ಕುಡುಒಕ್ಕಲಿಗರ ವಧು-ವರರ ಸಮಾವೇಶ
ಗದಗ: ಅಖಿಲ ಕರ್ನಾಟಕ ಕುಡುಒಕ್ಕಲಿಗರ ಸಂಘ ಗದಗ ಇದರ ಅಡಿಯಲ್ಲಿ ನಗರದ ವಿವೇಕಾನಂದ ಸಭಾ ಭವನ ಹಾಗೂ ಕೆ.ಎಚ್. ಪಾಟೀಲ ಸಭಾಭವನದಲ್ಲಿ ಜು 19ರಂದು ಸಂಜೆ 6 ಕ್ಕೆ ಕುಡುಒಕ್ಕಲಿಗರ ಸಮಾಜದ ವತಿಯಿಂದ ಮನರಂಜನಾ ಕಾರ್ಯಕ್ರಮ ಆಯೋಜಿಸಲಾಗಿದೆ. ಜು. 20 ರಂದು ಬೆಳಗ್ಗೆ 8ಕ್ಕೆ ವಧು-ವರರ ಸಮ್ಮೇಳನ ಹಮ್ಮಿಕೊಳ್ಳಲಾಗಿದೆ. ನೋಂದಾಯಿತ ವಧು-ವರರು ಸಮಯಕ್ಕೆ ಸರಿಯಾಗಿ ಹಾಜರಿರಬೇಕು ಹಾಗೂ ಅಗತ್ಯ ಬಿದ್ದಲ್ಲಿ, ಸ್ವಯಂ ಸೇವಕರ ಸಹಾಯ ಪಡೆಯಬೇಕು. ಅದೇ ದಿನ ವಿವೇಕಾನಂದ ಸಭಾ ಭವನದಲ್ಲಿ ಬೆಳಗ್ಗೆ 10.30ಕ್ಕೆ ಕುಡುಒಕ್ಕಲಿಗ ಸಮಾಜದ ಸಮಾವೇಶ ಹಾಗೂ ವಾರ್ಷಿಕ ಮಹಾಸಭೆ ಜರುಗಲಿದೆ ಎಂದು ಪ್ರಕಟಣೆ ತಿಳಿಸಿದೆ.
ಲೋಕಾಯುಕ್ತರಿಂದ ಅಹವಾಲು ಸ್ವೀಕಾರ
ಗದಗ: ಕರ್ನಾಟಕ ಲೋಕಾಯುಕ್ತ, ಗದಗ ಘಟಕದ ಆರಕ್ಷಕ ಉಪಾಧೀಕ್ಷಕ ಕೆ.ಸಿ. ಅಸುಂಡಿ ಹಾಗೂ ಆರಕ್ಷಕ ನಿರೀಕ್ಷಕ ರವಿ ಪುರುಷೋತ್ತಮ ಅವರು ಜಿಲ್ಲೆಯಲ್ಲಿ ಭೇಟಿ ನೀಡಿ ಸಾರ್ವಜನಿಕರ ಕುಂದು-ಕೊರತೆಗಳ ಬಗ್ಗೆ ಅರ್ಜಿ ಅಹವಾಲು ಸ್ವೀಕರಿಸಲಿದ್ದಾರೆ. ಆರಕ್ಷಕ ಉಪಾಧೀಕ್ಷಕ ಕೆ.ಸಿ. ಅಸುಂಡಿ ಅವರು ಜು. 24ರಂದು ನರಗುಂದದ ಹಳೆ ತಹಸೀಲ್ದಾರ್ ಕಚೇರಿಯಲ್ಲಿ ಬೆಳಗ್ಗೆ 11ರಿಂದ ಮಧ್ಯಾಹ್ನ 1ರ ವರಗೆ, ಅದೇ ದಿನ ಬೆಳಗ್ಗೆ 11ರಿಂದ 1 ರ ವರೆಗೆ ಸಿಪಿಐ ರವಿ ಪುರುಷೋತ್ತಮ ರೋಣ ತಾಪಂನಲ್ಲಿ, ಆರಕ್ಷಕ ಉಪಾಧೀಕ್ಷಕ ಕೆ.ಸಿ. ಅಸುಂಡಿ 25ರಂದು ಬೆಳಗ್ಗೆ 11ರಿಂದ ಮಧ್ಯಾಹ್ನ 1ರ ವರೆಗೆ ಶಿರಹಟ್ಟಿ ತಾಪಂ ಸಭಾಭವನ, ಬೆಳಗ್ಗೆ 11ರಿಂದ 1 ರ ವರೆಗೆ ಸಿಪಿಐ ರವಿ ಪುರುಷೋತ್ತಮ ಮುಂಡರಗಿ ತಾಪಂ ಸಭಾಭವನ, 26ರಂದು ಬೆಳಗ್ಗೆ 11ರಿಂದ ಮಧ್ಯಾಹ್ನ 1ರ ವರೆಗೆ ಸಿಪಿಐ ರವಿ ಪುರುಷೋತ್ತಮ ಅವರು ಗದಗ ತಾಪಂ ಸಭಾಭವನದಲ್ಲಿ ಅಹವಾಲುಗಳನ್ನು ಸ್ವೀಕರಿಸುವರು. ಸಾರ್ವಜನಿಕರು ದೂರಿನ ಬಗ್ಗೆ ಅರ್ಜಿಗಳನ್ನು ಸಲ್ಲಿಸಲು ವಿನಂತಿಸಲಾಗಿದೆ.
24ರಂದು ಗದಗ ಜಿಪಂ ವಿಶೇಷ ಸಭೆ
ಗದಗ: ಗದಗ ಜಿಲ್ಲಾ ಪಂಚಾಯಿತಿ ವಿಶೇಷ ಸಭೆಯನ್ನು ಜು. 24ರಂದು ಬೆಳಗ್ಗೆ 11ಕ್ಕೆ ಜಿಪಂ ಅಧ್ಯಕ್ಷರ ಅಧ್ಯಕ್ಷತೆಯಲ್ಲಿ ಜಿಪಂ ಸಭಾಂಗಣದಲ್ಲಿ ಕರೆಯಲಾಗಿದೆ ಎಂದು ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

