ಗದಗ

ತಾಲೂಕಾಡಳಿತಕ್ಕೆ ಜಿಲ್ಲಾಧಿಕಾರಿ ತರಾಟೆ

Published On :

ಕನ್ನಡಪ್ರಭ ವಾರ್ತೆ, ಶಿರಹಟ್ಟಿ, ಜೂ. 21
ಶನಿವಾರ ಅನಿರೀಕ್ಷಿತ ಭೇಟಿ ನೀಡಿದ ಜಿಲ್ಲಾಧಿಕಾರಿ ಎನ್.ಎಸ್. ಪ್ರಸನ್ನಕುಮಾರ ತಹಸೀಲ್ದಾರ್ ಕಚೇರಿಯಲ್ಲಿರುವ ಸಬ್ ರಿಜಿಸ್ಟ್ರಾರ್, ಆಹಾರ ಇಲಾಖೆ, ಅಟಲ್‌ಜೀ ಜನಸ್ನೇಹಿ ಕೇಂದ್ರ, ಭೂಮಾಪನ ಇಲಾಖೆ, ಪಟ್ಟಣ ಪಂಚಾಯಿತಿ ಕಚೇರಿಗೆ ತೆರಳಿ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಬಿಸಿ ಮುಟ್ಟಿಸಿ ಪಪಂನ ಒಬ್ಬ ವಾಲ್ವ್‌ಮನ್‌ನ್ನು ಸ್ಥಳದಲ್ಲಿಯೇ ಅಮಾನತುಗೊಳಿಸಿ ಆದೇಶ ಹೊರಡಿಸಿ ಇತರೆ ಸಿಬ್ಬಂದಿಗೆ ಬಿಸಿ ಮುಟ್ಟಿಸಿದ್ದಾರೆ.
ಬಳಿಕ ಡಿಸಿ ಮಾತನಾಡಿ, ಆಹಾರ ಇಲಾಖೆಯ ಪಡಿತರ ಚೀಟಿ ವಿತರಣೆಯಲ್ಲೂ ಭ್ರಷ್ಟಾಚಾರ ನಡೆಯುತ್ತಿರುವ ಬಗ್ಗೆ ದೂರುಗಳು ಬಂದಿದ್ದು, ಅರ್ಹ ಫಲಾನುಭವಿಗಳಿಗೆ ಪಡಿತರ ಚೀಟಿ ವಿತರಿಸಬೇಕು. ಇಲ್ಲದಿದ್ದರೆ ಸಂಬಂಧಿಸಿದ ಆಹಾರ ಶಿರಸ್ತೇದಾರ್ ಹಾಗೂ ಸಿಬ್ಬಂದಿಗೆ ವರ್ಗಾವಣೆ ಮಾಡಲಾಗುವುದು ಎಂದು ಎಚ್ಚರಿಸಿದರು.
ಮೊದಲು ಕಚೇರಿ ಸ್ವಚ್ಛವಾಗಿಟ್ಟುಕೊಳ್ಳಿ, ಎಲ್ಲೆಂದರಲ್ಲಿ ಜಾಡು ಗಟ್ಟಿದೆ. ವೈಯರ್‌ಗಳು ಜೋತು ಬಿದ್ದಿದ್ದು, ಸಿಕ್ಕಲ್ಲಿ ಕಸ ಚಲ್ಲಿರುವುದು, ಅನ್‌ವಾಂಟೆಡ್ ಫೈಲ್ಸ್ ಇತರೆ ವಸ್ತುಗಳನ್ನು ಪ್ಲಾಟ್‌ಫಾರಂನಲ್ಲಿಯೇ ಇಟ್ಟಿರುವುದು ಕಂಡ ಡಿಸಿ ಪ್ರಸನ್ನಕುಮಾರ್ ಇದು ಆಫೀಸ್ ಲಕ್ಷಣವೇ ಅಲ್ಲಾ ಎಂದು ಕೀಪ್ ದಿಸ್ ಆಫೀಸ್ ಕ್ಲೀನ್ ಫಸ್ಟ್ ಎಂದು ತಹಸೀಲ್ದಾರ್‌ಗೆ ಸೂಚಿಸಿದರು.
ಪಪಂ ಭ್ರಷ್ಟಾಚಾರ ಸಿಒಡಿ ತನಿಖೆಗೆ: ಬಳಿಕ ಸ್ಥಳೀಯ ಪಟ್ಟಣ ಪಂಚಾಯಿತಿಗೆ ಭೇಟಿ ನೀಡಿ ಸಿಬ್ಬಂದಿ ವಿಚಾರಿಸಿ ನಂತರ ಹಾಜರಿ ಪುಸ್ತಕ ಪರಿಶೀಲಿಸಿ ಎಲ್ಲ ಸಿಬ್ಬಂದಿ ಕೆಲಸದ ಬಗ್ಗೆ ವಿಚಾರಣೆ ನಡೆಸಿದರು. ನಂತರ ಅನುಪಸ್ಥಿತಿಯಲ್ಲಿದ್ದಂಥ ವಾಲ್ವ್‌ಮನ್ ಸಿ.ಎಸ್. ಹಿರೇಮಠ ಎಂಬುವರನ್ನು ಸ್ಥಳದಲ್ಲೇ ಅಮಾನತು ಆದೇಶ ಹೊರಡಿಸಿದರು.
ನಂತರ ಪಪಂ ಅಧ್ಯಕ್ಷ ನಾಗರಾಜ ಲಕ್ಕುಂಡಿ 10 ತಿಂಗಳಿಂದ ಯಾವುದೇ ಟೆಂಡರ್ ಕರೆದಿಲ್ಲ. ಇದರಿಂದ ಅಭಿವೃದ್ಧಿಗೆ ಹಿನ್ನೆಡೆಯಾಗುತ್ತಿದ್ದು, ಇದನ್ನು ಹೋಗಲಾಡಿಸಬೇಕೆಂದು ವಿನಂತಿಸಿದಾಗ, ತಕ್ಷಣ ಸ್ಪಂದಿಸಿದ ಜಿಲ್ಲಾಧಿಕಾರಿಗಳು ಶೀಘ್ರ ಮುಖ್ಯಾಧಿಕಾರಿ ಹಾಗೂ ಎಂಜಿನಿಯರ್ ನೇಮಕ ಮಾಡಲಾಗುವುದು ಎಂದರು.ಪಪಂ ಸದಸ್ಯ ಸಿ.ಕೆ. ಮುಳಗುಂದ ಪಪಂನಲ್ಲಿ ಒಟ್ಟು ರು.  9 ಕೋಟಿ ಅವ್ಯವಹಾರ ನಡೆದಿದ್ದು, ಇದನ್ನು ಶೀಘ್ರ ಬಯಲಿಗೆಳೆಯಬೇಕೆಂದು ಡಿಸಿ ಅವರಿಗೆ ಒತ್ತಾಯಿಸಿದಾಗ ಈ ಭ್ರಷ್ಟಾಚಾರ ಹೊರ ಹಾಕುವುದಕ್ಕಾಗಿ ಸಿಐಡಿ ತನಿಖೆಗೆ ಆದೇಶ ಮಾಡಲಾಗಿದ್ದು, ತ್ವರಿತಗತಿಯಲ್ಲಿ ಲೋಕಾಯುಕ್ತರಿಗೂ ಆದೇಶ ಮಾಡಲಾಗುವುದು ಎಂದರು. ಅರ್ಹ ಫಲಾನುಭವಿಗಳಿಗೆ ಮನೆ ದೊರಕುವಂತೆ ಕ್ರಮ ತೆಗೆದುಕೊಳ್ಳುವಂತೆ ಅಧ್ಯಕ್ಷರಿಗೆ ಸೂಚಿಸಿದರು.


