ಗದಗ

ಹಲವು ಬೇಡಿಕೆ ಈಡೇರಿಸಲು ಆಗ್ರಹ

Published On :

ಕನ್ನಡಪ್ರಭ ವಾರ್ತೆ, ಗದಗ, ಜು. 22
ನಾನಾ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಮಂಗಳವಾರ ಗದಗ ಜಿಲ್ಲಾ ಹಡಪದ ಸಮಾಜ ಸೇವಾ ಸಂಘದ ವತಿಯಿಂದ ನಗರದ ಮುಳಗುಂದ ನಾಕಾದಿಂದ ಜಿಲ್ಲಾಧಿಕಾರಿ ಕಚೇರಿಯ ವರೆಗೆ ಪಾದಯಾತ್ರೆ ನಡೆಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಬಜೆಟ್‌ನಲ್ಲಿ ಹಡಪದ ಜನಾಂಗಕ್ಕೆ ಪ್ರತ್ಯೇಕ ಹಣಕಾಸು ನೆರವು ನೀಡದೇ ಸಮಾಜದ ಜನರನ್ನು ಕಡೆಗಣಿಸಲಾಗಿದೆ. ಸಮಾಜ ಬಾಂಧವರು ಹಲವು ಸಮಸ್ಯೆಗಳಿಂದ ದಿನನಿತ್ಯ ತೊಂದರೆ ಅನುಭವಿಸುತ್ತಿದ್ದು, ಈ ಕುರಿತು ಹಲವು ಬಾರಿ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ.
ಬೇಡಿಕೆಗಳು: ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ ವಾರ್ಡಗೆ 5 ಮಳಿಗೆ ಹಾಗೂ ಪ್ರತಿ ಗ್ರಾಮ ಪಂಚಾಯಿತಿಗೆ 5 ಮಳಿಗೆಯನ್ನು ಹಡಪದ ವೃತ್ತಿ ಕೌಶಲರಿಗೆ ಉಚಿತವಾಗಿ ಕೊಡುವುದು. ಬಿಜಾಪುರ ಜಿಲ್ಲೆಯ ತಂಗಡಗಿಯ ನೀಲಮ್ಮ ತಾಯಿ ಕ್ರಿಯಾ ಕ್ಷೇತ್ರದಲ್ಲಿ ಹಡಪದ ಅಪ್ಪಣ್ಣನವರ ಮೂರ್ತಿ ಪ್ರತಿಷ್ಠಾಪನೆಗೆ ಅಲ್ಲಿಯ ಪ್ರಾಧಿಕಾರಕ್ಕೆ ಶಿಫಾರಸು ಮಾಡುವುದು. ಜಿಲ್ಲಾ ಆಡಳಿತ ಭವನದ ಡಿ. ದೇವರಾಜ ಅರಸು ನಿಗಮದಿಂದ ತರಬೇತಿ ಹಾಗೂ ಸಾಲಸೌಲಭ್ಯ ಕೊಡುವ ನೀತಿಯಲ್ಲಿ  ಮಲತಾಯಿ ಧೋರಣೆ ಕೈಬಿಡಬೇಕು. ಜಿಲ್ಲೆಯ ಎಲ್ಲ ತಾಲೂಕಿನಲ್ಲಿಯ ಹಡಪದ ಜನಾಂಗಕ್ಕೆ 2ಎ ಪ್ರಮಾಣ ಪತ್ರ ಕೊಡುವುದು. ಪ್ರವರ್ಗ-1ಕ್ಕೆ ಸೇರಿಸುವುದು. ಹಡಪದ ವೃತ್ತಿ ಕೌಶಲರಿಗೆ ಜಿಲ್ಲಾ ಹಡಪದ ಸಂಘದ ಸಹಯೋಗದಲ್ಲಿ ಕಿಟ್ ಮತ್ತು ಕುರ್ಚಿ ಉಚಿತವಾಗಿ ಕೊಡುವುದು.  ವಸತಿ ರಹಿತರಿಗೆ ವಸತಿ ಸೌಲಭ್ಯ ಒದಗಿಸುವುದು.
ಗದಗ ಜಿಲ್ಲೆಗೊಂದು ಸಮುದಾಯ ಭವನಕ್ಕೆ ಜಾಗೆ ಕೊಡಮಾಡುವುದು. ಹಡಪದ ಸಮಾಜಕ್ಕೆ ರಾಜಕೀಯವಾಗಿ ಹಾಗೂ ನಿಗಮ ಮಂಡಳಿಗಳಲ್ಲಿ ಅವಕಾಶ ನೀಡುವದು. ಹಡಪದ ವೃತ್ತಿ ಕೌಶಲರಿಗೆ ಕಾರ್ಮಿಕ ಕಲ್ಯಾಣ ನಿಧಿ ಯೋಜನೆ, ಆರೋಗ್ಯ ವಿಮಾ ಸೌಲಭ್ಯ ಕೊಡುವುದು. ಗದಗ ಭೀಷ್ಮ ಕೆರೆಯ ಬೃಹದಾಕಾರದ ಬಸವೇಶ್ವರ       ಪುತ್ಥಳಿಯ ಆವರಣದಲ್ಲಿ ಹಡಪದ ಅಪ್ಪಣ್ಣ ಶರಣರ ಮೂರ್ತಿ ಪ್ರತಿಷ್ಠಾಪಿಸುವದು. ಪಠ್ಯಪುಸ್ತಕದಲ್ಲಿ ಹಡಪದ ಅಪ್ಪಣ್ಣ ಹಾಗೂ ಲಿಂಗಮ್ಮನವರ ವಚನಗಳನ್ನು ಪ್ರಕಟಿಸುವುದು  ಸೇರಿದಂತೆ ಹಲವು ಬೇಡಿಕೆಗಳ ಈಡೇರಿಕೆಗೆ  ಒತ್ತಾಯಿಸಲಾಯಿತು.
ಸಂಘದ ಗೌರವಾಧ್ಯಕ್ಷ ಮೋಹನ ಚಂದಪ್ಪವನರ, ಅಧ್ಯಕ್ಷ ವಿ.ಬಿ. ಕೊಣ್ಣೂರ, ಪ್ರಧಾನ ಕಾರ್ಯದರ್ಶಿ ಎ.ವಿ. ಪ್ರಭು, ಸಹಕಾರ್ಯದರ್ಶಿ ಶ್ರೀನಿವಾಸ ಹಡಪದ, ದೇವು ಹಡಪದ, ಕಲ್ಲೇಶಪ್ಪ ಕುಡಗುಂಟಿ, ನಾಗರಾಜ ಡಂಬಳ, ಚಂದ್ರಶೇಖರ ಹಡಪದ, ರಾಮಚಂದ್ರಪ್ಪ ಲಾಯದಗುಂದಿ ಸೇರಿದಂತೆ ಜಿಲ್ಲೆಯ ನರಗುಂದ, ಶಿರಹಟ್ಟಿ, ರೋಣ, ಮುಂಡರಗಿ ತಾಲೂಕಿನ ಹಡಪದ ಸಮಾಜ ಬಾಂಧವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.