ಗದಗ

ಸದಸ್ಯೆಯರ ಪತಿ ಹಾಜರ್: ತಾಪಂ ಸಭೆಯಲ್ಲಿ ಗೊಂದಲ

Published On :

ರೋಣ: ಪಟ್ಟಣದ ತಾಪಂ ಸಭಾಭವನದಲ್ಲಿ ಮಂಗಳವಾರ ಜರುಗಿದ ತಾಪಂ ಪ್ರಗತಿ ಪರಿಶೀಲನೆ ಸಭೆಗೆ ತಾಪಂ ಮಹಿಳಾ ಸದಸ್ಯರ ಪತಿ ಮಹಾಶಯರು ಹಾಜರಾಗಿದ್ದು, ಇದರಿಂದ ಸಭೆಯಲ್ಲಿ ವಿವಿಧ ಅಧಿಕಾರಿಗಳು ಕೆಲ ಹೊತ್ತು ಮುಜುಗರ ಅನುಭವಿಸುವುದರ ಜತೆಗೆ ಸಭೆಯು ಕೆಲ ಕಾಲ ಗೊಂದಲದ ಗೂಡಾಗಿ ಮಾರ್ಪಟ್ಟಿತು.
ನಿಗದಿಯಂತೆ 11 ಗಂಟೆಗೆ ಸಭೆ ಪ್ರಾರಂಭವಾಗಬೇಕಿತ್ತು. ವಿವಿಧ ಇಲಾಖೆಯ ಅಧಿಕಾರಿಗಳು, ಅಧ್ಯಕ್ಷ, ಉಪಾಧ್ಯಕ್ಷರು, ಸದಸ್ಯರು ಹಾಜರಿದ್ದರು. ಆದರೆ, ತಾಪಂ ಇಒ ಎಸ್.ಎಂ. ಪಿಡಶೆಟ್ಟಿ ಅವರು ಕಾಯುವಂತೆ ಮಾಡಿದರು. ಇದು ಸದಸ್ಯರನ್ನು ಕೆರಳುವಂತೆ ಮಾಡಿತು.  
ಪತಿ ಹಾಜರ್ ಏಕೆ: ಬಿಜೆಪಿಯ ಕೆಲ ತಾಪಂ ಮಹಿಳಾ ಸದಸ್ಯರ ಪತಿ ಮಹಾಶಯರು ಸಭೆಗೆ ಆಗಮಿಸಿದರು. ಇದನ್ನು ಗಮನಿಸಿದ ತಾಪಂ ಇಒ, ಇವರೇಕೆ ಸಭೆಗೆ ಬಂದಿದ್ದಾರೆ ಎಂದು ತಾಪಂ ವ್ಯವಸ್ಥಾಪಕ ಪಿ.ಎಂ. ಗೋದಿಗನೂರರನ್ನು ಕೇಳಿದರು. ಆಗ ಬಿಜೆಪಿ ತಾಪಂ ಸದಸ್ಯ ಶಿವಕುಮಾರ ಶೀಲಗುಂದ, ರಾಮಕೃಷ್ಣ ಚೌಹಾನ್, ಶಿವಕುಮಾರ ಸಾಲಮನಿ ಮಾತನಾಡಿ, ಜೂನ್ 9ರಂದು ವಿವಿಧ ಇಲಾಖೆ ಪ್ರಗತಿ ಪರಿಶೀಲನೆ ಸಭೆಗೆ ನರಗುಂದ ಶಾಸಕ ಬಿ.ಆರ್. ಯಾವಗಲ್, ಅವರ ಹಿಂಬಾಲಕರು, ಕಾಂಗ್ರೆಸ್ ಕಾರ್ಯಕರ್ತರು ಭಾಗವಹಿಸಿದ್ದರು.
