ ಪರಿಕರಗಳು, ದೊಡ್ಡಾಟ ಮತ್ತು ಪಾರಿಜಾತದ ವೈವಿಧ್ಯತೆ, ಜಾನಪದ ರಂಗಭೂಮಿ ಮತ್ತು ಸಮೂಹ ಮಾಧ್ಯಮ ಹಾಗೂ ಕಾಯಕಲ್ಪದ ಅವಶ್ಯಕತೆ ಕುರಿತು ರಾಜ್ಯದ ವಿವಿಧ ಜಿಲ್ಲೆಗಳ ತಜ್ಞ ಉಪನ್ಯಾಸಕರಿಂದ ಉಪನ್ಯಾಸ ಜರುಗಲಿದೆ. ತರಬೇತಿಯಲ್ಲಿ 50 ಶಿಬಿರಾರ್ಥಿಗಳು ಪಾಲ್ಗೊಳ್ಳಲಿದ್ದಾರೆ. ತೋಂಟದ ಡಾ. ಸಿದ್ದಲಿಂಗ ಶ್ರೀಗಳು ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದರು. ಗ್ರಾಮೀಣಾಭಿವೃದ್ಧಿ ಸಚಿವ ಎಚ್.ಕೆ. ಪಾಟೀಲ ಶಿಬಿರ ಉದ್ಘಾಟಿಸುವರು. ಮಾಜಿ ಶಾಸಕ ಜ್ಞಾನದೇವ ದೊಡ್ಡಮೇಟಿ ಅಧ್ಯಕ್ಷತೆ ವಹಿಸುವರು. ಅತಿಥಿಗಳಾಗಿ ಕರ್ನಾಟಕ ಜನಪದ ವಿಶ್ವ ವಿದ್ಯಾಲಯ ಕುಲಸಚಿವ ಡಾ. ಡಿ.ಬಿ. ನಾಯಕ, ದೊಡ್ಡಾಟ ವಿದ್ವಾಂಸ ಡಾ. ಕೆ.ಆರ್. ದುರ್ಗಾದಾಸ, ಕಸಾಪ ಅಧ್ಯಕ್ಷ ಡಾ. ಶಿವಪ್ಪ ಕುರಿ, ಬನಶಂಕರಿ ಅಂಗಡಿ ಆಗಮಿಸುವರು ಎಂದ ಅವರು, ದೊಡ್ಡಾಟ ಎದುರಿಸುತ್ತಿರುವ ಕೆಲ ಸಮಸ್ಯೆಗಳು, ತರಬೇತಿ ಆಯೋಜಿಸಿರುವ ಹಿನ್ನೆಲೆ ಹಾಗೂ ಇತಿಹಾಸದ ಕುರಿತು ಮಾತನಾಡಿದರು. ಸುದ್ದಿಗೋಷ್ಠಿಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಬನಶಂಕರಿ ಅಂಗಡಿ, ಶಂಕ್ರಣ್ಣ ಸಂಕಣ್ಣವರ, ಶಂಕರಗೌಡ ಪಾಟೀಲ, ಅನ್ನದಾನಿ ಹಿರೇಮಠ, ಅಶೋಕ ಸುತಾರ, ಎ.ಎ. ಗಿರಡ್ಡಿ, ಅಶೋಕ ಬಣ್ಣದ, ಶಶಿಕಾಂತ ಕೊರ್ಲಹಳ್ಳಿ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

