ನಿರ್ಲಕ್ಷ್ಯ: ಕಾರ್ಮಿಕ ಅಧಿಕಾರಿ ತರಾಟೆ
ಕನ್ನಡಪ್ರಭ ವಾರ್ತೆ, ನರಗುಂದ, ಜು. 25
ಕಾರ್ಮಿಕ ನಿರೀಕ್ಷಕರ ಕಚೇರಿ ಅವ್ಯವಸ್ಥೆ ಸರಿಪಡಿಸಬೇಕೆಂದು ಲೋಕಾಯುಕ್ತ ಕೆ.ಸಿ. ಅಸುಂಡಿಯವರಿಗೆ ಸಾರ್ವಜನಿಕರಾದ ಪಿ.ಬಿ. ಹಿರೇಮನಿ, ಆರ್.ಐ. ದೊಡಮನಿ, ಮಲಪ್ಪ ಚಲವಾದಿ ಮನವಿಮಾಡಿದರು.
ಗುರುವಾರ ಪಟ್ಟಣದ ಹಳೇ ತಹಸೀಲ್ದಾರ್ ಕಾರ್ಯಾಲಯದಲ್ಲಿ ಸಾರ್ವಜನಿಕರ ಅಹವಾಲು ಸ್ವೀಕರಿಸಿದ ಲೋಕಾಯುಕ್ತ ಕೆ.ಸಿ. ಅಸುಂಡಿ ಅವರು ಕಾರ್ಮಿಕ ಇಲಾಖೆಯಲ್ಲಿ ಖಾಸಗಿ ವಾಹನ ಚಾಲಕರ ಅಪಘಾತ ವಿಮಾ ಕುರಿತು ಸರಿಯಾಗಿ ಮಾಹಿತಿ ನೀಡುತ್ತಿಲ್ಲವೆಂದು ಸಾರ್ವಜನಿಕರ ಆರೋಪದ ಮೇರೆಗೆ ಸಂಬಂಧಪಟ್ಟ ಇಲಾಖೆ ಅಧಿಕಾರಿ ಸಂಗೀತ ಬೆನಕೊಪ್ಪ ಅವರನ್ನು ತರಾಟೆಗೆ ತೆಗೆದುಕೊಂಡರು.
ಸಾರ್ವಜನಿಕ ಸೇವೆ ಮಾಡಲೆಂದು ಸರ್ಕಾರ ನಿಮ್ಮನ್ನು ನೇಮಕ ಮಾಡಿದೆ. ಆದರೆ, ನೀವು ಮಾಡುವುದೇನು ಎಂದು ಕಾರ್ಮಿಕ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಕೊಣ್ಣೂರು ಗ್ರಾಮದ ಹೇಮಂತ ಚಿನಿವಾಲರ ಜಮೀನಿನಲ್ಲಿ ಏತ ನೀರಾವರಿ ಪೈಪುಗಳನ್ನು ಅಳವಡಿಸಿ ಜಮೀನು ನಾಶ ಮಾಡಿದ್ದು, ಇದಕ್ಕೆ ಪರಿಹಾರ ಬಂದಿಲ್ಲ. ಮೇಲಾಗಿ ನಾನು ಲೋಕಾಯುಕ್ತರಿಗೆ ಮನವಿ ಸಲ್ಲಿಸಿದರೂ ನಮಗೆ ನ್ಯಾಯ ಸಿಕ್ಕಿಲ್ಲ ಎಂಬ ದೂರಿಗೆ ಸ್ಪಂದಿಸಿದ ಲೋಕಾಯುಕ್ತರು, ಅವರ ಜಮೀನುಗಳಲ್ಲಿ ಪೈಪ್ ಅಳವಡಿಕೆಯಿಂದ ಆಗಿರುವ ಹಾನಿಗೆ ಪರಿಹಾರ ನೀಡಬೇಕೆಂದು ನೀರಾವರಿ ನಿಗಮದ ಅಧಿಕಾರಿಗಳಿಗೆ ಸೂಚನೆನೀಡಿದರು.
ತಾಲೂಕಿನ ರೈತ ಸಮುದಾಯ ಕನಕ ಬಿ.ಟಿ. ಹತ್ತಿ ಬೆಳೆ ನಷ್ಟವಾಗಿದ್ದು, ಈ ಕುರಿತು ರೈತರು ಕೃಷಿ ಇಲಾಖೆಗೆ ಮನವಿ ಸಲ್ಲಿಸಿದರೂ ನಿಜವಾದ ನಷ್ಟ ಹೊಂದಿದ ರೈತರಿಗೆ ಕೃಷಿ ಅಧಿಕಾರಿಗಳು ಪರಿಹಾರ ನೀಡಿಲ್ಲ. ಯಾರು ಅವರಿಗೆ ಹಣ ನೀಡಿದ್ದಾರೆ ಅವರಿಗೆ ಮಾತ್ರ ಪರಿಹಾರ ನೀಡಿದ್ದಾರೆಂದು ಆರೋಪಿಸಿ ಲೋಕಾಯುಕ್ತರಿಗೆ ದೂರು ನೀಡಿದರು.
ಇಲಾಖೆಗಳಿಗೆ ಭೇಟಿ: ಪಟ್ಟಣದ ಮಿನಿ ವಿಧಾನಸೌಧಕ್ಕೆ ತೆರಳಿ ಕಾರ್ಮಿಕ, ಅರಣ್ಯ, ಸಮಾಜ ಕಲ್ಯಾಣ, ಶಿಕ್ಷಣ ಇಲಾಖೆ, ಕಂದಾಯ ಇಲಾಖೆ ಸಿಬ್ಬಂದಿ ಆವರಣದ ವ್ಯವಸ್ಥೆ ಕುರಿತು ಲೋಕಾಯುಕ್ತರು ಪರಿಶೀಲನೆ ಮಾಡಿದರು. ತಹಸೀಲ್ದಾರ್ ವಿ.ಎಚ್. ಕೊತಬಾಳ, ಪುರಸಭೆ ಅಧಿಕಾರಿ ಎಸ್. ರಾಜಶೇಖರ, ನೀರಾವರಿ ಅಧಿಕಾರಿ ರಮೇಶ ನಾರಾಯಣಕರ, ಗುರುಪ್ರಸಾದ, ಬಿ.ಎ. ನದಾಫ, ಪಿಎಸ್ಐ ಗೀತಾ ಬಿರಸಲ್, ಎ.ಎಸ್.ಐ. ನಾರಾಯಣ ಚೂರಿ, ನಾರಾಯಣ ತಾಯಣ್ಣವರ ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

