ಗದಗ

ಸಿಬ್ಬಂದಿ ವರ್ಗಾವಣೆ ರದ್ದುಪಡಿಸಿ

Published On :

ನರಗುಂದ: ಪುರಸಭೆ ಮುಖ್ಯಾಧಿಕಾರಿಗಳು ಮತ್ತು ಎಫ್‌ಡಿಎ, ಎಸ್‌ಡಿಎ ಸೇರಿದಂತೆ ಇತರ ಕಚೇರಿ ಸಿಬ್ಬಂದಿಯನ್ನು ದಿಢೀರನೆ ವರ್ಗಾವಣೆ ಮಾಡಿದ್ದು, ಸಂದೇಹ ತಂದಿದೆ. ಅದಕ್ಕೆ ಈ ವರ್ಗಾವಣೆ ರದ್ದು ಮಾಡಬೇಕೆಂದು ಪುರಸಭೆ ಉಪಾಧ್ಯಕ್ಷ ಕಿರಣ ಮುಧೋಳ ಒತ್ತಾಯಿಸಿದರು.
ಮಂಗಳವಾರ ಪಟ್ಟಣದ ಪುರಸಭೆ ಕಚೇರಿ ಆವರಣದಲ್ಲಿ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಪುರಸಭೆ ಕಚೇರಿಯ ಕಾರ್ಯಗಳನ್ನು ಮಾಡಲು ಸರ್ಕಾರ ನಿಯಮದ ಪ್ರಕಾರ 11 ಹುದ್ದೆಗಳಿವೆ. ಅದರಲ್ಲಿ ಕೇವಲ ಮುಖ್ಯಾಧಿಕಾರಿ ಸೇರಿ 7 ಜನ ಮಾತ್ರ ಇಂದು ಕಚೇರಿ ಕಾರ್ಯನಿರ್ವಹಿಸುತ್ತಿದ್ದು, ಇದರಲ್ಲಿ ಮುಖ್ಯಾಧಿಕಾರಿ ಸೇರಿ 5 ಸಿಬ್ಬಂದಿಯನ್ನು ಆಡಳಿತ ಪಕ್ಷದವರು ರಾಜಕೀಯ ದುರದ್ದೇಶದಿಂದ ವರ್ಗಾವಣೆ ಮಾಡಿದ್ದು ವಿಷಾದನೀಯ. ಪಟ್ಟಣದ ಪ್ರತಿನಿತ್ಯ ಎಲ್ಲ ಕೆಲಸ ಕಾರ್ಯಗಳು ಸಾಗಬೇಕೆಂದರೆ ಕಚೇರಿಯಲ್ಲಿ ಮುಖ್ಯಾಧಿಕಾರಿಗಳು ಮತ್ತು ಸಿಬ್ಬಂದಿ ಅವಶ್ಯವಾಗಿರಬೇಕು. ಇದ್ಯಾವುದನ್ನು ಚಿಂತಿಸದೇ ರಾಜಕೀಯ ಉದ್ದೇಶ ಇಟ್ಟುಕೊಂಡು ಈ ಎಲ್ಲ ಅಧಿಕಾರಿಗಳನ್ನು ವರ್ಗಾವಣೆ ಮಾಡಿರುವ ಕುರಿತು ಜಿಲ್ಲಾಧಿಕಾರಿ ಮತ್ತು ಶಾಸಕರಿಗೆ ಮನವಿ ನೀಡಿ ವರ್ಗಾವಣೆ ರದ್ದುಗೊಳಿಸುವಂತೆ ಮನವಿ ಸಲ್ಲಿಸಲಾಗುವುದು.
ಕಾಂಗ್ರೆಸ್ ಸದಸ್ಯರು ಗೈರು: ಆಡಳಿತ ಪಕ್ಷದ ಅಧ್ಯಕ್ಷರು ಪುರಸಭೆ ಅಧಿಕಾರಿಗಳನ್ನು ವರ್ಗಾವಣೆ ಮಾಡಿರುವ ಕುರಿತು ಸುದ್ದಿಗೋಷ್ಠಿ ನಡೆಸಲಾಗುವುದು ಎಂದು ಎಲ್ಲ ವಿರೋಧ ಪಕ್ಷದ ಸದಸ್ಯರಿಗೆ ತಿಳಿಸಿದರೂ ಈ ಸುದ್ದಿಗೋಷ್ಠಿಯಲ್ಲಿ ಅವರು ಗೈರಾಗಿದ್ದು ನೋಡಿದರೆ ನಗರದ ಅಭಿವೃದ್ಧಿ ಬಗ್ಗೆ ನಿರ್ಲಕ್ಷ್ಯ ಕಂಡು ಬರುತ್ತದೆ ಎಂದು ಹಾಜರಿದ್ದ ಸದಸ್ಯರು ಆರೋಪಿಸಿದರು.
ದಲಿತ ವಿರೋಧಿ: ಕಾಂಗ್ರೆಸ್‌ನ ಶಾಸಕರು ಪುರಸಭೆಯಲ್ಲಿ ಶ್ರೀಕಾಂತ ನರಗುಂದ ಮತ್ತು ಸೋಮು ಎಂಬುವರು ದಲಿತರು ಸೇವೆ ಮಾಡುವಂತೆ ಸಿಬ್ಬಂದಿ ಬಿಜೆಪಿ ಪರ ಕೆಲಸ ಮಾಡುತ್ತಾರೆಂದು ತಿಳಿದು ಇವರನ್ನು ಕೂಡ ವರ್ಗಾವಣೆ ಮಾಡಿದ್ದರಿಂದ ಶಾಸಕರು ದಲಿತ ವಿರೋಧಿಗಳಾಗಿದ್ದಾರೆಂದು ಪುರಸಭೆ ಸದಸ್ಯ ವಾಸು ಜೋಗಣ್ಣವರ ಆರೋಪಿಸಿದರು. ಈ ಸಂದರ್ಭ ಪುರಸಭೆ ಅಧ್ಯಕ್ಷರಾದ ಜ್ಯೋತಿ ಪತ್ರಿ, ಸದಸ್ಯ ಉಮೇಶ ಕುಡನ್ನವರ, ಪ್ರಕಾಶ ಪಟ್ಟಣಶೆಟ್ಟಿ, ಚಂದ್ರು ಪವಾರ, ಬಸಣ್ಣವ್ವ ಪಿಡ್ಡನಾಯ್ಕರ, ನೇತಾರ ಪೂಜಾರ, ಸಾವಿತ್ರ ಹಟ್ಟಿ, ರೇಣುಕಾ ಕೋರಿ ಇತರರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.