ಗದಗ

ಮುಂಡರಗಿಯಲ್ಲಿ 3 ತಿಂಗಳಿಗೊಮ್ಮೆ ಸಭೆ

Published On :

ಮುಂಡರಗಿ: ಈ ಭಾಗದ ಅಭಿವೃದ್ಧಿ ದೃಷ್ಟಿಯಿಂದ ಇನ್ನು ಮುಂದೆ ಪ್ರತಿ 3 ತಿಂಗಳಿಗೊಮ್ಮೆ ಮುಂಡರಗಿಯಲ್ಲಿ ಸಭೆ ನಡೆಸುವುದಾಗಿ ಹಾವೇರಿ ಲೋಕಸಭೆ ಸದಸ್ಯ ಶಿವಕುಮಾರ ಉದಾಸಿ ಹೇಳಿದರು.
ಪಟ್ಟಣದ ಜ. ಅನ್ನದಾನೀಶ್ವರ ಕಲ್ಯಾಣ ಕೇಂದ್ರದಲ್ಲಿ ಭಾನುವಾರ ಜರುಗಿದ ಬಿಜೆಪಿ ಕಾರ್ಯಕರ್ತರಿಗೆ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದರು. ಈ ಹಿಂದೆ ನಾನು 4 ವರ್ಷ ಸಂಸದನಾಗಿದ್ದಾಗ ಗದಗ ಜಿಲ್ಲೆಯ ಶಿರಹಟ್ಟಿ, ರೋಣ ಹಾಗೂ ಗದಗದಲ್ಲಿ ನಮ್ಮ ಪಕ್ಷದವರೇ ಆದ 3 ಬಿಜೆಪಿ ಶಾಸಕರಿದ್ದರು. ನನ್ನಿಂದ ಮಾಡಲು ಆಗದ ಅನೇಕ ಅಭಿವೃದ್ಧಿ ಕೆಲಸಗಳನ್ನು ಅವರು ಮಾಡುತ್ತಾರೆಂದು ನಾನು ಈ ಕ್ಷೇತ್ರದ ಕುರಿತು ಸ್ವಲ್ಪ ಕಾಳಜಿ ಮಾಡುವುದನ್ನು ಕಡಿಮೆ ಮಾಡಿರಬಹುದು. ಮುಂಡರಗಿ-ಹಡಗಲಿ, ಹರಿಹರ ಮಾರ್ಗವಾಗಿ ಬೆಂಗಳೂರಿಗೆ ರೇಲ್ವೆ ಮಾರ್ಗ ಸೇರಿದಂತೆ ಈ ಭಾಗದಲ್ಲಿರುವ ಅನೇಕ ಬೇಡಿಕೆಗಳಿಗೆ ಸ್ಪಂದಿಸಿ ಮುಂದಿನ 5 ವರ್ಷಗಳ ಕಾಲ ಪ್ರಾಮಾಣಿಕವಾಗಿ ಸೇವೆ ಮಾಡುವೆ ಎಂದರು.
ಜಿಲ್ಲಾ ಬಿಜೆಪಿ ಅಧ್ಯಕ್ಷ ಕಳಕಪ್ಪ ಬಂಡಿ ಮಾತನಾಡಿ, ದೇಶದಲ್ಲಿಯೇ ಈ ಬಾರಿ ಮೋದಿ ಸರ್ಕಾರಕ್ಕೆ ಎಲ್ಲ ಮತದಾರರು ಆಶೀರ್ವದಿಸಿದ್ದಾರೆ. ಈ ಫಲಿತಾಂಶದಿಂದ ಗದಗ ಜಿಲ್ಲೆ ಬಿಜೆಪಿ ಕಾರ್ಯಕರ್ತರಿಗೆ ಹೊಸ ಚೈತನ್ಯ ಮೂಡಿದೆ ಎಂದರು. ಮಾಜಿ ಶಾಸಕ ರಾಮಣ್ಣ ಲಮಾಣಿ, ಜಿಪಂ ಸದಸ್ಯ ಹೇಮಗಿರೀಶ ಹಾವಿನಾಳ, ಸಾನ್ನಿಧ್ಯ ವಹಿಸಿದ್ದ ಜ. ನಾಡೋಜ ಡಾ. ಅನ್ನದಾನೀಶ್ವರ ಶ್ರೀಗಳು ಮಾತನಾಡಿದರು. ಜಿಪಂ ಉಪಾಧ್ಯಕ್ಷೆ ಸುನಿತಾ ಹಳ್ಳೆಪ್ಪವರ, ಜಿಪಂ ಸದಸ್ಯ ಬೀರಪ್ಪ ಬಂಡಿ, ರಮೇಶ ಮುಂದಿನಮನಿ, ಕರಬಸಪ್ಪ ಹಂಚಿನಾಳ, ಎಂ.ಎಸ್. ಕರಿಗೌಡ್ರ, ದೇವಪ್ಪ ಕಂಬಳಿ, ರಂಗಪ್ಪ ಕ್ಯಾದಿಗಿಹಳ್ಳಿ, ಎಸ್.ವಿ. ಪಾಟೀಲ, ಸೀತಾರಾಮರಾಜು, ರಜನೀಕಾಂತ ದೇಸಾಯಿ, ಆರ್.ಎಂ. ತಪ್ಪಡಿ, ಮುದ್ಲಿಂಗಪ್ಪ ಕೊರ್ಲಹಳ್ಳಿ, ಸೋಮಣ್ಣ ಚೆನ್ನಳ್ಳಿ, ಅಂದಪ್ಪ ಮೇಟಿ, ಜೋತಿ ಹಾನಗಲ್, ಅಂದಪ್ಪ ಉಳ್ಳಾಗಡ್ಡಿ, ಮೋಹನ್ ದೇಸಾಯಿ, ಶ್ರೀನಿವಾಸ ಅಬ್ಬಿಗೇರಿ, ಶಿವನಗೌಡ ಗೌಡ್ರ, ಪುರಸಭೆ ಸದಸ್ಯೆ ಕೊಟ್ರಮ್ಮ ಇಟಗಿ, ಪರುಶುರಾಮ ಕರಡಿಕೊಳ್ಳ, ಸುರೇಶ ಮಾಳೇಕೊಪ್ಪ, ಶಂಕರಗೌಡ ಪಾಟೀಲ, ಹೇಮಾವತಿ ಅಬ್ಬಿಗೇರಿ, ರೇಖಾ ದೇಸಾಯಿ, ಬಸವರಾಜ ಮುಂಡವಾಡ, ಬಸವರಾಜ ಬಿಳಿಮಗ್ಗದ, ಬಿ.ಕೆ. ಪಾಟೀಲ, ರವೀಂದ್ರಗೌಡ ಪಾಟೀಲ, ಮಂಜುನಾಥ ಇಟಗಿ, ರಾಮಚಂದ್ರ ಗಾರವಾಡ, ಆನಂದ ಬನ್ನಿಕೊಪ್ಪ, ಪರುಶುರಾಮ ಸುಣಗಾರ, ಮಂಜುನಾಥ ಮುಧೋಳ ಉಪಸ್ಥಿತರಿದ್ದರು. ದೇವಪ್ಪ ಇಟಗಿ ಸ್ವಾಗತಿಸಿದರು. ಬಸವರಾಜ ಸಸಿಮಠ ನಿರೂಪಿಸಿದರು. ರಮೇಶ ಹುಳಕಣ್ಣವರ ವಂದಿಸಿದರು.

--

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.