ಗದಗ

ಗ್ರಾಮಾಭಿವೃದ್ಧಿ ಯೋಜನೆ ಸದ್ಬಳಕೆಯಾಗಲಿ: ಲಲಿತಾ

Published On :

ಗದಗ:  ಸರ್ಕಾರದ ಯೋಜನೆಗಳನ್ನು ಗ್ರಾಮದ ಅಭಿವೃದ್ಧಿಗೆ ಸಮರ್ಪಕವಾಗಿ ಬಳಕೆ ಮಾಡಬೇಕು ಎಂದು ತಾಲೂಕು ಪಂಚಾಯಿತಿ ಅಧ್ಯಕ್ಷೆ ಲಲಿತಾ ಅಣ್ಣಿಗೇರಿ ಹೇಳಿದರು. ಅವರು ತಾಲೂಕಿನ ಕೋಟುಮಚಗಿ ಗ್ರಾಮದ ಗ್ರಾಪಂ ಸಭಾಭವನದಲ್ಲಿ ನಡೆದ ಗ್ರಾಪಂ ಸಾಮಾನ್ಯ ಸಭೆಯಲ್ಲಿ ಮಾತನಾಡಿದರು. ಗ್ರಾಮದ ಅಭಿವೃದ್ಧಿ ಕಾರ್ಯಗಳ ಸಂಪೂರ್ಣ ಮಾಹಿತಿ ಪಡೆದುಕೊಂಡು ತಕ್ಷಣದಲ್ಲಿಯೇ ಕಾರ್ಯರೂಪಕ್ಕೆ ತರಬೇಕು ಎಂದು ಪಿಡಿಒಗೆ ಸೂಚನೆ ನೀಡಿದರು. ಅಧ್ಯಕ್ಷತೆಯನ್ನು ಗ್ರಾಪಂ ಅಧ್ಯಕ್ಷೆ ಕಸ್ತೂರಿಬಾಯಿ ನೀರಲಗಿ ವಹಿಸಿದ್ದರು. ಸಭೆಯಲ್ಲಿ ಉಪಾಧ್ಯಕ್ಷೆ ಶಾಂತಮ್ಮ ಹರ್ಲಾಪುರ, ಸದಸ್ಯ ಜೈತುನಬಿ ಮೀರಾನಾಯ್ಕ, ಮಹೇಶ ನೀರಲಗಿ, ಅಶೋಕ ಮ್ಯಾಗೇರಿ, ಮಲ್ಲಿಕಾರ್ಜುನ ಕಿತ್ತೂರ, ದೇವಪ್ಪ ಬಡಿಗೇರ, ಪಾಲಾಕ್ಷಯ್ಯ ಬಳಿಗೇರಮಠ, ಶಿವಪುತ್ರವ್ವ  ಉಪಸ್ಥಿತರಿದ್ದರು.


ಪದಾಧಿಕಾರಿಗಳ ಆಯ್ಕೆ


ಗದಗ: ಬೆಟಗೇರಿಯ ಎಸ್.ಎಸ್.ಕೆ ಸಮಾಜದ ತರುಣ ಸಂಘದ ನೂತನ ಪದಾಧಿಕಾರಿಗಳ ಆಯ್ಕೆ ಸಭೆ ಈಚೆಗೆ ಬೆಟಗೇರಿಯ ಅಂಬಾಭವಾನಿ ದೇವಸ್ಥಾನದಲ್ಲಿ ಜರುಗಿತು. ಅಧ್ಯಕ್ಷರಾಗಿ ದೀಪಕ ಲದ್ವಾ, ಉಪಾಧ್ಯಕ್ಷರಾಗಿ ಎಸ್.ಕೆ. ಬಾಕಳೆ, ಗೌರವ ಕಾರ್ಯದರ್ಶಿಯಾಗಿ ಟಿ.ಎನ್. ಭಾಂಡಗೆ, ಸಹರ್ಕಾರ್ಯದರ್ಶಿಯಾಗಿ ವೆಂಕಟೇಶ ಬಾಕಳೆ, ಖಜಾಂಚಿಯಾಗಿ ಪ್ರಕಾಶ ಮಿಸ್ಕಿನ್, ವ್ಯಾಯಾಮ ಶಾಲೆಯ ಚೇರ್‌ಮನ್‌ರಾಗಿ ರಾಮು ಬಾಕಳೆ ಸೇರಿದಂತೆ ಇನ್ನಿತರ 40 ಜನರನ್ನು ಸದಸ್ಯರನ್ನಾಗಿ ಆಯ್ಕೆ ಮಾಡಲಾಯಿತು. ಸಭೆಯ ಅಧ್ಯಕ್ಷತೆಯನ್ನು ಅಧ್ಯಕ್ಷ ಬಲರಾಮ ಅರಸಿದ್ಧಿ ವಹಿಸಿದ್ದರು. ಸಲಹಾ ಸಮಿತಿ ಸದಸ್ಯ ಡಿ.ಡಿ. ಮೇರವಾಡೆ, ಎಸ್.ಬಿ. ಮಿಸ್ಕಿನ್, ಎನ್.ಎಂ. ಕಬಾಡಿ, ಸದಸ್ಯ ಸತ್ಯನಾರಾಯಣ ಕಬಾಡಿ, ಮಂಜುನಾಥ ಕಬಾಡಿ, ಎಸ್.ಬಿ. ರಾಯಬಾಗಿ, ಎಂ.ಎನ್.ಅರವಟಗಿ, ಸುರೇಶ ಮೇರವಾಡೆ ಸಭೆಯಲ್ಲಿ ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.