ಉದ್ಘಾಟನೆಗೊಳ್ಳದ ಸಾರ್ವಜನಿಕ ಗ್ರಂಥಾಲಯ
- ಶರಣು ಸೊಲಗಿ
ಕನ್ನಡಪ್ರಭ ವಾರ್ತೆ, ಮುಂಡರಗಿ, ಜೂ. 19
ಮುಂಡರಗಿ ಪಟ್ಟಣದ ವಾರ್ಡ್ ನಂಬರ್ 9ರಲ್ಲಿ ಪುರಸಭೆಯ ಎಸ್ಎಫ್ಸಿ ಯೋಜನೆ ಅನುದಾನದ ಶೇ. 22.75ರ ಅನುದಾನದಲ್ಲಿ ನಿರ್ಮಾಣಗೊಂಡಿರುವ ನೂತನ ಗ್ರಂಥಾಲಯದ ಕಟ್ಟಡ ನಿರ್ಮಾಣಗೊಂಡು 2 ವರ್ಷ ಕಳೆದರೂ ಜನಪ್ರತಿನಿಧಿಗಳು ಹಾಗೂ ಪುರಸಭೆ ಅಧಿಕಾರಿಗಳ ನಿರ್ಲಕ್ಷ್ಯತನದಿಂದಾಗಿ ಇದುವರೆಗೂ ಉದ್ಘಾಟನೆಗೊಂಡಿಲ್ಲ.
ಸುಮಾರು 4 ಲಕ್ಷ ವೆಚ್ಚದಲ್ಲಿ ಪ್ರದೇಶದ ಸುತ್ತಲಿನ ನಿವಾಸಿಗಳಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ನಿರ್ಮಾಣಗೊಂಡಿರುವ ಗ್ರಂಥಾಲಯಕ್ಕೆ ಇದುವರೆಗೂ ಉದ್ಘಾಟನೆ ಭಾಗ್ಯ ದೊರೆಯದಿರುವುದು ವಿಪರ್ಯಾಸ.
ಸುತ್ತಲೂ ಗಲೀಜು: ಪುರಸಭೆಯಿಂದ ನಿರ್ಮಿಸಿರುವ ನೂತನ ಗ್ರಂಥಾಲಯ ಕಟ್ಟಡದ ಸುತ್ತ ಸಾಕಷ್ಟು ಗಲೀಜು ತುಂಬಿದ್ದು, ಎದುರಿನಲ್ಲಿಯೇ ಚರಂಡಿ, ಕಸದ ತೊಟ್ಟಿ, ನಲ್ಲಿ ನೀರು ಹರಿದು ಬರುವುದು ಎಲ್ಲವೂ ಇದೆ. ಅಲ್ಲಿ ಮೂಗು ಮುಚ್ಚಿಕೊಂಡು ನಡೆದಾಡುವ ವಾತಾವರಣ ನಿರ್ಮಾಣವಾಗಿದೆ. ಗ್ರಂಥಾಲಯ ಕಟ್ಟಡದ ಎದುರಿನಲ್ಲೇ ಸರ್ಕಾರಿ ಜಾಹೀರಾತಿನ ನಾಮಫಲಕ ನಿಲ್ಲಿಸಲಾಗಿದೆ. ಅದರಿಂದ ಸಂಪೂರ್ಣ ಕಟ್ಟಡದ ಮುಂದಿನ ಭಾಗ ಮರೆಯಾಗಿದೆ. ಇಷ್ಟೆಲ್ಲ ಇದ್ದರೂ ಅಧಿಕಾರಿಗಳು ಮಾತ್ರ ಗಮನಹರಿಸುತ್ತಿಲ್ಲ ಎನ್ನುವುದು ಸಾರ್ವಜನಿಕರ ಆರೋಪ.
ಅಧಿಕಾರಿಗಳ ನಿರ್ಲಕ್ಷ್ಯ: ಕೊಪ್ಪಳ ವೃತ್ತದ ಪ್ರಮುಖ ರಸ್ತೆಗೆ ಅಂಟಿಕೊಂಡಿರುವ ಪಟ್ಟಣದ 9ನೇ ವಾರ್ಡ್ನ ಸಾವಿರಾರು ಸಾರ್ವಜನಿಕರು ಅಲ್ಲಿಂದಲೇ ತಿರುಗಾಡುತ್ತಾರೆ. ಪ್ರಮುಖ ರಸ್ತೆ ಪಕ್ಕದಲ್ಲೇ ನೂತನ ಗ್ರಂಥಾಲಯ ಕಟ್ಟಣ ಸಂಪೂರ್ಣ ಹಾಳಾಗಿದ್ದು, ಅಲ್ಲಿನ ವಾತಾವರಣದಲ್ಲಿ ವಾಸನೆ ಹೆಚ್ಚಿದ್ದರೂ ಅಲ್ಲಿಂದಲೇ ಓಡಾಡುವ ಪುರಸಭೆ ಅಧಿಕಾರಿಗಳಾಗಲಿ ಅಥವಾ ಸಂಬಂಧಪಟ್ಟ ಜನಪ್ರತಿನಿಧಿಗಳಾಗಲಿ ತಿರುಗಿ ನೋಡುತ್ತಿಲ್ಲ.
ರು. 4 ಲಕ್ಷ ಖರ್ಚು ಮಾಡಿ ಕಟ್ಟಡ ಕಟ್ಟಿರುವ ಪುರಸಭೆ ಗ್ರಂಥಾಲಯ ಉದ್ಘಾಟನೆ ಕಿಂಚಿತ್ತೂ ಯೋಚಿಸುತ್ತಿಲ್ಲ.
ಈ ಕುರಿತು ಸುಮಾರು 8ರಿಂದ 10 ಬಾರಿ ಹಿಂದಿನ ಹಾಗೂ ಇಂದಿನ ಮುಖ್ಯಾಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಪ್ರಯೋಜನವಾಗುತ್ತಿಲ್ಲ ಎಂದು ವಾರ್ಡ್ನ ಯುವಕ ಸಂತೋಷ ಹಿರೇಮನಿ ಕನ್ನಡಪ್ರಭಕ್ಕೆ ವಿವರಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

