ಹಲ್ಲುಗಳ ಪಾತ್ರ ಪ್ರಮುಖ: ಡಾ. ಶಂಕರ
ಕನ್ನಡಪ್ರಭ ವಾರ್ತೆ, ಗಜೇಂದ್ರಗಡ, ಜೂ. 20
ಮನುಷ್ಯನ ಅಂಗಾಂಗಳಲ್ಲಿ ಹಲ್ಲುಗಳ ಪಾತ್ರ ಪ್ರಾಮುಖ್ಯವಾದದ್ದು, ಈ ನಿಟ್ಟಿನಲ್ಲಿ ದಂತಗಳ ರಕ್ಷಣೆಗಾಗಿ ವೈದ್ಯರ ಸಲಹೆ ಜತೆಗೆ ಆಗಾಗ್ಗೆ ತಪಾಸಣೆ ಮಾಡಿಸಿಕೊಳ್ಳುವುದು ಸೂಕ್ತ ಎಂದು ದಂತವೈದ್ಯ ಡಾ. ಟಿ. ಶಂಕರ ಹೇಳಿದರು.
ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಪಿ.ಎಂ. ನಾಡಗೌಡ ದಂತ ಕಾಲೇಜಿನ ವೈದ್ಯ ತಂಡ ಹಾಗೂ ರೋಟರಿ ಸಂಸ್ಥೆಯಿಂದ ಈಚೆಗೆ ಜರುಗಿದ ಉಚಿತ ದಂತ ಹಾಗೂ ತಪಾಸಣೆ ಶಿಬಿರದಲ್ಲಿ ಮಾತನಾಡಿದರು.
ಬಾಲ್ಯದಿಂದ ಯೌವನದವರೆಗೂ ನಿತ್ಯ ಎಚ್ಚರಿಕೆಯಿಂದ ಹಲ್ಲುಗಳನ್ನು ಜೋಪಾನ ಮಾಡಿಕೊಳ್ಳಬೆಕಾದುದು ಎಲ್ಲರ ಹೊಣೆ. ಹಲ್ಲುಗಳ ರಕ್ಷಣೆಗೆ ವಿಶೇಷ ಗಮನಹರಿಸಬೇಕಾಗುತ್ತದೆ. ಆಹಾರ ಸರಿಯಾಗಿ ಜೀರ್ಣವಾಗುವಂತೆ ಅಗಿಯಲು, ದವಡೆ ಬೆಳವಣಿಗೆ ಹೊಂದಲು, ಮುಖ ಚನ್ನಾಗಿ ಕಾಣಲು, ಸಮರ್ಪಕ ಮಾತನಾಡಲು ಹಲ್ಲುಗಳ ಕುರಿತು ಎಚ್ಚರಿಕೆ ವಹಿಸಬೇಕು. ಪ್ಲೋರೈಡ್‌ಯುಕ್ತ ಟೂಥ್‌ಪೆಸ್ಟ್ ಬಳಸಿ ನಿತ್ಯ ಕನಿಷ್ಠ 2 ಬಾರಿ ಬ್ರಷ್ ಮಾಡಬೇಕು. ನೀವೂ ಉತ್ತಮ ನಗು ಮತ್ತು ಆರೋಗ್ಯಕರ ಹಲ್ಲು ಹೊಂದಬೇಕಾದರೆ ಉತ್ತಮ ದಂತ ರಕ್ಷಣೆ ಹವ್ಯಾಸಗಳನ್ನು ಮುಂದುವರಿಸಬೇಕೆಂದರು.
ಜಗದೀಶ ಕನಕೇರಿ, ಮಲ್ಲಿಕಾರ್ಜುನ ಹಿರೇಮನಿ, ಶಿದ್ದಪ್ಪ ಬಂಡಿ, ಶೇಖರ ಅಂಗಡಿ, ಗಿರೀಶ ವರ್ಣೇಕರ, ಗಿರೀಶ ಕುಲಕರ್ಣಿ, ಆರ್.ಎಂ. ರಾಯಬಾಗಿ, ಎಚ್.ಎನ್. ನಾಯ್ಕರ, ಮೋಹನ ಜೀರೆ, ಸಮೂಹ ದಂತ ಆರೋಗ್ಯ ಸಂಸ್ಥೆ ಮುಖ್ಯಸ್ಥ ಡಾ. ಪರಪ್ಪ ಸಜ್ಜನ, ಡಾ. ಪ್ರವೀಣ ರಾಮದುರ್ಗ ಇತರರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

