ಮಹಿಳಾ ಸಬಲೀಕರಣ ಆವಶ್ಯಕ: ಪ್ರೊ. ಸುಮನ್
ಗದಗ: ಹಿಂಸೆ, ಅತ್ಯಾಚಾರ, ಮಾನಸಿಕ ಕಿರುಕುಳ, ಆರ್ಥಿಕ ದುಸ್ಥಿತಿಗಳಿಂದ ವಿವಿಧ ಹಂತಗಳಲ್ಲಿ ಶೋಷಣೆಗೊಳ್ಳುತ್ತಿರುವ ಮಹಿಳೆಯರ ಸಬಲೀಕರಣ ಇಂದಿನ ಅವಶ್ಯಕತೆಯಾಗಿದೆ ಎಂದು ಎಚ್ಸಿಇಎಸ್ ಪದವಿ ಕಾಲೇಜಿನ ಉಪನ್ಯಾಸಕಿ ಸುಮನ್ ಪಾಟೀಲ ಹೇಳಿದರು. ಅವರು ಸ್ಥಳೀಯ ರೋಟರಿ ಸಂಸ್ಥೆಯಲ್ಲಿ ಈಚೆಗೆ ಹಮ್ಮಿಕೊಂಡಿದ್ದ ಸಾಪ್ತಾಹಿಕ ಸಭೆಯಲ್ಲಿ ಸಮಾಜದಲ್ಲಿ ಮಹಿಳೆಯರ ಸ್ಥಾನಮಾನ ಕುರಿತು ವಿಶೇಷ ಉಪನ್ಯಾಸ ನೀಡಿದರು.
ಪ್ರಾಚಿನ ಕಾಲದಲ್ಲಿ ಮಹಿಳೆಯರಿಗೆ ಉತ್ತಮ ಸ್ಥಾನಮಾನವಿತ್ತು. ಆದರೆ ಮಧ್ಯಯುಗದಲ್ಲಿ ಸ್ತ್ರೀ ಶೋಷಣೆಗೆ ಒಳಗಾದಳು. ಆಧುನಿಕ ಯುಗದಲ್ಲಿ ಮಹಿಳೆ ಆರ್ಥಿಕವಾಗಿ ಸ್ವಾವಲಂಬಿಯಾಗಿದ್ದರೂ ಸಂಪೂರ್ಣವಾಗಿ ಶೋಷಣೆಯಿಂದ ಮುಕ್ತಳಾಗಿಲ್ಲ. ಚಿಕ್ಕ ಬಾಲಕಿಯರ ಮೇಲಿನ ಅತ್ಯಾಚಾರ ಪ್ರಕರಣಗಳು ನಾಗರಿಕ ಸಮಾಜ ತಲೆತಗ್ಗಿಸುವಂತೆ ಮಾಡುತ್ತಿವೆ. ವಿವಿಧ ರೀತಿಯಲ್ಲಿ ಮಹಿಳೆಯರಿಗೆ ಕಿರುಕುಳ ನೀಡಲಾಗುತ್ತಿದೆ. ಮಹಿಳೆಯೇ ಮಾನಸಿಕ ಧೈರ್ಯ ತಂದು ಸಬಲರಾಗಬೇಕು. ಮಹಿಳೆಯರನ್ನು ಎಲ್ಲ ರೀತಿಯಿಂದಲೂ ಸಬಲೀಕರಣಗೊಳಿಸಬೇಕು ಎಂದರು. ಅಧ್ಯಕ್ಷತೆ ವಹಿಸಿದ್ದ ರೋಟರಿ ಸಂಸ್ಥೆ ಅಧ್ಯಕ್ಷ ಸುಭಾಸ ಬಬಲಾದಿಯವರ ಪ್ರಾಸ್ತಾವಿಕ ಮಾತನಾಡಿದರು. ಶಾಂತಾ ಗೌಡರ, ಎಸ್.ಕೆ. ನಾಲವತ್ತವಾಡಮಠ, ಡಾ. ಎಸ್.ಎಲ್. ಹಕ್ಕಾಪಕ್ಕಿ, ಪಿ.ಎಸ್. ಉಗಲಾಟ, ಎ.ಡಿ. ಪಾಟೀಲ, ಎ.ಎಂ. ಗೌಡರ, ಚನ್ನವೀರ ಹುಣಸಿಕಟ್ಟಿ, ವಿಶ್ವನಾಥ ಯಳಮಲಿ, ಭೂಷಣ ಶಹಾ, ಎಂ.ಎಂ. ಹೊಳ್ಳಿಯವರ, ಎಸ್.ಎಫ್. ಬೆನಕಣ್ಣವರ, ದತ್ತಪ್ರಸನ್ನ ಪಾಟೀಲ ಉಪಸ್ಥಿತರಿದ್ದರು. ಹೊಸಳ್ಳಿಮಠ ಪರಿಚಯಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