ಉಪನೋಂದಣಾಧಿಕಾರಿ ಕಚೇರಿಯಲ್ಲಿ ಆಸ್ತಿ ನೋಂದಣಿ ಮಾಡಿಸುವ ಕಾಲಕ್ಕೆ ಹಾಗೂ ಸರ್ಕಾರಕ್ಕೆ ಭರಿಸಬೇಕಾದ ಶುಲ್ಕದಲ್ಲಿ ಕಮೀಷನ್ ಏಜೆಂಟರುಗಳ ಹಾವಳಿಯಿಂದ ಜನತೆ ತತ್ತರಿಸಿದ್ದು, ಇದನ್ನು ಹೋಗಲಾಡಿಸಬೇಕು. ಇಲ್ಲದಿದ್ದರೆ ಬರುವ ದಿನಗಳಲ್ಲಿ ಇಂಥ ಏಜೆಂಟರುಗಳ ಮೇಲೆ ಚೀಟಿಂಗ್ ಕೇಸ್ ದಾಖಲಿಸಿ ಶಿಕ್ಷೆಗೆ ಗುರಿಪಡಿಸಲಾಗುವುದು.
- ಎನ್.ಎಸ್. ಪ್ರಸನ್ನಕುಮಾರ್,
ಜಿಲ್ಲಾಧಿಕಾರಿ, ಗದಗ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.