ಅಧಿಕಾರಿಗಳಿಗೆ ಕಾರ್ಯಕರ್ತರೆ ಮನ ಬಂದಂತೆ ಪ್ರಶ್ನೆ ಕೇಳಿದ್ದಾರೆ. ಸಭೆಯ ನಿಯಮ ಉಲ್ಲಂಘಿಸಿದ ಅವರ ಮೇಲೆ ಯಾವ ಕ್ರಮ ಕೈಗೊಂಡಿದ್ದೀರಿ? ಅವರಿಗೇಕೆ ಸಭೆಗೆ ಅವಕಾಶ ಕೋಟ್ಟಿದ್ದಿರಿ ಎಂದರು.ಆಗ ಇಒ ಎಸ್.ಎಂ. ಪಿಡಶೆಟ್ಟಿ ಮಾತನಾಡಿ, ಶಾಸಕರಿಗೆ ನಾನು ಆದೇಶ ಮಾಡಲು ಬರಲ್ಲ. ಅದು ಅವರಿಗೆ ಗೊತ್ತಾಗಬೇಕು. ಶಾಸಕರೊಂದಿಗೆ ಏಕಾಏಕಿ ಒಳಗೆ ಬಂದಿದ್ದರಿಂದ ನನಗೆ ಏನೂ ಹೇಳಲು ತಿಳಿಯಲಿಲ್ಲ. ಆ ಕುರಿತು ವಿಷಾದಿಸುತ್ತೇನೆ. ಇನ್ನು ಮುಂದೆ ಎಚ್ಚರ ವಹಿಸಲಾಗುವುದು ಎಂದರು.
ಬಳಿಕ ಸಭೆಯಲ್ಲಿದ್ದ ಬಿಜೆಪಿಯ ಕೆಲ ಮಹಿಳಾ ಸದಸ್ಯೆಯರ ಗಂಡಂದಿರು ಎದ್ದು ನಿಂತು, ಅವರಿಗೆ ಯಾವ ರೀತಿಯಾಗಿ ಅವಕಾಶ ಕೊಟ್ಟಿದ್ದೀರೋ, ಅದೇ ರೀತಿಯಾಗಿ ನಮಗೂ ಅವಕಾಶ ಕೊಡಿ, ಕೆಲ ವಿಷಯ ಸಭೆಯಲ್ಲಿ ಚರ್ಚಿಸುತ್ತೇವೆ, ಅಲ್ಲಿಯವರೆಗೂ ಸಭೆಯಿಂದ ಹೊರ ನಡೆಯಲ್ಲಾ ಎಂದು ಪಟ್ಟುಹಿಡಿದರು.
ಗೈರಾದವರ ಮೇಲೆ ಕ್ರಮ ಕೈಗೊಳ್ಳಿ: 3 ವರ್ಷಗಳಿಂದ ಕೆಲ ಇಲಾಖೆ ಅಧಿಕಾರಿಗಳು ಸಭೆಗೆ ಬಾರದೆ ಗೈರಾಗುತ್ತಿದ್ದಾರೆ. ಅಂಥವರ ಮೇಲೆ ಕ್ರಮ ಜರುಗಿಸುವಂತೆ ಒತ್ತಾಯಿಸುತ್ತ ಬರಲಾಗಿದ್ದರೂ ಯಾವುದೇ ಕ್ರಮಕ್ಕೆ ಏಕೆ ಮುಂದಾಗಿಲ್ಲ ಎಂದು ತಾಪಂ ಇಒ ಅವರನ್ನು ಸದಸ್ಯ ಶಿವಕುಮಾರ ಸಾಲಮನಿ, ಶಿವಾನಂದ ಕಮತಿ, ಕಾಂಗ್ರೆಸ್ ಸದಸ್ಯ ಅಂದಪ್ಪ ಬಿಚ್ಚೂರ, ಮಾಲಾನಬಿ ಗಡಾದ, ರಾಮಕೃಷ್ಣ ಚೌಹಾನ ಪ್ರಶ್ನಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.