ಸಂಸ್ಕಾರ ಕೊರತೆಯಿಂದ ಅಪರಾಧ ಹೆಚ್ಚಳ
ರೋಣ: ಮನುಷ್ಯರಲ್ಲಿ ಸಂಸ್ಕಾರ ಕೊರತೆಯಿಂದ ಅಪರಾಧ ಕೃತ್ಯಗಳು ಹೆಚ್ಚುತ್ತಿವೆ. ಇದಕ್ಕೆ ಕಡಿವಾಣ ಹಾಕಲು ಉತ್ತಮ ಸಂಸ್ಕಾರ, ಉತ್ತಮ ಆಲೋಚನೆ, ಸಾಮರಸ್ಯ, ಪರೋಪಕಾರ ಗುಣ ಜತೆಗೆ ಜೀವನ ಶೈಲಿ ಬದಲಾಗಬೇಕು ಎಂದು ಮಾಜಿ ಸಂಸದ ಆರ್.ಎಸ್. ಪಾಟೀಲಹೇಳಿದರು.
ಅವರು ಸೋಮವಾರ ಪಟ್ಟಣದ ರಾಜೀವಗಾಂಧಿ ಶಿಕ್ಷಣ ಸಂಸ್ಥೆಯ ಆಸ್ಪತ್ರೆ ಆವರಣದಲ್ಲಿ ಮಾತೋಶ್ರೀ ಬಸಮ್ಮನವರು ಸಂಗನಗೌಡ ಪಾಟೀಲ ಅವರ 10ನೇ ಪುಣ್ಯಸ್ಮರಣೋತ್ಸವ ಅಂಗವಾಗಿ ದಿ. ಎಸ್.ಆರ್. ಪಾಟೀಲ ಪ್ರತಿಷ್ಠಾನ, ಜಿಲ್ಲಾ ಅಂಧತ್ವ ನಿಯಂತ್ರಣ ಸಂಸ್ಥೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ರಾಜೀವಗಾಂಧಿ ಶಿಕ್ಷಣ ಸಂಸ್ಥೆಯ ಬಸವಜ್ಯೋತಿ ನೇತ್ರಾಲಯ ಸಂಯುಕ್ತವಾಗಿ ಸಂಘಟಿಸಿದ್ದ ಉಚಿತ ನೇತ್ರ ತಪಾಸಣೆ ಮತ್ತು ಗಾಜು ಬಿಂದು ಅಳವಡಿಕೆ ಶಿಬಿರ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ಮನುಷ್ಯ ಸಂಸ್ಕಾರ ಸಂಪನ್ನನಾಗಿ ನಡೆಯದಿದ್ದಲ್ಲಿ ಮುಂಬರುವ ದಿನಗಳಲ್ಲಿ ಜಗತ್ತು ಅಧೋಗತಿಯತ್ತ ತಳ್ಳಲ್ಪಡುತ್ತದೆ. ಆದ್ದರಿಂದ ಸಂಘ, ಸಂಸ್ಥೆಗಳು ಮನುಷ್ಯನಲ್ಲಿ ಉತ್ತಮ ಸಂಸ್ಕಾರ, ವಿವೇಚನೆ ಮೂಡಿಸುವಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು. ಉತ್ತಮವಾದುದನ್ನು ಮನುಷ್ಯ ಯೋಚಿಸಬೇಕು. ಇಂದ್ರಿಯಗಳಲ್ಲಿ ಶ್ರೇಷ್ಠವಾದ ಕಣ್ಣಿನ ರಕ್ಷಣೆ ಮತ್ತು ಆರೋಗ್ಯದ ಕುರಿತು ಸದಾ ಕಳಕಳಿ ಹೊಂದಬೇಕು. ಜಾಗತಿಕ ಸೌಂದರ್ಯ ನೋಡಿ ಆನಂದಿಸುವಲ್ಲಿ ಕಣ್ಣುಗಳು ಸಹಕಾರಿ. ಆದ್ದರಿಂದ ಆಗಾಗ್ಗೆ ಕಣ್ಣಿನ ಪರೀಕ್ಷೆ ಅತಿ ಮುಖ್ಯವಾಗಿದೆ ಎಂದರು. ಡಾ. ಕೆ.ಬಿ. ಧನ್ನೂರ ಮಾತನಾಡಿದರು. ಜಿಂದಾಲ ಕಂಪನಿಯ ವೈದ್ಯಕೀಯ ವ್ಯವಸ್ಥಾಪಕ ಡಾ. ವಿಶ್ವಾನಾಥ ಪಲ್ಲೇದ, ಸಾನ್ನಿಧ್ಯ ವಹಿಸಿದ್ದ ಗುಲಗಂಜಿ ಮಠದ ಗುರುಪಾದ ಸ್ವಾಮೀಜಿ, ಶಾಸಕ ಜಿ.ಎಸ್. ಪಾಟೀಲ ಮಾತನಾಡಿದರು. ಸಮಾರಂಭದಲ್ಲಿ ಜಿ.ಪಂ. ಸದಸ್ಯ ಡಾ. ಆರ್.ಬಿ. ಬಸವರಡ್ಡೇರ, ಮಿಥುನ ಪಾಟೀಲ, ಡಾ. ಆರ್.ಜಿ. ಮಲ್ಲಾಪುರ, ಡಾ. ಎಲ್.ಆರ್. ರಡ್ಡೇರ, ಡಾ. ಎಸ್.ಬಿ. ಲಕ್ಕೋಳ, ತಾಲೂಕು ವೈದ್ಯಾಧಿಕಾರಿ ಡಾ. ಬಿ.ಎಸ್. ಭಜಂತ್ರಿ, ವೀರಭದ್ರಪ್ಪ ಹೊಸಮನಿ, ಸಿ.ಕೆ. ಸುಂಕದ, ವಿ. ಆರ್. ಗುಡಿಸಾಗರ, ಪರಶುರಾಮ ಅಳಗವಾಡಿ, ಡಾ. ಐ.ಬಿ. ಕೊಟ್ಟೂರಶೆಟ್ರ, ಬಿ.ಎಫ್. ಚೇಗರಡ್ಡಿ ಉಪಸ್ಥಿತರಿದ್ದರು. ವಿ.ಬಿ. ಸೋಮನಕಟ್ಟಿಮಠ ನಿರೂಪಿಸಿದರು. ಪ್ರಮೀಳಾ ತೋಟಗಂಟಿ ಸ್ವಾಗತಿಸಿದರು. ಪಾಟೀಲ ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

