ಪರಿಸರ ನಾಶವಾದರೆ ಆಪತ್ತು ಖಂಡಿತ: ಆದಿ
ಗದಗ: ನಮ್ಮ ಸುತ್ತಮುತ್ತಲಿನ ಅಮೂಲ್ಯ ಗಾಳಿ, ನೀರು, ನೆಲ, ಜೀವ ವೈವಿಧ್ಯತೆಯ ವಾತಾವರಣ ಮುಖ್ಯವಾಗಿ ಪಂಚಭೂತಗಳಿಂದ ಆವರಿಸಿರುವ ಪರಿಸರವನ್ನು ನಾವು ರಕ್ಷಣೆ ಮಾಡದಿದ್ದರೆ ಪರಿಸರ ಮಾಲಿನ್ಯದಿಂದ ಮಾನವ ಕುಲಕ್ಕೆ ಆಪತ್ತು ಕಟ್ಟಿಟ್ಟ ಬುತ್ತಿ ಎಂದು ಹೊಂಬಳ ಸರ್ಕಾರಿ ಕಾಲೇಜಿನ ಪ್ರಾಧ್ಯಾಪಕ ಎಸ್.ಎನ್. ಆದಿ ಹೇಳಿದರು.
ಇತ್ತೀಚೆಗೆ ಜ. ತೋಂಟದಾರ್ಯ ಮಠದಲ್ಲಿ ಜರುಗಿದ 2175ನೇ ಶಿವಾನುಭವದಲ್ಲಿ ನಡೆದ ಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ಪರಿಸರ ಸಂರಕ್ಷಣೆ ನಮ್ಮ ಕರ್ತವ್ಯ ಕುರಿತು ಉಪನ್ಯಾಸ ನೀಡಿದರು. ನದಿಯ ನೀರು, ಸುತ್ತಮುತ್ತಲಿನ ವಾಯು, ರಸಾಯನಿಕ ಗೊಬ್ಬರ, ಪ್ಲಾಸ್ಟಿಕ್ಗಳ ಮಿತಿಮೀರಿದ ಬಳಕೆಯು ಭೂಮಿಯನ್ನು ವಿಷಮಯವಾಗಿಸಲಾಗುತ್ತಿದೆ. ಪ್ರತಿಯೊಬ್ಬರು ಜಾಗೃತಿ ಹೊಂದಿ ಪರಿಸರ ಸಂರಕ್ಷಣೆಗೆ ಮುಂದಾಗಬೇಕಿದೆ ಎಂದರು.
ನಿಖಿತಾ ರೇಣುಕಗೌಡ ಅವರಿಂದ ಸಂಗೀತ ಕಾರ್ಯಕ್ರಮ, ಜಯಮ್ಮ ಹೂಲಿ ಅವರಿಂದ ಧರ್ಮಗ್ರಂಥ ಪಠಣ ಹಾಗೂ ಶಾರದಾ ರಾಜಶೇಖರ ಶಿರೂರ ಧರ್ಮಚಿಂತನೆ ಜರುಗಿತು. ಸಂಘದ ಉಪಾಧ್ಯಕ್ಷ ಶೇಖಣ್ಣ ಕಳಸಾಪೂರಶೆಟ್ರ, ಕಾರ್ಯದರ್ಶಿ ಕೆ.ಪಿ. ಗುಳಗೌಡ್ರ, ಸಹಕಾರ್ಯದರ್ಶಿ ವೀರಣ್ಣ ಜ್ಯೋತಿ, ಕೋಶಾಧ್ಯಕ್ಷ ಚಂದ್ರಶೇಖರ ಅರಳಿ ಉಪಸ್ಥಿತರಿದ್ದರು. ಲಿಂಗಾಯತ ಪ್ರಗತಿಶೀಲ ಸಂಘದ ಅಧ್ಯಕ್ಷ ಪ್ರಭುದೇವ ಹಿರೇಮಠ ಸ್ವಾಗತಿಸಿದರು. ಸಂಘದ ಉಪಾಧ್ಯಕ್ಷೆ ರತ್ನಕ್ಕ ಪಾಟೀಲ ನಿರ್ವಹಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

