ಗದಗ

ಯಾವ ಆಧಾರದಡಿಕ್ಷೇತ್ರದಲ್ಲಿ ಸ್ಪರ್ಧೆ?

Published On :

ಲಕ್ಷ್ಮೇಶ್ವರ: ಜೆಡಿಎಸ್‌ನಿಂದ ಸ್ಪರ್ಧಿಸಿರುವ ಮಾಜಿ ಶಿಕ್ಷಣ ಸಚಿವರ ಮಗ ಹಾಗೂ ಕಾಂಗ್ರೆಸ್ ಅಭ್ಯರ್ಥಿಗಳ ಸಾಧನೆಯಾದರೂ ಏನು? ಈ ಕ್ಷೇತ್ರದಲ್ಲಿ ಯಾವ ಆಧಾರದ ಮೇಲೆ ಸ್ಪರ್ಧೆಗಿಳಿದಿದ್ದಾರೆ ಎನ್ನುವುದನ್ನು ಪದವೀಧರ ಮತದಾರರಿಗೆ ತಿಳಿಸಬೇಕಾಗಿದೆ ಎಂದು ಪಶ್ಚಿಮ ಪದವೀಧರ ಕ್ಷೇತ್ರ ಬಿಜೆಪಿ ಅಭ್ಯರ್ಥಿ ಎಸ್.ವಿ. ಸಂಕನೂರ ಪ್ರಶ್ನಿಸಿದರು.
ಸೋಮವಾರ ಸಂಜೆ ಪಟ್ಟಣದ ಸಾಲೇಶ್ವರ ಕಲ್ಯಾಣ ಮಂಟಪದ ಆವರಣದಲ್ಲಿ ನಡೆದ ಪದವೀಧರ ಮತದಾರರ ಸಭೆಯಲ್ಲಿ ಅವರು ಮಾತನಾಡಿದರು.
ಕ್ಷೇತ್ರದ ಸಂಪೂರ್ಣ ಪರಿಚಯ ಹೊಂದಿದ್ದು, ನಾನು ಮಾಡಿದ ಕಾರ್ಯಗಳ ಆಧಾರದ ಮೇಲೆ ಮತಯಾಚಿಸುತ್ತಿದ್ದೇನೆ. ಅಂಥ ಯಾವುದೇ ಅರ್ಹತೆಗಳನ್ನು ವಿರೋಧ ಪಕ್ಷಗಳ ಅಭ್ಯರ್ಥಿಗಳು ಹೊಂದಿಲ್ಲ ಎಂದು ಟೀಕಿಸಿದರು. ಪದವೀಧರರು ಮತದಾನ ಮಾಡುವಾಗ ಅನೇಕ ತಪ್ಪುಗಳನ್ನು ಮಾಡುವ ಮೂಲಕ ಮತಗಳನ್ನು ಕುಲಗೇಡಿಸುತ್ತಿರುವುದು ಹೆಚ್ಚು ಟೀಕೆಗೆ ಗುರಿಯಾಗುತ್ತಿದೆ. ಈ ನಿಟ್ಟಿನಲ್ಲಿ ವಿದ್ಯಾವಂತರಾದ ತಾವು ಮತದಾನ ಮಾಡುವಾಗ ಪ್ರಾಶಸ್ತ್ಯದ ಮತಗಳನ್ನು ನೀಡುವ ಬಗ್ಗೆ ಎಲ್ಲರಲ್ಲಿ ತಿಳಿವಳಿಕೆ ನೀಡುವಂತಹ ಕೆಲಸ ಮಾಡಬೇಕಾಗಿದೆ ಎಂದರು.
ಅನ್ನದಾನಿ ಹಿರೇಮಠ, ಬಿಜೆಪಿ ಅಧ್ಯಕ್ಷ ನಾಗರಾಜ ಕುಲಕರ್ಣಿ, ಹಿರಿಯ ಮುಖಂಡ ಚಂಬಣ್ಣ ಬಾಳಿಕಾಯಿ, ನಗರ ಘಟಕದ ಅಧ್ಯಕ್ಷ ಬಸವರಾಜ ಅರಳಿ, ಪುರಸಭೆ ಸದಸ್ಯ ರಾಮಣ್ಣ ರಿತ್ತಿ, ಗಂಗಾಧರ ಮೆಣಸಿನಕಾಯಿ, ಬಿ.ಎಚ್. ಮುದಗಲ್, ಚಂದ್ರು ಹಂಪಣ್ಣವರ, ಪಿ.ಬಿ. ಬಂಡಿ, ಪಿ.ಎಸ್. ಕಾಶಪ್ಪನವರ, ಜಿ.ಪಿ. ಕಟ್ಟಿಮನಿ, ಶ್ರೀಕಾಂತ ಪೂಜಾರ ಇತರರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.