ಗದಗ

ಟ್ರಾಫಿಕ್ ಪೊಲೀಸ್ ಠಾಣೆ ನಿರ್ಮಿಸಿ

Published On :

ಗದಗ-ಬೆಟಗೇರಿ ಅವಳಿ ನಗರದ ಹೆಸರಿನಲ್ಲಿ ಒಂದು ಟ್ರಾಫಿಕ್ ಪೊಲೀಸ್ ಠಾಣೆ ಇರುವುದು ನಿಜ. ಆದರೆ ಅದರ ಕಾರ್ಯವ್ಯಾಪ್ತಿ ಕೇವಲ ಗದಗದಲ್ಲಿ ಮಾತ್ರ. ಇತ್ತಿಚಿಗೆ ಅವಳಿ ನಗರ ಪ್ರತಿಯೊಂದು ದಿಕ್ಕಿನಲ್ಲಿ ಬೆಳೆಯುತ್ತಿದೆ. ಆದರೆ ಬೆಟಗೇರಿಯಲ್ಲಿ ಟ್ರಾಫಿಕ್ ಪೊಲೀಸರು ಇರುವುದಿಲ್ಲ. ಹೆಚ್ಚಿನ ಶಾಲಾ, ಕಾಲೇಜು, ರೇಲ್ವೆ ನಿಲ್ದಾಣ ಇರುವುದು ಬೆಟಗೇರಿಯಲ್ಲಿ. ಬೆಟಗೇರಿಯಲ್ಲಿ ಯಾವೊಬ್ಬ ಟ್ರಾಫಿಕ್ ಪೊಲೀಸರಾಗಲಿ ಅಥವಾ ಟ್ರಾಫಿಕ್ ಪಿಎಸ್‌ಐ ಗಳಾಗಲಿ ಕಾಣುವುದು ವಿರಳ. ಆದ್ದರಿಂದ ಬೆಟಗೇರಿ ಭಾಗಕ್ಕೆ ವಿಶೇಷವಾಗಿ ಟ್ರಾಫಿಕ್ ಪೊಲೀಸ್ ಠಾಣೆ ಸ್ಥಾಪಿಸುವುದು ಅವಶ್ಯಕ.
ಗದಗ-ಬೆಟಗೇರಿ ಅವಳಿ ನಗರದ ಸಂಚಾರ ಜನದಟ್ಟನೆ ಅನುಗುಣವಾಗಿ ಇರಬೇಕಾದ ಸಿಬ್ಬಂದಿ ಇರುವುದಿಲ್ಲ. ಶೇ. 60ರಷ್ಟು ಗದಗ ಹಾಗೂ ಶೇ. 40ರಷ್ಟು ಬೆಟಗೇರಿಗೆ ಸಿಬ್ಬಂದಿ ನೇಮಿಸಬೇಕು. ಜತೆಗೆ ಉಪಟ್ರಾಫಿಕ್ ಪೊಲೀಸ್ ಠಾಣೆ ಬೆಟಗೇರಿ ಪೊಲೀಸ್ ಠಾಣೆ ಹೊಂದಿಕೊಂಡು ಪ್ರಾರಂಭಿಸಬೇಕು. ಈ ಕುರಿತು ಸಾರ್ವಜನಿಕರ ಸಭೆ ಕರೆದು ಅವರ ಸಲಹೆ ಪಡೆದು ನೇಮಿಸಬೇಕು.
                        -ಗಣೇಶಸಿಂಗ್ ಬ್ಯಾಳಿ
                 ಬೆಟಗೇರಿ ನಿವಾಸಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.